FeaturePolitics

ದೇಶಾದ್ಯಂತ ಸಂಚಲನ ಸೃಷ್ಟಿಸಿದ ಕಾಕ್ರೋಚ್ ಜನತಾ ಪಾರ್ಟಿ

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನಿರುದ್ಯೋಗಿ ಯುವಕರನ್ನು ಜಿರಳೆಗಳಿದ್ದಂತೆ ಎಂದು ಕಟು ಶಬ್ಧಗಳಿಂದ ಟೀಕಿಸಿದ ಪರಿಣಾಮವಾಗಿ ಅದರ ಪ್ರತಿಸ್ಪಂದನೆಯ ರೂಪವಾಗಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಡಿಜಿಟಲ್ ಪಕ್ಷವೊಂದು ಹುಟ್ಟಿಕೊಂಡಿದ್ದು, ಕೇವಲ ನಾಲ್ಕೇ ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿಯ ಫಾಲೋವರ್ಸ್ ಗಳನ್ನು ಹಿಂದಿಕ್ಕಿದೆ.

ಪ್ರಮುಖ ಪ್ರಕರಣವೊಂದರ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ, ನಿರುದ್ಯೋಗಿ ಯುವಕರನ್ನು ನ್ಯಾಯಮೂರ್ತಿ ಸೂರ್ಯಕಾಂತ್​ ಟೀಕಿಸಿದ್ದು, ಮಾತಿನ ಭರದಲ್ಲಿ ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ. ಉದ್ಯೋಗ ಮತ್ತು ಸ್ಥಾನಮಾನ ಸಿಗದಿದ್ದಾಗ ಅವರು ಆರ್‌ಟಿಐಕಾರ್ಯಕರ್ತರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರ ಸೋಗಿನಲ್ಲಿ ಇಡೀ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ನಿರುದ್ಯೋಗಿ ಯುವಕರನ್ನು ಹೀಗೆ ಕರೆಯುವುದು ಸ್ವೀಕಾರಾರ್ಹವಲ್ಲ ಎಂದು ಹಲವು ನಾಯಕರು ಟೀಕಿಸಿದ್ದರು. ನಂತರ ಸ್ಪಷ್ಟನೆ ನೀಡಿದ ಸಿಜೆಐ, ಭಾರತೀಯ ಯುವಕರ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದರು.

ಸಿಜೆಐ ಅವರ ಹೇಳಿಕೆ ಬೆನ್ನಲ್ಲೇ ದೇಶದಲ್ಲಿ ಹೊಸದೊಂದು ಚಳುವಳಿ ಆರಂಭವಾಗಿದ್ದು, ಅದೀಗ ರಾಜಕೀಯಪಕ್ಷದ ರೂಪ ತಳೆದಿದೆ. ಅಭಿಜೀತ್ ದೀಪ್ಕೆ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಎಂಬ ಡಿಜಿಟಲ್ ಪಕ್ಷವನ್ನು ಅಧಿಕೃತವಾಗಿ ಹುಟ್ಟುಹಾಕಿದ್ದಾರೆ. ಅಭಿಜಿತ್ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿದ್ಯಾರ್ಥಿಯಾಗಿದ್ದು, ಈ ಹಿಂದೆ 2020 ಮತ್ತು 2023 ರ ನಡುವೆ ಆಮ್ ಆದ್ಮಿ ಪಕ್ಷದೊಂದಿಗೆ ಸಂಬಂಧಿಸಿದ ರಾಜಕೀಯ ಪ್ರಚಾರಗಳು ಮತ್ತು ಸಾಮಾಜಿಕ ಮಾಧ್ಯಮ ಸ್ಥಳಗಳಲ್ಲಿ ಕೆಲಸ ಮಾಡಿದ್ದರು. ಕಾಕ್ರೋಚ್ ಜನತಾ ಪಾರ್ಟಿ ಆರಂಭವಾದ ನಾಲ್ಕೇ ದಿನಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನೂ ಮೀರಿ ಬರೋಬ್ಬರಿ 14.3 ಮಿಲಿಯನ್ ಫಾಲೋವರ್ಸ್ ಹೊಂದಿದೆ. ಇದು ಪ್ರಸ್ತುತ ದೇಶದಲ್ಲಿ ಝೆನ್ ಜಿಗ ಹೋರಾಟದ ರೂಪದಂತೆ ಭಾಸವಾಗುತ್ತಿದೆ.

ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಲು ವಿಪಕ್ಷಗಳೆಲ್ಲವೂ ಸೇರಿ ಕಾಕ್ರೋಚ್ ಜನತಾ ಪಾರ್ಟಿಗೆ ಬೆಂಬಲ ನೀಡುತ್ತಿವೆ. ಪ್ರಮುಖವಾಗಿ ಯುವಕರು ಈ ಪಕ್ಷದತ್ತ ಸೆಳೆಯುತ್ತಿದ್ದು, ಜೆನ್ ಝೀ ಯುವಕರ ಅತ್ಯಂತ ಶಕ್ತಿಶಾಲಿ ಡಿಜಿಟಲ್ ಪ್ರತಿಭಟನೆಯಾಗಿ ಮಾರ್ಪಡುತ್ತಿದೆ. ಕೇವಲ ಮೇ 16, 2026 ರಂದು ಆರಂಭವಾದ ಈ ಆನ್‌ಲೈನ್ ಮೂವ್‌ಮೆಂಟ್, ಕೆಲವೇ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ದೇಶದ ಯುವಜನತೆಯ ಅಸಮಾಧಾನ ಮತ್ತು ಆಕ್ರೋಶವನ್ನು ಹೊರಹಾಕುವ ದೊಡ್ಡ ವೇದಿಕೆಯಾಗಿ ಮಾರ್ಪಟ್ಟಿದೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button