ಗ್ರಾಮ ಪಂಚಾಯತಿಯಲ್ಲಿ ಅಂಧಾ ದರ್ಬಾರ್ – ಖರ್ಚಾದ 4.98 ಕೋಟಿ ರೂಪಾಯಿಗಳಿಗೆ ಬಿಲ್ಲುಗಳೇ ಇಲ್ಲ. 4 ಕೋಟಿಗೂ ಅಧಿಕ ಹಣ ಖಲ್ಲಾಸ್! ಲೆಕ್ಕ ಪರಿಶೋಧನಾ ವರದಿಯಲ್ಲಿ ಪಂಚಾಯತಿ ಆಡಳಿತ ವ್ಯವಸ್ಥೆಯ ದುರುಪಯೋಗ ಬಹಿರಂಗ.

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಎಲ್ಲೋಡು ಗ್ರಾಮ ಪಂಚಾಯತಿಯಲ್ಲಿ ಅಂಧಾ ದರ್ಬಾರ್ – ಲೆಕ್ಕ ಪರಿಶೋಧನಾ ವರದಿಯಲ್ಲಿ ಪಂಚಾಯತಿ ಆಡಳಿತ ವ್ಯವಸ್ಥೆಯ ದುರುಪಯೋಗ ಬಹಿರಂಗ. 4 ಕೋಟಿಗೂ ಅಧಿಕ ಹಣ ಖಲ್ಲಾಸ್!
ವಿವಿಧ ಕಾಮಗಾರಿಗಳ ಹೆಸರಲ್ಲಿ ಖರ್ಚು ಮಾಡಿದ ಹಣಕ್ಕೆ ಲೆಕ್ಕವೇ ಇಲ್ಲ. 2020 ರಿಂದ 23ರ ವರೆಗಿನ ಖರ್ಚಾದ 4.98 ಕೋಟಿ ರೂಪಾಯಿಗಳಿಗೆ ಬಿಲ್ಲುಗಳೇ ಇಲ್ಲ. ಲೆಕ್ಕಾ. ಬುಕ್ ಇಲ್ಲದೇ ತಿಂದು ತೇಗಿದ್ದು ಕೋಟಿ ಕೋಟಿ..
15ನೇ ಹಣಕಾಸು, ನರೇಗಾ ಕಾಮಗಾರಿ, ಎಸ್ಸಿ-ಎಸ್ಟಿ ಮೀಸಲು ಹಣ, ಭಿಕ್ಷುಕರ ಹೆಸರಿನಲ್ಲಿ ಮೀಸಲಿಟ್ಟ ಹಣವನ್ನೂ ಬಿಡದೇ ಪಿಡಿಒ, ಅಧ್ಯಕ್ಷರ ದುರುಪಯೋಗ. ಪಿಡಿಒ ಫಣೀಂದ್ರ ಕಾಲಿಟ್ಟ ಕಡೆಯಲೆಲ್ಲ ಭ್ರಷ್ಟಾಚಾರ, ದುರಾಡಳಿತ. ಹಿಂದೆಯೋ ಅಕ್ರಮ ಎಸೆಗಿ ಅಮಾನತಾಗಿದ್ದ ಪಿಡಿಒ ಫಣೀಂದ್ರ. ಈತ ಕಾಲಿಟ್ಟ ಕಡೆಯಲೆಲ್ಲಾ.. ತಿಂದು ತೇಗೋದು ಕೆಲಸ
ಎಲ್ಲೋಡು ಗ್ರಾಮ ಪಂಚಾಯತಿಯಲ್ಲಿ ನಡೆದ ಅಕ್ರಮಗಳಿಗೆ ಎಲ್ಲೇ ಇಲ್ಲ. 2020-21 ನೇ ಸಾಲಿನಿಂದ 23 ರವರೆಗಿನ 3 ವರ್ಷದ ಅವಧಿಯಲ್ಲಿ ಖರ್ಚು ಮಾಡಿದ 4ಕೋಟಿ 98 ಲಕ್ಷ ರೂಪಾಯಿಗಳಿಗೆ ಬಿಲ್ಲುಗಳೇ ಇಲ್ಲ. ಮಾಹಿತಿ ಹಕ್ಕುನಡಿಯಲ್ಲಿ ಯಾವುದೇ ದಾಖಲೆಗಳು ಲಭ್ಯವಿಲ್ಲ ಎಂದು ವರದಿ.
ಮೂರು ವರ್ಷದಲ್ಲಿ ಕರ್ತವ್ಯ ನಿರ್ವಹಿಸಿದ ಪಿಡಿಒ ಫಣೀಂದ್ರ, ಕೃಷ್ಣಾರೆಡ್ಡಿ ಮತ್ತು ಅಧ್ಯಕ್ಷರಾದ ಅರುಣಮ್ಮ, ಬ್ರಹ್ಮಾನಂದರೆಡ್ಡಿ ಅವಧಿಯಲ್ಲಿ ಅಕ್ರಮದ ಆರೋಪ. ಅಕ್ರಮಗಳಿಗೆ ಎಲ್ಲೋಡು ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯಿಂದಲೂ ಸಾಥ್.
ಖರ್ಚು ಮಾಡಿದ ಹಣಕ್ಕೆ ಲೆಕ್ಕವೂ ಇಲ್ಲ.. ಕಾಮಗಾರಿಗಳ ದಿಕ್ಕು ಇಲ್ಲ. ಆಡಳಿಯ ವರ್ಗದ ದರ್ಬಾರ್ ಗೆ ಕಡಿವಾಣವೇ ಇಲ್ಲ. ತಿಂದು ತೇಗಿದ ಸಾರ್ವಜನಿಕರ ಹಣವನ್ನ ವಾಪಸ್ ಕಟ್ಟಿಸುವಂತೆ ಒತ್ತಾಯ.


