Micro Finance: ಮೈಕ್ರೋ ಫೈನಾನ್ಸ್ ಗಳ ಮತ್ತೊಂದು ಕರಾಳ ಮುಖವಾಡ ಬಯಲು. ಪರಿಹಾರ ಕೊಡಿಸಿ ಇಲ್ಲದಿದ್ದರೆ ನಾವು ಇಲ್ಲೇ ಸಾಯುತ್ತೇವೆ! ಪರಿಹಾರ ಕೊಡಿಸಿ ಇಲ್ಲದಿದ್ದರೆ ನಾವು ಇಲ್ಲೇ ಸಾಯುತ್ತೇವೆ!

ಅರ್ಹರಲ್ಲದವರ ವಯಸ್ಸು ಕಡಿಮೆ ಮಾಡಿ ಸಾಲ?
ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಕೊಟ್ಟ ಬಳಿಕ ಕಿರುಕುಳ ನೀಡುವುದು ಒಂದೆಡೆಯಾದ್ರೆ, ಸಾಲ ಪಡೆಯಲು ಪ್ರೋತ್ಸಾಹಿಸುವ ಕೃತ್ಯಗಳು ನಡೆದಿವೆ. ಹೌದು, ಸಾಲ ಪಡೆಯಲು ಅರ್ಹರಲ್ಲದವರ ವಯಸ್ಸು ಕಡಿಮೆ ಮಾಡಿ ಸಾಲ ನೀಡಿದ ಆರೋಪ ಇದೀಗ ರಾಯಚೈರಯ ಜಿಲ್ಲೆಯಲ್ಲಿ ಕೇಳಿಬಂದಿದೆ.
ನಕಲಿ ವೋಟರ್ ಐಡಿಗಳನ್ನು ಸೃಷ್ಟಿಸಿ ಸಾಲ
ನಕಲಿ ವೋಟರ್ ಐಡಿಗಳನ್ನು ಸೃಷ್ಟಿಸಿ ಸಾಲ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ, ವೃದ್ಧೆಯರಿಗೆ ಮಕ್ಕಳಿಲ್ಲದಿದ್ದರೂ ನಕಲಿ ಮಕ್ಕಳನ್ನ ಸೃಷ್ಟಿಸಿ ಸಾಲ ನೀಡಿರುವ ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಕಿರುಕುಳಕ್ಕೆ ಒಳಗಾದವರು ದಾಖಲೆ ಸಮೇತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಪರಿಹಾರ ಕೊಡಿಸಿ ಇಲ್ಲದಿದ್ದರೆ ನಾವು ಇಲ್ಲೇ ಸಾಯುತ್ತೇವೆ!
ಸುಳ್ಳು ದಾಖಲೆ ಸೃಷ್ಟಿಸಿ ಸಾಲ ನೀಡಿದ್ದಾರೆ, ಇದೀಗ ಬಡ್ಡಿ ಸಮೇತ ವಾಪಸ್ ನೀಡುವಂತೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾರೆ. ಕಿರುಕುಳದಿಂದ ವಿಷ ಕುಡಿಯುವುದೊಂದೇ ಬಾಕಿ ಇದೆ. ಇದಕ್ಕೊಂದು ಪರಿಹಾರ ಕೊಡಿಸಿ ಇಲ್ಲದಿದ್ದರೆ ನಾವು ಇಲ್ಲೇ ಸಾಯಬೇಕಾಗುತ್ತದೆ. ಕಿರುಕುಳದಿಂದ ಮುಕ್ತಿ ಕೊಡಿಸುವಂತೆ ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿ ಕಣ್ಣೀರು ಹಾಕಿದ್ದಾರೆ.
ಪರಿಹಾರ ಕೊಡಿಸಿ ಇಲ್ಲದಿದ್ದರೆ ನಾವು ಇಲ್ಲೇ ಸಾಯುತ್ತೇವೆ!
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಆದೇಶ ಏನಿದೆಯೋ ನೋಡಿಕೊಂಡು ಲೀಡ್ ಬ್ಯಾಂಕ್ ಮ್ಯಾನೇಜರ್, ಎಸ್ಪಿ ಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ.
ತಾಳಿ ಮಾರಿಯಾದರೂ ಸಾಲ ಕಟ್ಟಿ ಎಂದು ಕಿರುಕುಳಬೆಳಗಾವಿ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಮುಂದುವರೆದಿದ್ದು, ತಾಳಿ ಮಾರಿಯಾದರೂ ಸಾಲ ಕಟ್ಟಿ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೈಯಲ್ಲಿ ತಾಳಿ ಹಿಡಿದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ಇದೇ ರೀತಿ ಫೈನಾನ್ಸ್‌ನವರ ಕಿರುಕುಳ ಮುಂದುವರೆದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಮಹಿಳೆಯರು ಎಚ್ಚರಿಸಿದ್ದಾರೆ.
ವಿವಿಧ ಫೈನಾನ್ಸ್ ಕಂಪನಿ ವಿರುದ್ಧ ಆರೋಪ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೊಲಗಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಮಹಿಳೆಯರಿಗೆ ಫೈನಾನ್ಸ್ ಕಂಪನಿ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ. ಚೈತನ್ಯ ಫೈನಾನ್ಸ್, ಎಲ್ ಎಂಡ್ ಟಿ ಫೈನಾನ್ಸ್, ಟಾಟಾ ಕ್ಯಾಪಿಟಲ್ ಫೈನಾನ್ಸ್ ನಿಂದ ಕಿರುಕುಳ ಎಂದು ಮಹಿಳೆಯರು ಆರೋಪಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಸ್ವ ಸಹಾಯ ಸಂಘದ ಹೊಳೆಪ್ಪ ದಡ್ಡಿ ಎಂಬಾತ ಸಬ್ಸಿಡಿ ಕೊಡಿಸುವುದಾಗಿ ವಂಚನೆ ಎಗಿರುವುದಾಗಿಯೂ ಮಹಿಳೆಯರು ಆರೋಪಿಸಿದ್ದಾರೆ.
ಮನೆಯನ್ನೇ ಸೀಜ್ ಮಾಡಿದ ಫೈನಾನ್ಸ್ ಕಂಪನಿ
ಇನ್ನೊಂದೆಡೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರ ಗ್ರಾಮದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದು, ಕುಟುಂಬ ಬೀದಿಗೆ ಬಿದ್ದಿರುವ ಆಘಾತಕಾರಿ ಘಟನೆ ಕೂಡ ವರದಿಯಾಗಿದೆ. ಬೈಲೂರ ಗ್ರಾಮದ ಯಲ್ಲಪ್ಪ ಬಸಪ್ಪ ಕುರಕುಂದ ಎಂಬುವವರ ಮನೆಯನ್ನು ಫೈನಾನ್ಸ್ ಸಿಬ್ಬಂದಿ ಸೀಜ್ ಮಾಡಿದ್ದಾರೆ.



