ಬೆಳಗಾವಿ ಜಿಲ್ಲೆಯಲ್ಲಿ ನೆರೆ ಹಾವಳಿ ಪರಿಸ್ಥಿತಿ ಕಡಿಮೆ ಜಿಲ್ಲಾಧಿಕಾರಿ ಮಹ್ಮದ ರೋಶನ

ಜಿಲ್ಲೆಯಲ್ಲಿ ನೆರೆ ಹಾವಳಿ ಪರಿಸ್ಥಿತಿ ಕಡಿಮೆಯಾಗಿದ್ದು ನಾವು ಮಹಾರಾಷ್ಟ್ರದ ಕೋಲ್ಹಾಪೂರ ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ದಲ್ಲಿದ್ದೇವೆ ಜಿಲ್ಲೆಯಲ್ಲಿ ಮಳೆಯ ಅರ್ಭಟಕ್ಕೆ 2 ಜನ ಸಾವನಪ್ಪಿದ್ದಾರೆ ಅವರ ಕುಟುಂಗಳಿಗೆ ಸ್ವಾಂತನ ಹೇಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹ್ಮದ ರೋಶನ ತಿಳಿಸಿದರು
ಬುಧವಾರ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ನೆರೆ ಪರಿಸ್ಥಿಯಿಲ್ಲ ಮಳೆಯಿಂದ ಇಬ್ಬರು ಸಾವನಪ್ಪಿದ್ದಾರೆ 221 ಮನೆಗಳು ಭಾಗಶಃ ಹಾನಿಯಾಗಿದ್ದು 2 ಮನೆಗಳು ಸಂಪೂರ್ಣವಾಗಿ ಹಾನಿಯಾಗಿದ್ದು ಪರಿಹಾರ ನೀಡಲಾಗಿದೆ 140 ಹೇಕ್ಟರ್ ಕೃಷಿ ಭೂಮಿ ನೆರೆ ಹಾವಳಿಗೆ ತುತ್ತಾಗಿದೆ ಇದರಲ್ಲಿ 5.25 ಹೇಕ್ಟರ್ ತೋಟಗಾರಿಕೆ ಸಂಬಂಧ ಬೆಳಗಳು ಬೆಳೆಗಳು ಹಾಳಾಗಿವೆ ಎಂದರು ಜಿಲ್ಲೆಯಲ್ಲಿರುವ ಹಿಡಕಲ್ ಜಲಾಶಯ ಶೇ. 90 ರಷ್ಟು ನವಿಲು ತೀರ್ಥ ಜಲಾಶಯ ಶೇ 78 ರಷ್ಟು ಹಾಗೂ ಮಾರ್ಕಂಡಯ್ಯ ಜಲಾಶಯ ಶೇ 90 ರಷ್ಟು ಭರ್ತಿಯಾಗಿವೆ ಸಧ್ಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರಜಗೆ ಮಹಾರಾಷ್ಟ್ರದಿಂದ ಬರುವ ನೀರಿನ ಹರಿವು 40 ಕ್ಯೂಸೆಕ್ಸ್ ರಷ್ಟಿದೆ 2 ಲಕ್ಷ ನೀರಿನ ಹರಿವಿದ್ದರೆ ಪ್ರವಾಹದ ಪರಿಸ್ಥಿತಿ ಎದುರಾಗುತ್ತೆ ಅದನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ
ಎಂದ ಅವರು ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ನೀರು ಬಿಡುಗಡೆಯಾದರೆ ನಮ್ಮ ಜಿಲ್ಲೆಯ ನದಿಗಳಿಗೆ ನೀರು ಬರುವುದಕ್ಕೆ ಸುಮಾರು 4-5 ದಿನ ಬೇಕಾಗುತ್ತದೆ ನಮ್ಮ ಜಿಲ್ಲೆಯಿಂದ ಆಲಮಟ್ಟಿ ಡ್ಯಾಂಗೆ ನೀರು ಹೋಗಲು 7 ದಿನಗಳು ಬೇಕಾಗುತ್ತದೆ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಎಷ್ಟು ನೀರು ಬಿಡುಗಡೆ ಮಾಡಲಾಗುತ್ತಿದೆ ಎನ್ನುವುದರ ಕುರಿತು ಕೋಲ್ಹಾಪೂರ ಜಿಲ್ಲಾಧಿಕಾರಿಗಳ ಜೋತೆ ನಾವು ಪ್ರತಿ ದಿನ ಸಂಪರ್ಕದಲ್ಲಿದ್ದೇವೆ ಎಂದು ಜಿಲ್ಲಾಧಿಕಾರಿ ಮಹ್ಮದ ರೋಶನ್ ಹೇಳಿದರು.