FACT CHECK : ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು.! ಇದೀಗ RBI ಸ್ಪಷ್ಟನೆ ನೀಡಿದೆ.

ನವದೆಹಲಿ : ಶೀಘ್ರವೇ 500 ರೂ. ಮುಖಬೆಲೆಯ ನೋಟುಗಳು ರದ್ದಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದೀಗ RBI ಸ್ಪಷ್ಟನೆ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾರ್ಚ್ 2026 ರ ವೇಳೆಗೆ 500 ರೂ. ನೋಟುಗಳ ಚಲಾವಣೆಯನ್ನು ನಿಲ್ಲಿಸಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳುವ ವೈರಲ್ ಆಗಿರುವ ವಾಟ್ಸಾಪ್ ಸಂದೇಶವು ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿದೆ.
ಈ ಹೇಳಿಕೆಯನ್ನು ಈಗ ಅಧಿಕೃತವಾಗಿ ಸುಳ್ಳು ಮತ್ತು ದಾರಿತಪ್ಪಿಸುವಂತಿದೆ ಎಂದು ತಳ್ಳಿಹಾಕಲಾಗಿದೆ.
“ಹಲವು ಬಾರಿ ಫಾರ್ವರ್ಡ್ ಮಾಡಲಾದ” ಈ ಸಂದೇಶವು, ಸೆಪ್ಟೆಂಬರ್ 30 ರೊಳಗೆ ಶೇ. 75 ರಷ್ಟು ಎಟಿಎಂಗಳಿಂದ ಮತ್ತು ಮಾರ್ಚ್ 31, 2026 ರೊಳಗೆ ಶೇ. 90 ರಷ್ಟು ಎಟಿಎಂಗಳಿಂದ 500 ರೂ. ನೋಟುಗಳನ್ನು ವಿತರಿಸುವುದನ್ನು ಕ್ರಮೇಣ ನಿಲ್ಲಿಸುವಂತೆ ಆರ್ಬಿಐ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದೆ ಎಂದು ಹೇಳಿದೆ.
ಪತ್ರಿಕಾ ಮಾಹಿತಿ ಬ್ಯೂರೋದ ಫ್ಯಾಕ್ಟ್ ಚೆಕ್ ಘಟಕವು ಈ ಸಂದೇಶವನ್ನು ಸಂಪೂರ್ಣವಾಗಿ ಸುಳ್ಳು ಎಂದು ಕರೆದಿದೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಪಿಐಬಿ ಫ್ಯಾಕ್ಟ್ ಚೆಕ್, ಆರ್ಬಿಐ ಅಂತಹ ಯಾವುದೇ ನಿರ್ದೇಶನವನ್ನು ನೀಡಿಲ್ಲ ಮತ್ತು ರೂ. 500 ರೂ. ನೋಟುಗಳು ಕಾನೂನುಬದ್ಧವಾಗಿ ಉಳಿದಿವೆ ಎಂದು ಸ್ಪಷ್ಟಪಡಿಸಿದೆ.ಇಂತಹ ತಪ್ಪು ಮಾಹಿತಿಗೆ ಬಲಿಯಾಗಬೇಡಿ” ಎಂದು ಪಿಐಬಿ ಸೂಚನೆ ನೀಡಿದೆ. . “ನಂಬುವ ಅಥವಾ ಹಂಚಿಕೊಳ್ಳುವ ಮೊದಲು ಯಾವಾಗಲೂ ಅಧಿಕೃತ ಮೂಲಗಳಿಂದ ಸುದ್ದಿಗಳನ್ನು ಪರಿಶೀಲಿಸಿ” ಎಂದು ಅವರು ಎಚ್ಚರಿಸಿದ್ದಾರೆ.
ಈಗ, 500 ರೂ. ಕರೆನ್ಸಿ ನೋಟುಗಳ ಸ್ಥಿತಿ ಅಥವಾ ಚಲಾವಣೆಯಲ್ಲಿ ಯಾವುದೇ ಬದಲಾವಣೆಯನ್ನು ಸೂಚಿಸುವ ಯಾವುದೇ ಅಧಿಕೃತ ಹೇಳಿಕೆ ಅಥವಾ ಸುತ್ತೋಲೆ ಆರ್ಬಿಐನಿಂದ ಬಂದಿಲ್ಲ. ದೇಶಾದ್ಯಂತ ಎಲ್ಲಾ ವಹಿವಾಟುಗಳಿಗೆ ಈ ನೋಟನ್ನು ಸ್ವೀಕರಿಸಲಾಗುತ್ತಿದೆ.