ಕರ್ನಾಟಕ ರಾಜ್ಯ ವಸತಿ ಮತ್ತು ವಕ್ಕ ಸಚಿವರು ಆದ ಬಿ ಜೆಡ್ ಶ್ರೀ ಜಮೀರ್ ಅಹಮದ್ ಖಾನ್ ಅವರಿಗೆ ಅದ್ದೂರಿಯಾಗಿ ಜನ್ಮದಿನದ ಶುಭಾಶಯಗಳನ್ನು ಕೋರಿದ ಛಲವಾದಿ ಮಹಾಸಭಾ ಜಿಲ್ಲಾ ಮುಖಂಡರು ಛತ್ರಪ್ಪ ಛಲವಾದಿ.

ಕರ್ನಾಟಕ ರಾಜ್ಯ ವಸತಿ ಮತ್ತು ವಕ್ಕ ಸಚಿವರು ಆದ ಬಿ ಜೆಡ್ ಶ್ರೀ ಜಮೀರ್ ಅಹಮದ್ ಖಾನ್ ಅವರಿಗೆ ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ
ಕರ್ನಾಟಕ ರಾಜ್ಯ ಕೊಳಚೆ ಮಂಡಳಿ ಅಧ್ಯಕ್ಷರಾದ ಶ್ರೀ ಪ್ರಸಾದ್ ಅಬ್ಬಯ್ಯ ಅಭಿಮಾನಿ ಬಳಗದ ವತಿಯಿಂದ ಅದ್ದೂರಿಯಾಗಿ ಜನ್ಮದಿನದ ಶುಭಾಶಯಗಳನ್ನು ಕೋರಿದ ಛಲವಾದಿ ಮಹಾಸಭಾ ಜಿಲ್ಲಾ ಮುಖಂಡರು ಛತ್ರಪ್ಪ ಛಲವಾದಿ.
ಕೊಪ್ಪಳ ಜಿಲ್ಲೆ ಮತ್ತು ಇನ್ನೂ ಹಲವಾರು ಜಿಲ್ಲೆಗಳಿಂದ ಜಮೀರ್ ಅಹಮದ ಅವರ ಹುಟ್ಟು ಹಬ್ಬಕ್ಕೆ ಶುಭಕೋರಲು ಆಗಮಿಸಿದರು, ಮತ್ತು ಪ್ರಸಾದ್ ಅಪ್ಪಯ್ಯ ಅವರು ಮಾತನಾಡಿ ಹೇಳಿದರು ಬಡವರಿಗಾಗಿ ದುಡಿತಾಯಿದ್ದಾರೆ ಅಂದರೆ, ದಲಿತರಿಗಾಗಿ ಸಮಾಜ ಸೇವೆಯನ್ನು ಮಾಡ್ತಾಯಿದ್ದಾರೆ ಅಂದರೆ ಅದು ನಮ್ಮ ಜಮೀರ್ ಅಹಮದ್ ಸರ್ ಎಂದು ಹೇಳಿದರು,
ನಂತರ ಇವತ್ತಿನ ದಿವಸ ಹುಟ್ಟುಹಬ್ಬವನ್ನು ಆಚರಿಸುವ ನಾವು, ಹುಟ್ಟು ಹಬ್ಬ ಜಮೀರ್ ಅಹಮದ ಸರ್ ದು ಅಲ್ಲ ನಮ್ಮ ದಲಿತರದು ಎನ್ನುವ ಮಾತು ಸ್ಪಷ್ಟವಾಗಿ ತಿಳಿಸಿದರು, ಆಗಾದರೆ,… ಯಾಕೆ ಇದೆಲ್ಲ ಮಾಡ್ತಿದ್ದಾರೆ ಎಂದು ಯೋಚಿಸಬಹುದು ಜನರು, ಜನರ ಹೇಳಿಕೆಯ ಪ್ರಕಾರ ಬಂದ ಸುದ್ದಿ ಇದು. ಎಷ್ಟೋ ಜನರನ್ನು ವಿಚಾರಿಸಿದಾಗ ಅವರ ಹುಟ್ಟು ಹಬ್ಬಕ್ಕೆ ಬಂದಿದ್ದೀರಲ್ಲ ಅವರು ನಿಮಗೆ ಏನು ಕೊಡ್ತಾರೆ, ಅಂದರೆ.
ಜಮೀರ್ ಅಹಮದ್ ಅವರು ಗಳಿಸಿದ ಜನರು ಹೇಳಿದ ಮಾತು ಅವರು ಏನು ಕೊಡುತ್ತಾರೆ ಎನ್ನುವದಕ್ಕಿಂತ, ಅವರಿಂದ ಏನು ಕೆಲಸ ಆಗಿದೆ, ಅವರು ಯಾರಿಂದ ಬದುಕು ಕಟ್ಟಿಕೊಂಡಿದ್ದಾರೆ ಎನ್ನುವ ಸತ್ಯ ಕತೆಯನ್ನು ಜನರ ಮುಂದೆ ಬಿಚ್ಚಿಟ್ಟಾಗ, ಜನ ಸಮೂಹವು ಹಾಕಿದ ಕೇಕೆ, ಸಿಳ್ಳೆ, ಚಪ್ಪಾಳೆ, ಅದೊಂದು ದೊಡ್ಡ ವಿಸ್ಮಯವೇ ಎನ್ನಬಹುದು, ಆದರೆ ಇದೆ ಆಗಸ್ಟ್ ತಿಂಗಳ 2025 ರೊಳಗೆ ಹುಬ್ಬಳ್ಳಿಯಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸಾಧ್ಯತೆ ಇದೆ, ಅದರಲ್ಲಿ ದಲಿತ ಬಡ ಕುಟುಂಬದವರಿಗೆ ಮೆನೆ, ಮಾಡಿ ಕೊಡುವ ಸುದ್ದಿ ತಿಳಿಸಿದರು.
ಅದೇ ಸಂದರ್ಭದಲ್ಲಿ ಜಮೀರ್ ಅಹಮದ ಅವರು 27 ವರ್ಷದಿಂದ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಬಂದಿದ್ದೇನೆ ಆದರೆ ಇಷ್ಟೊಂದು ಜನ ಕೂಡಿದ್ದು ಇದೆ ಮೊದಲ ಸರಿ, ಇವತ್ತಿನಷ್ಟು ಸಂತೋಷ, ಯಾವತ್ತು ಕಂಡಿಲ್ಲ ಇಂದು ನಿಮ್ಮಿಂದ ನಾನು ಆ ಖುಷಿಯನ್ನು ಕಂಡೆ, ನಾನು ಗಳಿಸಿದಂತ ಅಸ್ತಿ ಅಂದರೆ ಅದು ನೀವೇ ಎನ್ನುವ ಮಾತು ಘಟ್ಟಿಯಾಗಿ ದಲಿತರಿಗೆ ಜೈ ಭೀಮ್ ಕೂಗನ್ನು ಹಾಕುತ್ತ ಹೇಳಿದರು.
ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಯಾವತ್ತು ನಾನು ಚಿರಋಣಿಯಾಗಿ ಇದ್ದೇನೆ, ಇವತ್ತು ಹೇಳಬೇಕ0ದ್ರೆ ನಾನು ಮುಸ್ಲಿಂ ಇದ್ದು ಒಂದು ಮಾತನ್ನ ಹೇಳಲೇಬೇಕಾಗಿದೆ, ಇವತ್ತು ಶುಕ್ರವಾರ ಆ ಅಲ್ಲಾ ನ ಮೇಲೆ ಆಣೆ ಮಾಡಿ ಹೇಳ್ತಿನಿ ನಾನು ಮಾಡಿರುವ ಅಸ್ತಿ ದಲಿತರ ಸ್ನೇಹ, ಪ್ರಮತ್ವ, ಯಾವತ್ತಾದ್ರೂ ಏನೆ ಸಮಸ್ಸೆ ಇರಲಿ ನನಗೆ ತಿಳಿಸಿ ನಿಮ್ಮ ಜೊತೆ ನಿಮ್ಮ ಮನೆ ಮಗನಾಗಿ ಇರ್ತೀನಿ ಎಂದು ಆ ಅಲ್ಲಾನ ಮೇಲೆ ಆಣೆ ಮಾಡಿದ್ದಾರೆ ಅಂದ್ರೆ, ನಿಜಕ್ಕೂ ಇವರು ವಸತಿ ಮಂತ್ರಿಗಳಾಗಿದ್ದಕ್ಕೂ ಸಾರ್ಥಕ ಎಂದು ಶ್ರೀ ಯುತ ಸನ್ಮಾನ್ಯ ಶ್ರೀ ಪ್ರಸಾದ್ ಅಬ್ಬಯ್ಯ ಅವರು ಸಾರಿ ಸಾರಿ ಹೇಳಿದರು.
ನಂತರ ಸಂವಿಧಾನದ ಮೂಲಕ ದೇಶಕ್ಕೊಂದು ಸುಭದ್ರ ನಿಯಮಗಳನ್ನ ರೂಪಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಸಮಾನತೆ, ಸಮಾಜ ಸುಧಾರಣೆ, ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ. ಮಹಾನ್ ವ್ಯಕ್ತಿಯಾಗಿರುವ ಡಾ. ಅಂಬೇಡ್ಕರ್ ಅವರನ್ನ ಸ್ಮರಿಸುವ ಸಲುವಾಗಿ ಪ್ರತಿವರ್ಷವೂ ಅವರ ಜನ್ಮಜಯಂತಿಯನ್ನ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತದೆ. ಕೆಲವು ಖಾಸಗಿ ಕಚೇರಿಗಳಲ್ಲೂ ಅಂಬೇಡ್ಕರ್ ಜಯಂತಿ ಮಾಡಲಾಗುತ್ತದೆ. ವಿವಿಧ ಸಂಘಟನೆಗಳವರೂ ಒಟ್ಟಾಗಿ ಆಚರಿಸುತ್ತಾರೆ. ಎಂದು ವಸತಿ ಸಚಿವರಾದ ಶ್ರೀ ಜಮೀರ್ ಅಹಮದ ಅವರು ನಾನು ಅವರಂತೆ ನಡೆಯುತ್ತೇನೆ, ಇನ್ನು ಮುಂದೆನು ಅವರಂತೆ ಬಾಳುತ್ತೇನೆ ಎಂದು ಆ ಅಲ್ಲಾ, ಮತ್ತು ಬಾಬಾ ಸಾಹೇಬ ಅಂಬೇಡ್ಕರ್ ಅವರ ಮೇಲೆ ಆಣೆ ಮಾಡಿ ಮಾತು ಕೊಟ್ಟಂತೆ, ನಿಮ್ಮ ಪರವಾಗಿ ನಾನು ಇರುತ್ತೇನೆ ಎಂದು ಮಾತನಾಡಿದರು.
ಅವರ ಜೊತೆಯಾಗಿ ನಿಂತು ಕೆಲಸ ಕಾರ್ಯಗಳಲ್ಲಿ ತೊಡಗಿ ಅವರೊಂದಿಗೆ ಸೇವೆ ಸಲ್ಲಿಸುತ್ತಲೆ ಬಂದ ಶ್ರೀ ಸುಭಾಸ್ ನಟೆಕರ್, ಮತ್ತು ಶ್ರೀ ಆನಂದ ಸಿಂಗಾಡಿ, ಶ್ರೀ ಕೃಷ್ಣ ಇಟ್ಟಂಗಿ, ಶ್ರೀ ನಾಗರಾಜ್ ನಂದಾಪುರ, ಎಲ್ಲರು ಸೇರಿ ನನಗೆ ತುಂಬಾ ಅನುಕೂಲ ಮಾಡಿ ಕೊಟ್ಟಿದ್ದಾರೆ, ಎಂದು ವಸತಿ ಸಚಿವರಾದ ಶ್ರೀ ಜಮೀರ್ ಅಹಮದ್ ಅವರು ತಿಳಿಸಿದರು.
ನಂತರ ಕೊಪ್ಪಳ ಜಿಲ್ಲೆಯ ಛಲವಾದಿ ಮಹಾಸಭಾ ಮುಖಂಡರಾದ ಶ್ರೀ ಛತ್ರಪ್ಪ ಛಲವಾದಿ, ಶ್ರೀ ಶಶಿಧರ್ ಹೊಸಮನಿ, ಹಾಗೂ ಛಲವಾದಿ ಸಮಾಜ ಬಂದವರಾದ ಬಾಲರಾಜ್ ಮಂಗಳೂರ್, ಶಂಕರ್ ಜಕ್ಕಲಿ, ಬಸಪ್ಪ ಬೇನಾಳ್, ಪ್ರವೀಣ್ ಕಟ್ಟಿಮನಿ, ವಿಷ್ಣು ಆಡೂರ್, ಬಸವರಾಜ್ ಕುಡಗುಂಟಿ, ಲೋಕೇಶ್ ಚಿಕೇನಕೊಪ್ಪ, ರವಿ ಬಂಕದಮನಿ, ಇನ್ನು ಅನೇಕರು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು
ವರದಿ ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ