ಸಮಗ್ರ ಅಭಿವೃದ್ಧಿಗೆ ಶ್ರಮ: ಹುಕ್ಕೇರಿ ಪುರಸಭೆ ಸಭಾ ಭವನದಲ್ಲಿ ಜರುಗಿದ ಪ್ರಗತಿ ಪರಶೀಲನೆ ಸಭೆ ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ಹುಕ್ಕೇರಿ ನಗರ ಅಭಿವೃದ್ಧಿಗೆ ಉತ್ತೆಜನ ನೀಡಿ ಕಾರ್ಯ ಮಾಡಬೇಕು. ಅಲ್ಲದೇ ಹುಕ್ಕೇರಿ ಸಮಗ್ರ ಅಭಿವೃದ್ಧಿಗೆ ಹೆಚ್ಚು ಶ್ರಮಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಶನಿವಾರ ಹುಕ್ಕೇರಿ ಪುರಸಭೆ ಸಭಾ ಭವನದಲ್ಲಿ ಜರುಗಿದ ಪ್ರಗತಿ ಪರಶೀಲನೆ ಸಭೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ, ಹಲವು ವರ್ಷಗಳಿಂದ ಈ ಸಂಘದ ಆಡಳಿತ ಮಂಡಳಿಚುಕ್ಕಾಣಿ ಹಿಡಿದವರು ಇನ್ನೆರಡು ತಿಂಗಳಲ್ಲಿ ಬರುವ ಸಂಘದ ಚುನಾವಣೆ ತಾಲೀಮು ಪ್ರಾರಂಭಿಸಿದ್ದಾರೆ.
ಅವರನ್ನುಎದುರಿಸಬೇಕಾದರೆ ಆಡಳಿತ ಮಂಡಳಿಯ ಅಧ್ಯಕ್ಷರಿಗೆ ೧೦ ನಿರ್ದೇಶಕರು ಸಹಕಾರ ಕೊಡಬೇಕು ಎಂದರು.

ಸರಕಾರಕ್ಕೆ ವಿದ್ಯುತ್ ಸಹಕಾರಿ ಸಂಘದವರು ದಂಡದ ರೂಪದಲ್ಲಿ ಕೊಡಬೇಕಾದ ೨೦೦ ಕೋಟಿ ರೂ ಬಾಕಿ ಮನ್ನಾ ಮಾಡಲು ಈಗಾಗಲೇ ಇಂಧನಸಚಿವರಾದ ಕೆ.ಜೆ.ಜಾರ್ಜಅವರ ಜೊತೆಗೆ ಮಾತನಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದರು.
ಸಂಘದವ್ಯಾಪ್ತಿಯಗ್ರಾಮಪಂಚಾಯತಿಗಳಿಂದಬರಬೇಕಾಗಿದ್ದ ೧೨ ಕೋಟಿರೂಬಾಕಿಬಿಲ್ನಲ್ಲ್ಲಿ ೪ ಕೋಟಿರೂತುಂಬಿಸಲಾಗಿದೆ.ಬಾಕಿಉಳಿದಿರುವ ೮ ಕೋಟಿ ರೂ ಗಳನ್ನು ಸಹ ಆದಷ್ಟು ಬೇಗ ವಸೂಲಾತಿಗೆ ಸಹಕರಿಸಲು ಜಿ.ಪಂಸಿ.ಇ.ಒಅವರಿಗೆ ತಿಳಿಸಿದ್ದೇನೆ ಎಂದರು.

ನಿರಂತರ ವಿದ್ಯುತ್ಯೋಜನೆಯನ್ನು ಪ್ರಾಯೋಗಿಕವಾಗಿ ಎಲಿಮುನ್ನೋಳಿ ಗ್ರಾಮಕ್ಕೆ ಅಳವಡಿಸಲಾಗುತ್ತಿದ್ದುಇದರ ಜತೆಗೆ ಶಿಂಧೆವಾಡಿ ಮತ್ತುಇಂಗಳಿ ಗ್ರಾಮದಲ್ಲೂ ಶೀಘ್ರದಲ್ಲಿ ಅಳವಡಿಸುತ್ತೇವೆ. ಮುಂಬರುವ ದಿನಗಳಲ್ಲಿಸಂ ಘದ ವ್ಯಾಪ್ತಿಯ ಗ್ರಾಮಗಳ ಯೀಯೋಜನೆಗೆ ಚಾಲನೆ ನೀಡುವುದಾಗಿ ತಿಳಿಸಿದರು. ಖಾಸಗಿ ಕಂಪನಿಗಳಿಂದ ಕಡಿಮೆ ದರದಲ್ಲಿ ವಿದ್ಯುತ್ ಖರೀದಿಸಿ ಗ್ರಾಹಕರಿಗೆ ನೀಡುವ ಚಿಂತನೆ ಮಾಡಲಾಗಿದೆ. ಒಟ್ಟಾರೆ ಈ ಸಂಘದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪ್ರಮುಖವಾಗಿ ಸರ್ವೆ ನಂಬರ 116 ಸೇರಿದಂತೆ ಹೋಸ ಬಡಾವಣೆಗಳಲ್ಲಿ ಮನೆ ನಿರ್ಮಿಸಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲಾಗಿದೆ ಆದರೆ ಅನಧಿಕೃತ ವಾಗಿದ್ದರಿಂದ ಪುರಸಭೆಗೆ ಯಾವದೆ ಆದಾಯ ಪ್ರಯೋಜನೆ ಯಾಗುತ್ತಿಲ್ಲಾ ಇದರಿಂದ ಕೋಟ್ಯಾಂತರ ರೂಪಾಯಿ ಆದಾಯ ತಪ್ಪಿದೆ, ಅದಕ್ಕಾಗಿ ನ್ಯಾಯಾಲಯದ ಪ್ರಕರಣಗಳನ್ನು ತಕ್ಷಣ ಪರಿಹರಿಸಲು ಗಮನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೇರಾ ಕಾಯಿದೆ ಉಲ್ಲಂಘೀಸಿ ನಿರ್ಮಿಸಿರುವ ಬಡಾವಣೆಗಳಿಗೆ ತಕ್ಷಣ ನೋಟಿಸ್ ಕೋಟ್ಟು ಮಾರಾಟಕ್ಕೆ ತಡೆಹಿಡಿಯಲು ಆದೇಶಿಸಿದರು. ಹುಕ್ಕೇರಿ ನಗರದ ಕೋರ್ಟ ಸರ್ಕಲ್ ಬಳಿ ಇರುವ ಬೆಳವಿ ರಸ್ತೆಯ ಅತಿಕ್ರಮಣವನ್ನು ತೆರವು ಗೊಳಿಸಲು ನಿರ್ದೆಶಿಸಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ ಮತ್ತು ಸಂಘದ ನಿರ್ದೇಶಕ ಶಶಿರಾಜ ಪಾಟೀಲ ಮಾತನಾಡಿ. ರೈತರಿಗೆ ಬಹಳಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಯವರು ಬದಲಾವಣೆ ಮಾಡಿದ್ದಾರೆ. ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗಾಗಿ ಯಾರ ಮನೆಬಾಗಿಲಿಗೂ ಹೋಗಿ ಕಾಯಬೇಕಾಗಿಲ್ಲ. ಆಡಳಿತ ಮಂಡಳಿಯವರೇ ನೇರವಾಗಿ ನಿಮ್ಮ ಸಮಸ್ಯೆ ಆಲಿಸಿ ಪರಿಹರಿಸುತ್ತಾರೆಂದರು. ಸಂಘದ ಸ್ಥಾಪನೆಯ ರೂವಾರಿದಿ.ಅಪ್ಪಣ್ಣ ಗೌಡರ ಕನಸನ್ನು ನನಸು ಮಾಡುವುದೇ ಈಗಿನ ಮಂಡಳಿಯದ್ದಾಗಿದೆ ಎಂದರು.

ಇದೇ ವೇಳೆ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಸುಮಾರು 150 ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಖಾಯಂ ನೇಮಕಾತಿ ಆದೇಶ ಪತ್ರಗಳನ್ನು ಸಚಿವ ಸತೀಶ್ ಜಾರಕಿಹೊಳಿ ವಿತರಿಸಿದರು. ಈ ವೇಳೆ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೇಕರ, ಕುನಾಲ ಪಾಟೀಲ, ಜೋಮಲಿಂಗ ಪಟೋಳಿ, ಈರಪ್ಪಾಬಂಜಿರಾಮ, ಬಸಗೌಡ ಮಗೆನ್ನವರ, ಸೋಮಲಿಂಗ ಪಾಟೀಲ, ಪುರಸಭೆ ಅಧ್ಯಕ್ಷ ಇಮ್ರಾನ್ಮೋಮಿನ್, ಮುಖಂಡರಾದ ಮೌನೇಶ ಪೋತದಾರ, ರಿಷಬ್ ಪಾಟೀಲ ಮತ್ತಿತರರಿದ್ದರು. ಸಂಘದವ್ಯವಸ್ಥಾಪಕನಿರ್ದೇಶಕ ರವೀಂದ್ರ ಪಾಟೀಲಸ್ವಾಗತಿಸಿದರು. ಸ್ಥಾನಿಕ ಅಭಿಯಂತರ ನೇಮಿನಾಥ ಖೇಮಲಾಪೂರೆ ನಿರೂಪಿಸಿದರು. ನಿರ್ದೇಶಕರ ವೀಂದ್ರಹಿಡಕಲ್ವಂದಿಸಿದರು.


