ಗೋವಾ ಮಾಜಿ ಶಾಸಕರ ಮೇಲೆ ಹಲ್ಲೆ ನಡೆಸಿ ಅವರ ಸಾವಿಗೆ ಕಾರಣವಾಗಿದ್ದು, ಟ್ಯಾಕ್ಸಿ ಚಾಲಕ. ಬೆಳಗಾವಿ ಆಟೋ ಚಾಲಕ ಮತ್ತು ಮಾಲೀಕರ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ

ಗೋವಾ ಮಾಜಿ ಶಾಸಕರ ಮೇಲೆ ಹಲ್ಲೆ ನಡೆಸಿ ಅವರ ಸಾವಿಗೆ ಕಾರಣವಾಗಿದ್ದು, ಟ್ಯಾಕ್ಸಿ ಚಾಲಕ. ಆದರೇ, ಆಟೋ ಚಾಲಕನೆಂದು ತಪ್ಪಾಗಿ ಜನರಲ್ಲಿ ಭಾವನೆ ಮೂಡಿದ್ದು, ಅದನ್ನು ನಿವಾರಿಸಿ ಆಟೋ ಚಾಲಕರ ವ್ಯವಸಾಯದ ಮೇಲೆ ಬೀಳುತ್ತಿರುವ ಪರಿಣಾಮವನ್ನು ತಪ್ಪಿಸಬೇಕೆಂದು ಬೆಳಗಾವಿ ಆಟೋ ಚಾಲಕ ಮತ್ತು ಮಾಲೀಕರ ಸಂಘವು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದೆ.
ಇಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಸದಸ್ಯರು ಗೋವಾ ಮಾಜಿ ಶಾಸಕರ ಮೇಲೆ ಹಲ್ಲೆ ನಡೆಸಿ ಅವರ ಸಾವಿಗೆ ಕಾರಣವಾಗಿದ್ದು, ಟ್ಯಾಕ್ಸಿ ಚಾಲಕ. ಆದರೇ, ಆಟೋ ಚಾಲಕನೆಂದು ತಪ್ಪಾಗಿ ಜನರಲ್ಲಿ ಮೂಡಿರುವ ಭಾವನೆಯನ್ನು ನಿವಾರಿಸಲು ಮುಂದಾಗಬೇಕೆಂದು ಆಗ್ರಹಿಸಿ, ಜಿಲ್ಲಾಧಿಕಾರಿಗಳಿಗೆ ಮನವಿಯಲ್ಲಿ ಸಲ್ಲಿಸಿದರು.
ಬೆಳಗಾವಿಯಲ್ಲಿ ಮೊನ್ನೆ ಗೋವಾದ ಮಾಜಿ ಶಾಸಕರ ಮೇಲೆ ಹಲ್ಲೆ ಮತ್ತು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕರ ಹೆಸರನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಆದರೇ ಗೋವಾದ ಮಾಜಿ ಶಾಸಕರ ಮೇಲೆ ಹಲ್ಲೆ ಮಾಡಿದ್ದು, ಆಟೋ ಚಾಲಕನಲ್ಲಿ, ಟ್ಯಾಕ್ಸಿ ಚಾಲಕ. ಆಟೋ ಚಾಲಕರ ಹೆಸರನ್ನು ಹೆಸರನ್ನು ತಪ್ಪಾಗಿ ಅರ್ಥೈಸುತ್ತಿರುವುದರಿಂದ ಪ್ರಯಾಣಿಕರು ಆಟೋ ಬಳಸಲು ಮುಂದಾಗುತ್ತಿಲ್ಲ. ಹೀಗಾದರೇ, ಜೀವನ ನಡೆಸುವುದು ಹೇಗೆ ಎಂದು ಆಟೋ ಯುನಿಯನ್ ಅಧ್ಯಕ್ಷ ಮನ್ಸೂರ್ ಅಬ್ದುಲ್ ಗಫಾರ್ ಹೊನಗೇಕರ ಪ್ರಶ್ನಿಸಿದರು.
ಗೋವಾದ ಮಾಜಿ ಶಾಸಕರ ಮೇಲೆ ಹಲ್ಲೆ ಮಾಡಿದ್ದು, ಟ್ಯಾಕ್ಸಿ ಚಾಲಕ ಆದರೇ ಜನರಲ್ಲಿ ಆಟೋ ಚಾಲಕನೆಂದು ತಪ್ಪು ಭಾವನೆ ಮೂಡ ತೊಡಗಿದೆ. ಇದರಿಂದಾಗಿ ಈ ದ್ವಂದ್ವವನ್ನು ಸರಿಪಡಿಸಬೇಕೆಂದು ಆಟೋ ಚಾಲಕರು ಮತ್ತು ಮಾಲೀಕರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನೂರಾರು ಜನ ಆಟೋ ಚಾಲಕರು ಮತ್ತು ಮಾಲೀಕರು ಭಾಗಿಯಾಗಿದ್ಧರು.



