ಖಾನಾಪೂರ ಉಪ ನೋಂದಣಿ ಅಧಿಕಾರಿ ವಿರುದ್ಧ ದೂರಿನ ಅರ್ಜಿ ಸಲ್ಲಿಸಿದ: ಶ್ರೀ ವಾಲ್ಮೀಕಿ ರಾಯಣ್ಣ ಯುವಾ ಸೋಶಿಯಲ್ ಫೌಂಡೇಶನ್ ಅಧ್ಯಕ್ಷ ಶಶಿಧರ ನಾಯಿಕ

ಖಾನಾಪೂರ ಉಪ ನೋಂದಣಿ ಅಧಿಕಾರಿ ವಿರುದ್ಧ ದೂರಿನ ಅರ್ಜಿ ಸಲ್ಲಿಸಿದ: ಶ್ರೀ ವಾಲ್ಮೀಕಿ ರಾಯಣ್ಣ ಯುವಾ ಸೋಶಿಯಲ್ ಫೌಂಡೇಶನ್ ಅಧ್ಯಕ್ಷ ಶಶಿಧರ ನಾಯಿಕ
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಉಪ ನೊಂದಣಿ ಇಲಾಖೆಯ ಕಚೇರಿಯಲ್ಲಿ ಏಜೆಂಟಗಳು ರಾಜಾರೋಷವಾಗಿ ಸರ್ಕಾರಿ ಕುರ್ಚಿ, ಹಾಗೂ ಸರ್ಕಾರಿ ಕಂಪ್ಯೂಟರ್‌ನಲ್ಲಿ ಕುಳಿತುಕೊಂಡು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಸರಕಾರವು ಈಗಾಗಲೇ ಏಜೆಂಟರ್ ಹಾವಳಿ ತಪ್ಪಿಸಲು ಹಲವಾರು ಕಾನೂನುಗಳನ್ನು ಜಾರಿಗೊಳಿಸಿದರೂ ಸಹ ಏಜೆಂಟರ ಹಾವಳಿ ಕಡಿಮೆ ಆಗುತ್ತಿಲ್ಲ. ಕಾರಣ ಸದರಿ ಏಜೆಂಟಗಳು ಉಪನೊಂದಣಿ ಅಧಿಕಾರಿಗಳ ಪಕ್ಕದಲ್ಲಿ ಕುಳಿತುಕೊಂಡು ಸರ್ಕಾರಿ ಕಂಪ್ಯೂಟರ ಬಳಕೆ ಮಾಡಿದ್ದು ಬೆಳಕಿಗೆ ಬಂದಿರುತ್ತದೆ. ಇದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಲಗತ್ತಿಸಿರುತ್ತಾರೆ.

ಏಜೆಂಟಗಳಿಗೆ ಉಪ ನೊಂದಣಿ ಅಧಿಕಾರಿಗಳ ಕುಮ್ಮಕ್ಕು ಇರುತ್ತದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅದು ಅಲ್ಲದೇ ಕಡಿವಾಣ ಹಾಕಬೇಕಾದ ಸರ್ಕಾರಿ ಉಪ ನೊಂದಣಿ ಅಧಿಕಾರಿಯು ಏಜೆಂಟರಿಗೆ ಬೆಂಬಲ ನೀಡಿ ಸರ್ಕಾರಿ ಆದೇಶಗಳನ್ನು ಗಾಳಿಗೆ ತೂರಿ ಕೆಲಸ ಮಾಡುವುದರಿಂದ ನಕಲಿ ಖರೀದಿ ನೊಂದಣಿ ಅಥವಾ ಇನ್ನಿತರ ನಕಲಿ ದಸ್ತ ನೊಂದಣಿ ಪ್ರಮಾಣದಲ್ಲಿ ಬಹಳಷ್ಟು ಏರಿಕೆ ಆಗಿದೆ.
ಇದಕ್ಕೆ ಉದಾಹರಣೆ ಎಂಬಂತೆ ಖಾನಾಪೂರ ತಾಲೂಕಿನ ಹುಳಂದ ಗ್ರಾಮದ ಸರ್ವೆ ನಂಬರ. 3 ಕ್ಷೇತ್ರ 508ಎ-20ಗುಂಟೆ ಇದು ಕೂಡ ಒಂದು ಅಂತಾ ಮೇಲ್ನೋಟಕ್ಕೆ ಹೇಳಬಹುದು.
ಅದರಿಂದ ಸದರಿ ಖಾನಾಪೂರ ತಾಲೂಕಿನ ಉಪ ನೊಂದಣಿ ಇಲಾಖೆಯ ಕಚೇರಿಯಲ್ಲಿ ಏಜೆಂಟಗಳ ಹಾವಳಿಗೆ ಕಡಿವಾಣ ಹಾಕಬೇಕು ಮತ್ತು ಈ ಏಜೆಂಟರಿಗೆ ಕುಮ್ಮಕ್ಕು ನೀಡುತ್ತಿರುವ ಉಪನೊಂದಣಿ ಅಧಿಕಾರಿಯ ಮೇಲೆ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ನಕಲಿ ಖರೀದಿಗೆ ಕಡಿವಾಣ ಹಾಕುವ ಉದ್ದೇಶದಿಂದ ಇಲಾಖೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಖಾನಾಪುರ ಉಪ್ ನೊಂದಣಿ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು ಅಂತ ಜಿಲ್ಲಾ ನೊಂದಣಿ ಅಧಿಕಾರಿಗಳಿಗೆ ಶ್ರೀ ವಾಲ್ಮೀಕಿ ರಾಯಣ್ಣ ಯುವಾ ಸೋಶಿಯಲ್ ಫೌಂಡೇಶನ್ ಅಧ್ಯಕ್ಷ ಶಶಿಧರ ನಾಯ್ಕ
ದೂರಿನ ಅರ್ಜಿ ಸಲ್ಲಿಸಿದಾರೆ


