ಆಗಸ್ಟ್ 27 ರಿಂದ ಆರಂಭಗೊಳ್ಳಲಿರುವ ಗಣೇಶೋತ್ಸವದ ಹಿನ್ನೆಲೆ ಮೆರವಣಿಗೆ ಮಾರ್ಗದ ಅಭಿವೃದ್ಧಿ…ಮಹಾನಗರ ಪಾಲಿಕೆಯ ಕಾರ್ಯಕ್ಕೆ ಮಹಾಪೌರ, ಶಾಸಕರಿಂದ ಚಾಲನೆ

ಆಗಸ್ಟ್ 27 ರಿಂದ ಆರಂಭಗೊಳ್ಳಲಿರುವ ಗಣೇಶೋತ್ಸವದ ಹಿನ್ನೆಲೆ ಮೆರವಣಿಗೆ ಮಾರ್ಗದ ಅಭಿವೃದ್ಧಿ ಕಾಮಗಾರಿಗೆ ಬೆಳಗಾವಿಯ ಮಹಾಪೌರರು ಮತ್ತು ಉತ್ತರ ಶಾಸಕರು ಚಾಲನೆಯನ್ನು ನೀಡಿದರು.
ಬೆಳಗಾವಿಯ ಗಣೇಶೋತ್ಸವದ ಮೆರವಣಿಗೆ ಮಾರ್ಗದಲ್ಲಿ ಉಂಟಾದ ತೆಗ್ಗುಗಳನ್ನು ಮುಚ್ಚಿ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಬೆಳಗಾವಿ ಮಹಾನಗರ ಪಾಲಿಕೆಯೂ ಕೈಗೆತ್ತಿಕೊಂಡಿದೆ. ಅಭಿವೃದ್ಧಿಯನ್ನು ಸರಿಯಾಗಿ ಮಾಡುವ ಉದ್ಧೇಶದಿಂದ ರಾತ್ರಿಯ ವೇಳೆ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ಮಹಾಪೌರ ಮಂಗೇಶ್ ಪವಾರ್ ತಿಳಿಸಿದರು.
ಇನ್ನು ಉತ್ತರ ಶಾಸಕ ಆಸೀಫ್ ಸೇಠ್ ಅವರು ಗಣೇಶೋತ್ಸವದ ಹಿನ್ನೆಲೆ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ 27 ಲಕ್ಷ ರೂಪಾಯಿ ವಿಶೇಷ ಅನುದಾನದಲ್ಲಿ ಮೆರವಣಿಗೆ ಮಾರ್ಗವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಗಣೇಶೋತ್ಸವದ ಹಿನ್ನೆಲೆ ವಾಹನಗಳ ಮೆರವಣಿಗೆಗೆ ತೊಂದರೆಯಾಗದಿರಲಿ ಎಂಬ ಉದ್ಧೇಶದಿಂದ ಈ ಕಾಮಗಾರಿಯನ್ನು ರಾತ್ರಿಯ ಹೊತ್ತು ಆರಂಭಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಮಹಾಪೌರರಾದ ವಾಣಿ ಜೋಷಿ, ನಗರಸೇವಕ ಶಿವಾಜೀರಾವ್ ಮಂಡೋಳಕರ, ಮುಝಮ್ಮಿಲ್ ಢೋಣಿ, ಜಯತೀರ್ಥ ಸೌಂದತ್ತಿ, ಮಹಾನಗರ ಪಾಲಿಕೆ ಅಭಿಯಂತರರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದರು