ಬೆಳಗಾವಿ: ಆಮ್ ಆದ್ಮಿ ಪಕ್ಷ ತೀವ್ರ ವಿರೋಧ ಒಂದೇ ಸಂಸ್ಥೆಗೆ ಕಲಾ ಮಂದಿರ ವಾಣಿಜ್ಯ ಮಳಿಗೆ ಲೀಜ್…

ಬೆಳಗಾವಿಯ ಕಲಾಮಂದಿರ ವಾಣಿಜ್ಯ ಮಳಿಗೆಯನ್ನು ಒಂದೇ ಸಂಸ್ಥೆಗೆ ಲೀಜ್ ನೀಡುತ್ತಿರುವುದನ್ನು ಆಮ್ ಆದ್ಮಿ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೇವಲ ಒಬ್ಬರಿಗೆ ಮಾತ್ರ ಲೀಜ್ ನೀಡದೇ ಸ್ಥಳೀಯ ವ್ಯಾಪಾರಿ ಮತ್ತು ಉದ್ಯಮಿಗಳಿಗೆ ಸಮಾನ ಅವಕಾಶ ನೀಡಬೇಕೆಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ವಿಜಯ್ ಪಾಟೀಲ್ ಹೇಳಿದರು.

ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯ ಕಲಾ ಮಂದಿರ ವಾಣಿಜ್ಯ ಮಳಿಗೆಯನ್ನು ಕೇವಲ ಒಂದೇ ಸಂಸ್ಥೆಗೆ ಸಂಪೂರ್ಣವಾಗಿ ಲೀಜ್ ನೀಡುವುದು ಸರಿಯಲ್ಲ. ಬದಲಿಗೆ ಸ್ಥಳೀಯ ವ್ಯಾಪಾರಿಗಳಿಗೆ ಮತ್ತು ಉದ್ಯಮಿಗಳಿಗೆ ಸಮಾನ ಅವಕಾಶ ದೊರಕಬೇಕು, ವಿವಿಧ ವ್ಯಾಪಾರಿಗಳಿಗೆ ವ್ಯಾಪಾರಿಕ ಜಾಗಕ್ಕೆ ನ್ಯಾಯಸಮ್ಮತ ಹಾಗೂ ಪಾರದರ್ಶಕ ಪ್ರವೇಶ ದೊರಕಬೇಕು, ಜೊತೆಗೆ ದೊಡ್ಡ ಮಟ್ಟದಲ್ಲಿ ಬಾಡಿಗೆ ಒಪ್ಪಂದ ನೀಡುವದರಿಂದ ತೊಂದರೆಯುಂಟಾಗಬಹುದು. ಆದ್ದರಿಂದ ಕಾನೂನಿನ ಪ್ರಕಾರ ಬಾಡಿಗೆ ಮಾದರಿಯನ್ನು ಅನುಸರಿಸಬೇಕು ಎಂದರು.

ಇನ್ನು ಮತ್ತೋರ್ವ ಪ್ರಮುಖರು ಮಾತನಾಡಿ, ಇಲ್ಲಿ ಯಾವುದೇ ಯಾವುದೇ ರೀತಿಯ ಸಬ್ಲೀಸ್ ನೀಡದಂತೆ ಕಠಿಣ ನಿಯಮಗಳನ್ನು ಜಾರಿಗೆ ತರಬೇಕು. ಜಾಗದ ದುರ್ಬಳಕೆ ಮತ್ತು ಹೆಚ್ಚುವರಿ ಬಾಡಿಗೆಗಳಿಗೆ ಸ್ವೀಕರಿಸಬಾರದು. ಇದರಿಂದ ಸಣ್ಣ ವ್ಯಾಪಾರಿಗಳು ಅವಕಾಶಗಳಿಂದ ಹೊರಗುಳಿಯುತ್ತಾರೆ ಎಂದರು.

Vijay L Patil
District President
AAP Belagavi
Rizwan Makandar
City President
AAP Belagavi
Pavankumar Melage
District General Secretary
Aslam Thashildar
Minority President (South)
Abdul Tavivaf Shaikh
State vice president
Minorities wing
Aam Aadmi party Belagavi.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ಧರು.


