FRAUD : PDO ಯೋಗೇಂದ್ರ ಕಡೆಗೂ ಅರೆಸ್ಟ್ ! ವಿಧಾನಸೌಧದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಹಣದೋಚಿದ್ದ PDO ಅಂದರ್

ಬೆಂಗಳೂರು : ಉದ್ಯೋಗ ಕೊಡಿಸುವ ನೆಪದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿ ವಂಚಿಸಿದ್ದ PDO ಯೋಗೇಂದ್ರ ಕಡೆಗೂ ಅಂದರ್ ಆಗಿದ್ದಾನೆ. ಪೊಲೀಸರ ಕಣ್ಣುತಪ್ಪಿಸಿ ಓಡಾಡ್ತಿದ್ದ ಅಸಾಮಿಯನ್ನು ಬೆಂಗಳೂರಿನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಒಬ್ಬರಿಗೆ ವಿಧಾನಸೌಧ ಸ್ವೀಕರ್ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯೋಗೇಂದ್ರರಿಂದ ಮೋಸ ಎಸಗಲಾಗಿತ್ತು.
ಮತ್ತೊಬ್ಬರಿಗೆ ಗೋಲ್ಡ್ ಬ್ಯುಸಿನೆಸ್ ಹೆಸರಲ್ಲಿ ವಂಚನೆಗೈಯ್ಯಲಾಗಿತ್ತು. ಇನ್ನೊಬ್ಬರಿಗೆ ಕ್ರಿಪ್ಟೋ ಕರೆನ್ಸಿ, ಟೆಂಬರ್ ಬ್ಯುಸಿನೆಸ್ ಹೆಸರಲ್ಲಿ ಟೋಪಿ ಹಾಕಲಾಗಿತ್ತು. ಇದೀಗ ವಂಚಕ ಪಿಡಿಓ ಯೋಗೇಂದ್ರ ಬಂಧನವಾಗಿದೆ.ದುಬೈನಲ್ಲಿ ತಲೆಮರೆಸಿಕೊಂಡಿದ್ದ ಯೋಗೇಂದ್ರ ಬೆಂಗಳೂರಿಗೆ ವಾಪಸ್ ಆದ ತಕ್ಷಣ ಲಾಕ್ ಆಗಿದ್ದಾನೆ.
ಒಬ್ಬೊಬ್ಬರಿಗೆ ಕೋಟಿಗಟ್ಟಲೇ ಟೋಪಿ ಹಾಕಿರೋ ವಂಚಕ ಯೋಗೇಂದ್ರ, ದುಬೈಗೆ ಪರಾರಿಯಾಗಿದ್ದನು. ಬೆಂಗಳೂರಿಗೆ ವಾಪಸ್ ಆದ ವೇಳೆ ಏರ್ಪೋರ್ಟ್ ನಲ್ಲಿಯೇ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪಿಡಿಓ ಯೋಗೇಂದ್ರ ವಿರುದ್ಧ ಚೆನ್ನಮ್ಮನಕೆರೆ, ಯಲಹಂಕ ನ್ಯೂಟೌನ್ ,ವಿವಿ ಪುರಂ,ಹಿರಿಯೂರು,ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಆರೋಪಿ ವಿರುದ್ಧ ಎಲ್ ಓಸಿ ಕೂಡ ಜಾರಿಯಾಗಿತ್ತು.ರಾಜ್ಯದ ವಿವಿಧ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.


