Local News
Trending

ಬೆಳಗಾವಿಯಲ್ಲಿನ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂದು ಬೆಳಗಾವಿಯಲ್ಲಿ ರೌಡಿಶೀಟರಗಳ ಪರೇಡ್: ಡಿಸಿಪಿ ರೋಹನ್ ಜಗದೀಶ್ ಖಡಕ್ ಎಚ್ಚರಿಕೆ..

ಬೆಳಗಾವಿಯಲ್ಲಿನ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂದು ಬೆಳಗಾವಿಯಲ್ಲಿ ರೌಡಿಶೀಟರಗಳ ಪರೇಡ್ ನಡೆಸಲಾಯಿತು. ಇದೇ ವೇಳೆ ಕನ್ನಡ ಹೋರಾಟಗಾರನ ಮೇಲೆ ದಾಖಲಾದ ರೌಡಿಶೀಟರ್ ಕೇಸನ್ನು ಹಿಂಪಡೆಯಬೇಕೆಂದು ಕನ್ನಡ ಹೋರಾಟಗಾರರು ಒತ್ತಾಯಿಸಿದರು. ಗುರುವಾರದಂದು ಬೆಳಗಾವಿಯ ಖಡೇ ಬಝಾರ್ ಪೊಲೀಸ ಠಾಣೆಯ ಉಪವಿಭಾಗದ ವ್ಯಾಪ್ತಿಯಲ್ಲಿನ 4 ಪೊಲೀಸ್ ಠಾಣೆಯ ರೌಡಿಶೀಟರಗಳ ಪರೇಡನನ್ನು ನಡೆಸಲಾಯಿತು.

ಯಾವುದೇ ಕಾರಣಕ್ಕೂ ಕಾನೂನುನ್ನು ಕೈಗೆ ತೆಗೆದುಕೊಳ್ಳಬಾರದು. ಯಾವುದೇ ತಂಟೆ ತಕರಾರುಗಳಲ್ಲಿ ಭಾಗಿಯಾಗಬಾರದು. ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಅಪರಾಧ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆಯನ್ನು ಡಿಸಿಪಿ ರೋಹನ್ ಜಗದೀಶ್ ನೀಡಿದರು. ಹಳೆಯ ಪ್ರಕರಣಗಳು ದಾಖಲಿರುವ ರೌಡಿಶೀಟರಗಳ ಪರೇಡನನ್ನು ನಡೆಸಲಾಗಿದೆ. ನಗರ ವ್ಯಾಪ್ತಿಯಲ್ಲಿ 1050 ಜನರು ರೌಡಿಶೀಟರಗಳಿದ್ದಾರೆ.

ಖಡೇ ಬಝಾರ್ ಎಸಿಪಿ ಶೇಖರಪ್ಪ ಸೇರಿದಂತೆ ಇನ್ನುಳಿದ ನಾಲ್ಕು ಠಾಣೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಎಲ್ಲ ರೌಡಿಶೀಟರಗಳ ಮಾಹಿತಿಯನ್ನು ಪರಿಶೀಲಿಸಿ, ಕಾನೂನು ರೀತಿಯಲ್ಲಿ ಸೂಕ್ತ ತಿಳುವಳಿಕೆಯನ್ನು ಹೇಳಲಾಗಿದೆ. ಈಗಾಗಲೇ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಪರೇಡ್ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಮಾರ್ಕೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಪರೇಡ್ ನಡೆಸಲಾಗುವುದು. ಕಳೆದ ಮೂರು ವರ್ಷದಲ್ಲಿ ಸುಮಾರು 40 ಜನರನ್ನು ಗಡಿಪಾರು ಮಾಡಲಾಗಿದೆ. ಈ ಬಾರಿಯೂ ಖಡೇ ಬಝಾರ್ ಠಾಣೆಯಿಂದ ಮತ್ತೇ ಮೂರು ಗಡಿಪಾರು ಪ್ರಸ್ತಾವಣೆಗಳನ್ನು ಸಲ್ಲಿಸಲಾಗಿದೆ. ಇನ್ನು ಒಳ್ಳೆಯ ನಡತೆಗೆ ಸಂಬಂಧಿಸಿದಂತೆ ಶೂರೀಟಿಯನ್ನು ನೀಡಲಾಗುತ್ತದೆ. ಒಂದೂವರೆ ವರ್ಷದಲ್ಲಿ 17 ಶೂರೀಟಿ ಬಾಂಡಗಳನ್ನು ಪಡೆದುಕೊಳ್ಳಲಾಗಿದೆ. 1 ಲಕ್ಷ 77 ಸಾವಿರ ರೂಪಾಯಿ ದಂಡವನ್ನು ಕೂಡ ಕ್ರಿಮಿನಲ್ ಕೇಸನಲ್ಲಿ ಭಾಗಿಯಾದ ರೌಡಿಶೀಟರಗಳಿಗೆ ವಿಧಿಸಲಾಗಿದೆ ಎಂದರು.

ಎಂ.ಇ.ಎಸ್. ನಾಯಕರಿಗೆ 2022 ರಲ್ಲಿ ಮಸಿ ಬಳಿದ ಕನ್ನಡ ಹೋರಾಟಗಾರನ ವಿರುದ್ಧವೂ ಬೆಳಗಾವಿ ಪೊಲೀಸರು ರೌಡಿಶೀಟರ್ ಕೇಸ್ ದಾಖಲಿಸಲಾಗಿದೆ. ಈ ಕುರಿತು ಮಾತನಾಡಿದ ಕನ್ನಡ ಹೋರಾಟಗಾರ ಅನೀಲ ದಂಡಿನಮನಿ, ಸಿಎಂ ಸಿದ್ಧರಾಮಯ್ಯ ತಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕನ್ನಡಪರ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ರದ್ಧುಗೊಳಿಸುವ ಭರವಸೆಯನ್ನು ನೀಡಿದ್ದರು. ಆದರೇ, ಇಲ್ಲಿಯ ವರೆಗೂ ರದ್ಧುಗೊಳಿಸಿಲ್ಲ. ಜೈ ಮಹಾರಾಷ್ಟ್ರ ಘೋಷಣೆ ಕೂಗಿದವರ ವಿರುದ್ಧ ಕ್ರಮಕೈಗೊಳ್ಳದ ಸರ್ಕಾರ ಕನ್ನಡ ಹೋರಾಟಗಾರರ ಮೇಲೆ ಕೇಸ್ ದಾಖಲಿಸುವುದು ಸರಿಯೇ? ಎಂದು ಪ್ರಶ್ನಿಸಿದರು.

ಇನ್ನು ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ ಅವರು ಎಂ.ಇ.ಎಸ್. ವಿರುದ್ಧ ಪ್ರತಿಭಟಿಸಿದ ಕನ್ನಡ ಹೋರಾಟಗಾರ ಅನೀಲ ದಂಡಿನಮನಿ ಮೇಲೆ ಹಾಕಿದ ರೌಡಿಶೀಟರ್ ಕೇಸನ್ನು 4 ವರ್ಷವಾದರೂ ತೆರುವುಗೊಳಿಸಿಲ್ಲ. ಪ್ರತಿಬಾರಿಯೂ ಕನ್ನಡ ಹೋರಾಟಗಾರರ ಮೇಲೆ ಅನ್ಯಾಯ ಮಾಡಲಾಗುತ್ತಿದೆ. ರಾಜಕಾರಣಿಗಳು ಮತ್ತು ಪೊಲೀಸರು ಕರ್ನಾಟಕದಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿದರೂ ಯಾಕೆ ಕ್ರಮ ಕೈಗೊಳ್ಳಲ್ಲ?
ಮೂರು ವರ್ಷ ಕಳೆದರೂ ಸಿಎಂ ಕನ್ನಡ ಹೋರಾಟಗಾರರ ಮೇಲಿನ ಕೇಸ್ ಹಿಂತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಹೋರಾಟಗಾರನ ಮೇಲಿನ ರೌಡಿಶೀಟರ್ ಕೇಸಗೆ ಸಂಬಂಧಿಸಿದಂತೆ ಮಾತನಾಡಿದ ಡಿಸಿಪಿ ರೋಹನ್ ಜಗದೀಶ್ ಅವರು, ಅವರ ಮೇಲೆ ನಿಗಾವಹಿಸಲು ಈ ಕೇಸನ್ನು ದಾಖಲಿಸಲಾಗಿದೆ ಎಂದರು.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button