Local NewsState

ಜಿಲ್ಲೆಯ 227 ಶುದ್ಧ ನೀರಿನ ಘಟಕಗಳು ಬಂದ್: ಜಿಲ್ಲಾ ಪಂಚಾಯತ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಮಾತು ಕೇಳಿ ಬಂದಿದೆ.

ಗ್ರಾಮೀಣ ಜನರಿಗೆ ಸುರಕ್ಷಿತ ನೀರು ಮತ್ತು ಕಲುಷಿತ ನೀರಿನಿಂದ ಹರಡುವ ರೋಗ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜ್ಯಾದ್ಯಂತ ಪ್ರತಿ ಗ್ರಾಮ ಮಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಲಕ್ಷಾಂತರ ರೂ.ವೆಚ್ಚ ಮಾಡಿ ಅಳವಡಿಸಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ ಜಿಲ್ಲೆಯ  227 ಅಧಿಕ ಘಟಕಗಳು ಸ್ಥಗಿತಗೊಂಡಿವೆ.ಪರಿಣಾಮ ಜನರು ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದೆ.

ಸರ್ಕಾರ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಜಾರಿಯಲ್ಲಿರುವ ಯೋಜನೆಗಳಿಗೆ ಕಾಯಕಲ್ಪ ನೀಡದೇ ಯೋಜನೆ ಯೋಜನೆಗಳು ಹಳ್ಳ ಹಿಡಿದಿವೆ. ಆಧುನಿಕ ಕಾಲದಿಂದ ನೀರಿನ ಅಭಾವ ಸೃಷ್ಟಿಯಾಗಿ ಜನರು ಸಿಕ್ಕಂತ ನೀರನ್ನೆ ಬಳಸಬೇಕಾಗಿದೆ. ಶುದ್ಧ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಜನರು ಭಯ ಬಿಟ್ಟು ನೀರು ಸೇವಿಸಲು,ಆದರೆ ಘಟಕಗಳು ಬಂದ್ ಜನರು ಶುದ್ಧ ನೀರಿನಿಂದ ವಂಚಿತರಾಗುತ್ತಿದ್ದಾರೆ.

೧೩೩೦ ಘಟಕಗಳು ೨೨೭ ಬಂದ್ :

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೆಆರ್ ಐಡಿಎಲ್ ಮತ್ತು ಸಹಕಾರಿ ಸಂಘಗಳು ನೀರಿನ ಘಟಕಗಳು ಸ್ಥಾಪಿಸಿವೆ. ಜಿಲ್ಲೆಯ ಚಿಕ್ಕೋಡಿ ವಿಭಾಗ ಅಥಣಿ ತಾಲೂಕಿನಲ್ಲಿ 154 ಘಟಕಗಳನ್ನು ಅಳವಡಿಸಲಾಗಿದೆ,ಇದರಲ್ಲಿ (14 ಸ್ಥಗಿತ), ಚಿಕ್ಕೋಡಿ 179(43) ಗೋಕಾಕ ೧೨೬(೪೧),ಹುಕ್ಕೇರಿ ೧೪೯( ೪೦),ರಾಯಬಾಗ ೧೦೭( ೨೩) ಹಾಗೂ ಬೆಳಗಾವಿ ಬೆಳಗಾವಿ ೧೨೫(೧೯), ಬೈಲಹೊಂಗಲ ೧೩೬(೧೮), ಖಾನಾಪು ೯೩ ( ೧೨), ರಾಮದುರ್ಗ ೧೩೧(೨), ಸವದತ್ತಿ ೧೩೦(೧೫) ಘಟಕಗಳ ಸ್ಥಿತಿಗತಿಗಳಾಗಿದೆ. ಚಿಕ್ಕೋಡಿಯಲ್ಲಿಯೇ ಅತಿ ಹೆಚ್ಚು ಘಟಕಗಳು ಬಂದ್ ಆಗಿವೆ.

ನಿರ್ವಹಣೆಗೆ ಹಣ ಪೋಲು:
ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಹೊಣೆಯನ್ನು ಖಾಸಗಿ ಏಜನ್ಸಿಗೆ ನೀಡಲಾಯಿತು.ಕಳೆದ ನವೆಂಬರ್ನಿಂದ ಗ್ರಾ.ಪಂ. ಹಸ್ತಾಂತರ ಕಾರ್ಯ ನಡೆಯುತ್ತಿದೆ. ಪ್ರತಿ ಘಟಕಗಳಿಗೆ ಪ್ರತಿ ತಿಂಗಳು 3 ಸಾವಿರ ರೂ.ನೀಡದಿದ್ದರೆ.ಆದರೆ ಜಿಲ್ಲೆಯ ಘಟಕಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಜಿಲ್ಲಾ ಪಂಚಾಯತ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಮಾತು ಕೇಳಿ ಬಂದಿದೆ.

ಸಾರ್ವಜನಿಕರಿಂದಲೂ ದುರಪಯೋಗ:
ಗ್ರಾಮೀಣ ಪ್ರದೇಶದ ಅಳಡಿಸಲಾದ ಘಟಕಗಳಲ್ಲಿ ಸಾರ್ವಜನಿಕರು ದುರಪಯೋಗ ಪಡಿಸಿಕೊಂಡಿರುವ ದೂರು ಕೇಳಿ ಬಂದಿವೆ.ಕ್ವಾನ್ ಬಾಕ್ಸ್ ಕಳ್ಳತನ,ಕೀಡಿಗೇಡಿಗಳಿಂದ ಗಾಜು ಹಾಳು ಮಾಡಿರುವ ಪ್ರಕರಣಗಳು ಹೆಚ್ಚಾಗಿವೆ. 

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button