ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್: ವಸತಿ ಶಾಲೆ ತೆರೆಯಲು ಸರ್ಕಾರ ತೀರ್ಮಾನ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಹಿತಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಅದೇ ವಸತಿ ಶಾಲೆಯನ್ನು ತೆರೆಯಲು ತೀರ್ಮಾನಿಸಿರುವುದಾಗಿ ಹೇಳಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಹಿತಿ ಹಂಚಿಕೊಂಡಿದ್ದು, ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡಲು, ಮೊರಾರ್ಜಿ ವಸತಿ ಶಾಲೆಯ ಮಾದರಿಯಲ್ಲಿಯೇ ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆ ತೆರೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹೊರಗುತ್ತಿಗೆ ನೌಕರರಿಗೆ ಸಮರ್ಪಕ ವೇತನ ನೀಡುವ ಸಲುವಾಗಿ ಪ್ರತಿ ಜಿಲ್ಲೆಯಲ್ಲೂ ಸೊಸೈಟಿ ತೆರೆಯಲಾಗುವುದು. 500 ನೋಂದಾಯಿತ ಕಾರ್ಮಿಕರಿಗೆ ಒಂದರಂತೆ ಸೊಸೈಟಿ ತೆರೆಯಲಾಗುವುದು. ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಹಂತ ಹಂತವಾಗಿ ಕಾರ್ಯಗತವಾಗಲಿದೆ’ ಎಂದರು.
‘2007ರಿಂದ 2025 ರವರೆಗೆ ಕಟ್ಟಡ ಹಾಗೂ ಇತರೆ ಕಾರ್ಮಿಕರು ಹೆಚ್ಚಾಗಿದ್ದಾರೆ. ನಾನು ಅಧಿಕಾರ ವಹಿಸಿಕೊಂಡಾಗ 54 ಲಕ್ಷ ಕಾರ್ಮಿಕ ಕಾರ್ಡ್ ನೀಡಲಾಗಿತ್ತು. 20 ಲಕ್ಷ ನಕಲಿ ಕಾರ್ಡ್ ಪತ್ತೆ ಹಚ್ಚಲಾಗಿದೆ. ಸದ್ಯ 34 ಲಕ್ಷ ಅಧಿಕೃತ ಕಾರ್ಡ್‌ಗಳನ್ನು ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ’ ಎಂದರು.
‘ನವೆಂಬರ್ 15ರಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಡಲಿದ್ದಾರೆ’ ಎಂಬ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಮೊದಲು ಅವರ ಪ್ರಧಾನಿಯನ್ನು ಬದಲಿಸಲಿ. ನಿತಿನ್ ಗಡ್ಕರಿ ಅಥವಾ ಬೇರೆ ಯಾರನ್ನಾದರೂ ಮಾಡಲಿ. ಇದರಿಂದ ದೇಶ ಉಳಿಯುತ್ತದೆ’ ಎಂದು ತಿರುಗೇಟು ನೀಡಿದರು.



