ಸದಾ ಪರೀಕ್ಷಾ ಅಕ್ರಮಗಳಿಂದ ಸುದ್ದಿಯಲ್ಲಿರುವ ಕಲಬುರಗಿಯಲ್ಲಿ ಇದೀಗ ಮತ್ತೊಂದು ಅಕ್ರಮ: ನಕಲಿ ಅಂಕಪಟ್ಟಿ ಮಾಫಿಯಾ

ಕಲಬುರಗಿ, ಫೆಬ್ರವರಿ 10: ಸದಾ ಪರೀಕ್ಷಾ ಅಕ್ರಮಗಳಿಂದ ಸುದ್ದಿಯಲ್ಲಿರುವ ಕಲಬುರಗಿಯಲ್ಲಿ ಇದೀಗ ಮತ್ತೊಂದು ಅಕ್ರಮದ ಆರೋಪ ಕೇಳಿ ಬಂದಿದೆ. ಎಸ್ಎಸ್ಎಲ್‌ಸಿ ಅಂಕಪಟ್ಟಿಯನ್ನು ಪೋರ್ಜರಿ (fake marks cards) ಮಾಡಿ ಸರ್ಕಾರಿ ಹುದ್ದೆ ಪಡೆದಿದ್ದು ಬಟಾಬಯಲಾಗಿದೆ. ಆ ಮೂಲಕ ನಕಲಿ ಅಂಕಪಟ್ಟಿ ಮಾಫಿಯಾ ಹುಟ್ಟಿಕೊಂಡಿದೆಯಾ ಎನ್ನೋ ಆತಂಕ ಶುರುವಾಗಿದೆ.
ಕಲಬುರಗಿ ಅಂದರೆ ಸಾಕು ಪರೀಕ್ಷಾ ಅಕ್ರಮಗಳ ತವರು ಎನ್ನೋ ಕುಖ್ಯಾತಿ ಪಡೆದಿತ್ತು. ಇದೀಗ ಅದೇ ಸಾಲಿಗೆ ಮಗದೊಂದು ಅಕ್ರಮ ಸೆರ್ಪಡೆಯಾಗಿರುವ ಆರೋಪ ಕೇಳಿ ಬಂದಿದೆ. ಅದೆನೆಪ್ಪಾ ಅಂದರೆ ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳುವ ಗ್ಯಾಂಗ್ ತಲೆ ಎತ್ತಿದಿಯಾ ಎನ್ನೋ ಅನುಮಾನ ಮೂಡಿದೆ.
ಯಾಕೆಂದರೆ ಇಂದು ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಇದಕ್ಕೆ ಸಾಕಷ್ಟು ಪುಷ್ಟಿ ನೀಡುತ್ತಿದೆ.ಇತ್ತೀಚೆಗೆ ಅಂದರೆ 2023ರ ಡಿಸೆಂಬರ್ 21 ರಂದು ಕಲಬುರಗಿ ವಿಭಾಗದ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಇನ್ನೂ ಈ ಹುದ್ದೆ ಗಿಟ್ಟಿಸಿಕೊಳ್ಳಲು ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಬೀರಪ್ಪ ಎಂಬ ಯುವಕ ನಕಲಿ ಎಸ್ಎಸ್ಎಲ್‌ಸಿ ಅಂಕಪಟ್ಟಿ ನೀಡಿದ್ದ ಎನ್ನೋದು ಬಟಾ ಬಯಲಾಗಿದೆ. ತನ್ನ ಮೂಲ ಅಂಕಪಟ್ಟಿಯನ್ನೆ ಪೋರ್ಜರಿ ಮಾಡಿ ಅರಣ್ಯ ವೀಕ್ಷಕ ಹುದ್ದೆ ಪಡೆದಿದ್ದ. ಅದಾದ ಬಳಿಕ ಬೀರಪ್ಪನ ನಕಲಿ ಅಂಕಟ್ಟಿಯ ಬಗ್ಗೆ ಅರ್ಜಿ ಹಾಕಿದ ಇತರೆ ಅಭ್ಯರ್ಥಿಗಳಿಗೆ ಹಲವು ಅನುಮಾನಗಳು ಬಂದಾಗ ಬೀರಪ್ಪನ ಎಸ್ಎಸ್ಎಲ್‌ಸಿ ಅಂಕಪಟ್ಟಿಯ ಬಗ್ಗೆ ದೂರು ನೀಡಿದ್ದಾಗ, ಬೀರಪ್ಪನ ನಕಲಿ ಅಂಕಪಟ್ಟಿಯ ಅಸಲಿ ಬಣ್ಣ ಬಯಲಾಗಿದೆ.


