Local NewsState
ರಾಜ್ಯದ ಜನತೆಯ ಗಮನಕ್ಕೆ : ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳ ಬಗ್ಗೆ ದೂರುಗಳಿದ್ದರೆ ಈ ಸಂಖ್ಯೆಗೆ `ವಾಟ್ಸಪ್’ ಮಾಡಿ.!

ಬೆಂಗಳೂರು : ಆರೋಗ್ಯ ಇಲಾಖೆಯಡಿ ಕುಂದುಕೊರತೆ ಪರಿಹಾರಕ್ಕೆ ವಿನೂತನ ವ್ಯವಸ್ಥೆ ಜಾರಿಗೆ ತರಲಾಗಿದ್ದು, ವಾಟ್ಸಪ್ ಮೂಲಕ ನಿಮ್ಮ ಸಮಸ್ಯೆಯನ್ನು ವರದಿ ಮಾಡಬಹುದು.
ಸರ್ಕಾರಿ ಆಸ್ಪತ್ರೆಗಳು ಅಥವಾ ಆರೋಗ್ಯ ಸೇವೆಗಳ ಕುರಿತು ದೂರು ಅಥವಾ ಸಲಹೆಯಿದೆಯೇ? ಸಂಪರ್ಕಿಸಲು ಒಂದು ಮೆಸೇಜ್ ಸಾಕು.
ವಾಟ್ಸಾಪ್ ಮೂಲಕ ನಮಗೆ ಮೆಸೇಜ್ ಮಾಡಿ, ಅಗತ್ಯವಿದ್ದರೆ ಫೋಟೋ/ವೀಡಿಯೊಗಳನ್ನು ಲಗತ್ತಿಸಿ. ನಿಮ್ಮ ಸಮಸ್ಯೆಯನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೇರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ.
ವಾಟ್ಸಪ್ ಸಂಖ್ಯೆ- 9449843001- ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು, ಕೇವಲ ಸಂದೇಶಗಳನ್ನು ಮಾತ್ರ ಸ್ವೀಕರಿಸಲಾಗುವುದು. ದೂರವಾಣಿ ಕರೆಗಳಿಗೆ ಉತ್ತರಿಸಲಾಗುವುದಿಲ್ಲ.


