ಯಾವ ಶಾಸಕನ ಮಗ ಆದ್ರೂ ನನಗೆ ಕೌಂಟ್ ಆಗಲ್ಲ! ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಆಕ್ರೋಶ

ಮಹಿಳಾ ಅಧಿಕಾರಿಗೆ ಸಂಗಮೇಶ್ ಪುತ್ರ ಬಸವೇಶ್ ನಿಂದನೆ ಕುರಿತು ಬೀದರ್‌ನಲ್ಲಿ ಪ್ರತಿಕ್ರಿಯೆ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ಮಹಿಳಾ ಆಯೋಗದಿಂದ ಸಮನ್ಸ್ ನೋಟಿಸ್ ಕಳುಹಿಸಲಾಗಿದೆ. ಯಾವುದೇ ಶಾಸಕನ ಮಗನಾಗಿದ್ರೂ ನನಗೆಲ್ಲಾ ಕೌಂಟ್ ಆಗುವುದಿಲ್ಲ. ಕೆಟ್ಟ ಪದಗಳಿಂದ ನಿಂದನೆಯಾಗಿರುವುದು ನಮಗೆ ಮುಖ್ಯವಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಆಕ್ರೋಶ
ಪ್ರಕರಣದ ಕುರಿತು ಶಿವಮೊಗ್ಗದ ಎಸ್‌ಪಿ ಅವರಿಗೆ ಸಂಪೂರ್ಣ ವರದಿ ಕೊಡುವಂತೆ ಕೇಳಿದ್ದೇನೆ. ಯಾರೇ ಆಗಿದ್ರೂ ತಪ್ಪು ತಪ್ಪೇ. ಅಧಿಕಾರಿ ಆಗಿರಲಿ, ಸಾಮಾನ್ಯ ಮಹಿಳೆ ಆಗಿರಲಿ ಈ ರೀತಿ ಮಾಡಕೂಡದು ಎಂದು ಬೀದರ್‌ನಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಅಧಿಕಾರಿ ಜ್ಯೋತಿ ಮೊದಲು ಎಸ್‌ಪಿ ಕಚೇರಿಗೆ ದೂರು ನೀಡುತ್ತಾರೆ. ಬಳಿಕ ಭದ್ರಾವತಿಯ ಡಿವೈಎಸ್‌ಪಿ ಕಚೆರಿಗೂ ದೂರು ನೀಡಿದ್ದಾರೆ. ಇದಾದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಿದ್ದೇನೆ. ಅವತ್ತು ದಾಳಿ ಮಾಡಿದಾಗ ಏನ್ ಏನ್ ಸಮಸ್ಯೆ ಆಯ್ತೋ ಆ ಬಗ್ಗೆ ದೂರು ನೀಡಿದ್ದೇನೆ ಎಂದಿದ್ದಾರೆ.
ಮರಳು ಮಾಫಿಯಾ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ನಮ್ಮ ಮೇಲೆ ಗಾಡಿ ಹತ್ತಿಸ್ರೋ ಅಂತ ಹೇಳುತ್ತಿದ್ರು. ಆಗ ಭಯ ಆಯ್ತು ಪೋನ್ ಕಾಲ್ ಸಹ ಬಂತು ಯಾಕೋ ಸರಿಯಾಗಲ್ಲ ಅಂತ ವಾಪಾಸ್ಸು ಬಂದೆ, ಅವತ್ತು ದಾಳಿ ವೇಳೆ ಬೆದರಿಕೆ ಸಹ ಬಂತು. ಅಧಿಕಾರಿಗಳು ಸಹ ನನಗೆ ಸಪೋರ್ಟ್ ನೀಡಿದ್ದಾರೆ ಎಂದರು ಅಧಿಕಾರಿ ಜ್ಯೋತಿ ಹೇಳಿದ್ದಾರೆ.



