EducationLocal NewsState
ಖನಗಾಂವ : ಆದರ್ಶ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು

ಖನಗಾಂವ ಇಂದು ದಿನಾಂಕ 12/11/2025 ರಂದು ಮುಂಜಾನೆ 10.00 ಗಂಟೆಗೆ ಸರಿಯಾಗಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ & ಕಲೋತ್ಸವ ಕಾರ್ಯಕ್ರಮವನ್ನು ಆದರ್ಶ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಖನಗಾಂವ ಶಾಲೆಯಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮಕ್ಕೆ ಶ್ರೀ ಪರಶುರಾಮ ಗಸ್ತೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಗೋಕಾಕ ರವರು ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪಿ ಎಮ್ ವಣ್ಣೂರ ಶ್ರೀ ಮಹಾಲಕ್ಷ್ಮೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ವಹಿಸಿದರು. ಅತಿಥಿಗಳಾಗಿ ಶ್ರೀ ನಾಗೇಶ ತಳವಾರ ಸಿ ಆರ್ ಪಿ ಖನಗಾಂವ, ಹಾಗೂ ಎಲ್ಲ ಪ್ರಧಾನ ಗುರುಗಳು. ಶಿಕ್ಷಕ/ಕಿಯರು ಊರಿನ ಗಣ್ಯರು ಹಾಜರಿದ್ದರು. ಶ್ರೀ ಪ್ರಕಾಶ ನಾಲಪರೋಶಿ ಸ್ವಾಗತಿಸಿದರು. ಶ್ರೀ ಎಸ್ ಬಿ ಹಣಮಂತನವರ ವಂಧಿಸಿದರು. ಶ್ರೀಮತಿ ಭಾರತಿ ಹಾಗೂ ಶ್ರೀಮತಿ ನಿರೂಪಮಾ ಅವರು ನಿರೂಪಿಸಿದರು.


