State
ಅರಣ್ಯ ಇಲಾಖೆಯಲ್ಲಿ ಶಿರಸಿ ವಿಭಾಗದ ಹುಲೆಕಲ್ ವಲಯ ಅರಣ್ಯಾಧಿಕಾರಿ ಶಿವಾನಂದ ಎಂ ಎಸ್ ನಿಂಗಾಣಿ ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ ಭಾಜನ

ಶಿರಸಿ ವಿಭಾಗದ ಹುಲೆಕಲ್ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ ಭಾಜನ
ಅರಣ್ಯ ಇಲಾಖೆಯಲ್ಲಿ ಸಲ್ಲಿಸುತ್ತಿರುವ ದಿಟ್ಟ ಹಾಗೂ ದೈರ್ಯತನದ ಸೇವೆಗೆ ಮತ್ತು ಅರಣ್ಯ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಪ್ರಾಮಾಣಿಕತನದ ಸೇವೆಗಾಗಿ ಶಿರಸಿ ವಿಭಾಗದ ಹುಲೆಕಲ್ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ ಇವರಿಗೆ ಪ್ರತಿಷ್ಠಿತ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ ಅರಣ್ಯ ಇಲಾಖೆಯ ವಿವಿಧ ಹಂತದ ಕೆಲಸಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ ಪ್ರಧಾನ ಮಾಡುವ ಯೋಜನೆಯ ಪ್ರಸಕ್ತ ವರ್ಷದಲ್ಲಿ ಜಾರಿಯಲ್ಲಿದ್ದು
ಶಿರಸಿ ಪ್ರಾದೇಶಿಕ ಅರಣ್ಯ ವಿಭಾಗ ಹುಲೆಕಲ್ ವಲಯದ ವಲಯ ಅರಣ್ಯಾಧಿಕಾರಿ ಶಿವಾನಂದ ಎಂ ಎಸ್ ನಿಂಗಾಣಿ ಇವರು 14/03/2016ನೇ ಸಾಲಿನ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಆಯ್ಕೆಯಾಗಿದ್ದು 2016ರಿಂದ 2018ರವರೆಗೆ ಕರ್ನಾಟಕ ಅರಣ್ಯ ಅಕಾಡೆಮಿ ಗುಂಗರಗಟ್ಟಿಯಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಯ ತರಬೇತಿಯನ್ನು ಪಡೆದುಕೊಂಡು ನಂತರದಲ್ಲಿ ಹುಣಸೂರ್ ಆನ್ ಚೌಕೂರ್, ಸಿದ್ದಾಪುರ, ಸಿರಸಿ ವಲಯದಲ್ಲಿ ಕಾರ್ಯ ನಿರ್ವಹಿಸಿದ್ದಾರೆ, ಶಿವಾನಂದ ನಿಂಗಾಣಿ ವಲಯ ಅರಣ್ಯಾಧಿಕಾರಿ ಅವರು 250ಕಿಂತ ಹೆಚ್ಚು ಪ್ರಕರಣಗಳನ್ನು ತನಿಖಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಣೆ ಮಾಡಿದ್ದು,
ಇದರಲ್ಲಿ ಪ್ರಮುಖವಾಗಿ ಒಂದು ಕೋಟಿ ಮೌಲ್ಯದ ಸಾಗುವಾನಿ,ಕಿಂದಳ,ಮತ್ತಿ,ದಾಮಣ ಜಾತಿಯ 52ನಾಟಾಗಳು ಹಾಗೂ ಎರಡು ಲಾರಿ ಜಪ್ತಿ ಹಾಗೂ ನಾಲ್ಕು ಆರೋಪಿಗಳ ಬಂಧನ ಮಾಡಿದ್ದು ಈ ಶ್ರೀಗಂಧ ಕಳ್ಳನಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ 50 ಸಾವಿರ ರೂಪಾಯಿ ದಂಡ, ಶಿರಸಿಯಲ್ಲಿ ಕಾರ್ಯ ನಿರ್ವಹಣೆ ಮಾಡುವಾಗ 80 ಕೆಜಿಗೂ ಹೆಚ್ಚು ಶ್ರೀಗಂಧ ಜಪ್ತಿ ಮಾಡಿ 24ಗಂಟೆಗಳಲ್ಲಿ ಭೇದಿಸಿದ ಚಿರತೆ ಸಾವಿನ ಪ್ರಕರಣ,
ಅರಣ್ಯ ಅತಿಕ್ರಮಣ ತಡೆ, ಅಕ್ರಮವಾಗಿ ದಾಸ್ತಾನು ಮಾಡಿದ 5 ಲಕ್ಷಿ ಮೌಲ್ಯದ ಬೀಟೆ ಸೈಜ್ ಹಲಗೆಗಳ ಜಪ್ತಿ, ವನ್ಯಜೀವಿ ಪ್ರಕರಣಗಳು ಇವರ ಕಾರ್ಯ ಸಾಧನೆಯಲ್ಲಿವೆ ಇವರ ಈ ಸಾಧನೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಮಾಡಲಾಗಿದೆ ಇವರ ತಂದೆ ಶಂಬಾಜಿ ಕೂಡಾ ದಕ್ಷ ಅಧಿಕಾರಿ ಹಾಲಿ ಶಿರಸಿ ಎಸಿಎಫ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.