ಕನ್ನಡ ಕಡ್ಡಾಯ ವಿರೋಧಿಸಿ ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವೀಸ್ ಮೊರೆ ಹೋದ ಎಂಇಎಸ್ ಪುಂಡರು

ಬೆಳಗಾವಿ: ಗಡಿನಾಡ ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ ವಿರೋಧಿಸಿ ಎಂಇಎಸ್ ನಗರಸೇವಕ ರವಿ ಸಾಳುಂಕೆ ನೇತೃತ್ವದ ಗುಂಪು ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವೀಸ್‌ಗೆ ಮನವಿ ಪತ್ರ ಅರ್ಪಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಕಾರಿನ ಮೇಲೆ ಕನ್ನಡ ನಾಮಫಲಕ ಸೇರಿದಂತೆ ಪಾಲಿಕೆಯಲ್ಲಿ ಕನ್ನಡ ಅನುಷ್ಠಾನಗೊಳಿಸುವ ಕೆಲಸವನ್ನು ಆಯುಕ್ತರು ಮಾಡಿದ್ದರು. ಪಾಲಿಕೆ ಸಭೆಯಲ್ಲಿ ರವಿ ಸಾಳುಂಕೆ ಕನ್ನಡ ಅನುಷ್ಠಾನಕ್ಕೆ ಅಡ್ಡಿಪಡಿಸಿ ಮರಾಠಿ ದಾಖಲೆ ಕೇಳಿದ್ದರಿಂದ ದೊಡ್ಡಮಟ್ಟದ ಕೋಲಾಹಲ ನಡೆದಿತ್ತು. ಇದಾದ ನಂತರ ಎಂಇಎಸ್ ನೇತೃತ್ವದಲ್ಲಿ ಮಹಾರಾಷ್ಟ್ರ ಸಿಎಂಗೆ ಕನ್ನಡ ಕಡ್ಡಾಯದ ವಿರುದ್ಧ ಮನವಿ ಪತ್ರ ಅರ್ಪಿಸಿದ್ದಾರೆ.
ಮನವಿ ಪತ್ರದಲ್ಲಿ ಏನಿದೆ?:
ಬೆಳಗಾವಿಯಲ್ಲಿ `ಕನ್ನಡ ಕಡ್ಡಾಯ’ದ ಹೆಸರಿನಲ್ಲಿ ಮರಾಠಿ ಭಾಷಿಕರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಮಹಾನಗರ ಪಾಲಿಕೆಯ ಫಲಕಗಳು, ವಾಹನಗಳ ನಂಬರ್ ಪ್ಲೇಟುಗಳು, ಗಣೇಶೋತ್ಸವದ ಫಲಕಗಳನ್ನು ಕೇವಲ ಕನ್ನಡದಲ್ಲಿ ಹಾಕಲಾಗಿದೆ ಎಂದು ಸಾಳುಂಕೆ ಮನವಿ ಪತ್ರದಲ್ಲಿ ವಿವರಿಸಿದ್ದಾರೆ.