ಮರಾಠಾ ಸಮಾಜದ ಏಳ್ಗೆಗಾಗಿ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಕಾರ್ಮಿಕ ಸಚಿವ ಸಂತೋಷ ಲಾಡ್

ಮರಾಠಾ ಸಮಾಜದ ಏಳ್ಗೆಗಾಗಿ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಸಮಾಜಕ್ಕಾಗಿ ಸಮಾಜಬಾಂಧವರು ಸಮಯವನ್ನು ತೆಗೆದಿರಿಸಬೇಕೆಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಬೆಳಗಾವಿಯ ಮರಾಠಾ ಸಮಾಜ ಬಾಂಧವರೊಂದಿಗೆ ಕಾರ್ಮಿಕ ಸಚಿವ ಸಂತೋಷ ಲಾಡ್, ಕ್ಯಾಂಪನ ಮೆಸಾನಿಕ್ ಹಾಲನಲ್ಲಿ ಸಭೆ ನಡೆಸಿದರು.

ಸಮಾಜ ಸಂಘಟನೆಯ ಧ್ಯೇಯದೊಂದಿಗೆ ಒಗ್ಗಟ್ಟಿನಿಂದ ಮುಂದಾಗಬೇಕಾಗಿದೆ. ಆರ್ಥಿಕ, ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮರಾಠಾ ಸಮಾಜವನ್ನು ಸದೃಢಗೊಳಿಸುವುದು ಅತ್ಯವಶ್ಯಕವಾಗಿದೆ. ಸಮಾಜ ಬಾಂಧವರು ಮೊದಲೂ ಸಮಾಜದ ಸಂಘಟನೆಗಾಗಿ ಮುಂದಾಗಬೇಕು. ಜನರಲ್ಲಿ ಜಾಗೃತಿ ಇರಬೇಕೆ ಹೊರತು ಭಾವನಾತ್ಮಕ ವಿಷಯಗಳಲ್ಲ. ಛತ್ರಪತಿ ಶಿವಾಜೀ ಮಹಾರಾಜರ ಇತಿಹಾಸವನ್ನು ಕೂಡ ಯಾರು ಸರಿಯಾಗಿ ಅರಿಯುತ್ತಿಲ್ಲ. ಅವರ ಹೆಸರನ್ನು ದುರ್ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಈ ವೇಳೆ ಇನ್ನೋರ್ವ ಗಣ್ಯರು ಮಾತನಾಡಿ, ಕಾನೂನು ರಚಿಸುವುದಕ್ಕಿಂತ ಕಾನೂನನ್ನು ಜಾರಿಗೊಳಿಸುವುದು ಮಹತ್ತರವಾಗಿದೆ. ಮರಾಠಾ ಸಮಾಜವು ಅನ್ಯಾಯ ಮಾಡುವುದಿಲ್ಲ. ಆದರೇ ಈಗ ಸಮಾಜದ ವೇಳೆ ಅನ್ಯಾಯ ಮಾಡಲಾಗುತ್ತಿದೆ. ಇದು ದುರ್ದೈವ ಸಂಗತಿ. ಎಲ್ಲ ಅನ್ಯಾಯಗಳನ್ನು ಸಮಾಜ ಸಹಿಸಿಕೊಳ್ಳುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಕಾಂತ ಕದಮ್, ಜಯರಾಝ್ ಹಲಗೇಕರ, ಅರುಣ ಮಾನೆ, ಮೀಲಿಂದ್ ಹಲಗೇಕರ, ಮೀಲಿಂದ್ ಭಾತಕಾಂಡೆ, ವಿಜಯ ಜಾಧವ್, ನಿರಂಜನ ಬಸ್ತವಾಡಕರ, ಬಾಪೂ ಸೂರ್ಯವಂಶಿ, ಶಿವಾಜೀರಾವ್ ಪಾಟೀಲ್, ರವಿ ನಿರ್ಮಳಕರ, ರವೀಂದ್ರ ಮೆಂಡಕೆ, ಪ್ರಮೋದ ಗುಂಜಿಕರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.


