State

Government Employee: ಕಛೇರಿ ಸಮಯ ಪಾಲನೆ, ಸರ್ಕಾರಿ ನೌಕರರಿಗೆ ಹೊಸ ಸುತ್ತೋಲೆ ಈ ನಿಯಮಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಬೆಂಗಳೂರು, ಜನವರಿ 25: ಸರ್ಕಾರಿ ಕಛೇರಿಗಳಿಗೆ ಅಧಿಕಾರಿಗಳು/ ನೌಕರರು ಸರಿಯಾದ ಸಮಯಕ್ಕೆ ಆಗಮಿಸುವುದಿಲ್ಲ. ಕಛೇರಿ ವೇಳೆ ಮುಗಿಯುವ ಮೊದಲೇ ಅಲ್ಲಿಂದ ಹೊರಟಿರುತ್ತಾರೆ ಎಂಬ ಆರೋಪಗಳಿವೆ. ಈ ಕುರಿತು ಜನರು ಹಲವು ಬಾರಿ ದೂರುಗಳನ್ನು ಸಹ ನೀಡುತ್ತಾರೆ. ಆದ್ದರಿಂದ ಕಛೇರಿ ವೇಳೆಯಲ್ಲಿ ಅಧಿಕಾರಿಗಳು ಮತ್ತು ನೌಕರರು ಪಾಲಿಸಬೇಕಾದ ನಿಯಮಗಳ ಕುರಿತು ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ.

ಈ ನಿಯಮಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಈ ಕುರಿತು ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯು ಕಛೇರಿ ವೇಳೆಯಲ್ಲಿ ಅಧಿಕಾರಿಗಳು ಮತ್ತು ನೌಕರರು ಪಾಲಿಸಬೇಕಾದ ಮುಖ್ಯ ಸೂಚನೆಗಳು ಎಂಬ ವಿಷಯವನ್ನು ಒಳಗೊಂಡಿದೆ. ಸರ್ಕಾರದ ಪತ್ರ ದಿನಾಂಕ 1/10/2024ರ ಉಲ್ಲೇಖಿಸಲಾಗಿದೆ.

ಸುತ್ತೋಲೆಯ ವಿವರಗಳು: ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಸಮಯ ಪಾಲನೆ ಮಾಡದಿರುವುದು, ಚಲನ-ವಲನ ವಹಿಯನ್ನು ನಿರ್ವಹಿಸದಿರುವುದು, ಕರ್ತವ್ಯದ ಅವಧಿಯಲ್ಲಿ ಗುರುತಿನ ಚೀಟಿಯನ್ನು ಧರಿಸದಿರುವುದು, ಅಧಿಕಾರಿ/ ಸಿಬ್ಬಂದಿಗಳ ಹೆಸರು ಮತ್ತು ಹುದ್ದೆಯ ನಾಮ ಫಲಕಗಳನ್ನು ಅಳವಡಿಸದಿರುವ ಬಗ್ಗೆ ದೂರುಗಳು ಸ್ವೀಕೃತವಾಗಿರುವುದರಿಂದ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕೆಳಕಂಡ ಸೂಚನೆಗಳನ್ನು ಪಾಲಿಸಲು ಸೂಚಿಸಿದೆ ಎಂದು ಹೇಳಿದೆ.

* ನಿಯಮಗಳ ಪ್ರಕಾರ ಕಛೇರಿಗೆ ಬರುವ ವೇಳೆ ಹಾಗೂ ಕಛೇರಿಯಿಂದ ಹೊರಡುವ ವೇಳೆಯನ್ನು ಪಾಲನೆ ಮಾಡುವುದು.

* ಕಛೇರಿ ಅವಧಿ ಪೂರ್ಣವಾಗುವವರೆಗೆ ತಮಗೆ ನಿಗದಿಪಡಿಸಿದ ಸ್ಥಾನದಲ್ಲಿ ಇದ್ದು ಕರ್ತವ್ಯ ನಿರ್ವಹಿಸತಕ್ಕದ್ದು.

* ಕಛೇರಿ ಸಮಯದಲ್ಲಿ ನೌಕರರು/ ಅಧಿಕಾರಿಗಳು ಕಛೇರಿ ಕೆಲಸದ ನಿಮಿತ್ತ ತೆರಳಬೇಕಾಗಿದ್ದಲ್ಲಿ, ಚಲನ-ವಲನ ವಹಿಯಲ್ಲಿ ಸಕಾರಣವನ್ನು ನಮೂದಿಸಿ, ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯತಕ್ಕದ್ದು.

* ಕರ್ತವ್ಯದ ಅವಧಿಯಲ್ಲಿ ಅಧಿಕಾರಿಗಳು/ ಸಿಬ್ಬಂದಿಗಳು ಕಡ್ಡಾಯವಾಗಿ ಇಲಾಖೆಯಿಂದ ಪಡೆದ ಗುರುತಿನ ಚೀಟಿಯನ್ನು ಕೊರಳಿಗೆ ಧರಿಸುವುದು.

* ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ/ ಅಧಿಕಾರಿಗಳು ತಾವು ಕುಳಿತು ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ಅಧಿಕಾರಿ/ ಸಿಬ್ಬಂದಿಗಳು ಹೆಸರು ಮತ್ತು ಹುದ್ದೆ ಸೂಚಿಸುವ ನಾಮ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳತಕ್ಕದ್ದು.

* ಹಿರಿಯ ನಾಗರಿಕರು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು.

* ಯಾವುದೇ ರೀತಿಯ ಪತ್ರಗಳು ಬಂದಾಗ ಕಛೇರಿ ಕೈಪಿಡಿಯನ್ವಯ ಕಾರ್ಯ ನಿರ್ವಹಿಸುವುದು.

* ಕಡತಗಳ ಚಲನವಲನಗಳ ಬಗ್ಗೆ ನಿಗಾವಹಿಸುವುದು.

* ಇ-ಆಫೀಸ್ ಲಭ್ಯವಿರುವ ಕಡೆ ಕಡತ/ ಸ್ವೀಕೃತಿಪತ್ರ ಪರಿಶೀಲಿಸಿ ತುರ್ತಾಗಿ ನಿಯಮಗಳನ್ವಯ ವಿಲೇವಾರಿ ಮಾಡುವುದು.

ಅಲ್ಲದೇ ಸುತ್ತೋಲೆಯಲ್ಲಿ ಈ ಮೇಲಿನ ನಿಯಮಗಳನ್ನು ಪಾಲಿಸದಿದ್ದಲ್ಲಿ CCA ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಈಗಾಗಲೇ ಕರ್ನಾಟಕ ಸರ್ಕಾರ ತನ್ನ ನೌಕರರ ಗುರುತಿನ ಚೀಟಿ ಟ್ಯಾಗ್‌ ವಿನ್ಯಾಸವನ್ನು ಬದಲಿಸಿದೆ. ಹೊಸದಾಗಿ ಕೆಂಪು-ಹಳದಿ ಬಣ್ಣಗಳನ್ನು ಒಳಗೊಂಡಿರುವ ನೂತನ ಟ್ಯಾಗ್ ಪರಿಚಯಿಸಿದ್ದು, ಕರ್ತವ್ಯದ ಅವಧಿಯಲ್ಲಿ ಅಧಿಕಾರಿಗಳು/ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಕೊರಳಿಗೆ ಧರಿಸಬೇಕು ಎಂದು ವಿವಿಧ ಸುತ್ತೋಲೆಗಳ ಮೂಲಕ ಮಾಹಿತಿ ನೀಡಿದೆ. ಆದರೂ ಸಹ ನೌಕರರು/ ಸಿಬ್ಬಂದಿ ಅದನ್ನು ಧರಿಸುತ್ತಿಲ್ಲ ಎಂಬ ದೂರುಗಳ ಹಿನ್ನಲೆಯಲ್ಲಿ ಹೊಸ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಅಲ್ಲದೇ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ/ ಅಧಿಕಾರಿಗಳು ತಾವು ಕುಳಿತು ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ಅಧಿಕಾರಿ/ ಸಿಬ್ಬಂದಿಗಳು ಹೆಸರು ಮತ್ತು ಹುದ್ದೆ ಸೂಚಿಸುವ ನಾಮ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳತಕ್ಕದ್ದು ಎಂದು ಈ ಹಿಂದೆ ಸುತ್ತೋಲೆಯಲ್ಲಿ ಸೂಚನೆಯನ್ನು ನೀಡಲಾಗಿತ್ತು.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button