Local News

ಬೆಳಗಾವಿಯಲ್ಲಿ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನ ಬೆಳಗಾವಿಗರಿಂದ ಉತ್ತಮ ಪ್ರತಿಕ್ರಿಯೆ

ಬೆಳಗಾವಿಯಲ್ಲಿ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನ

ಬೆಳಗಾವಿಯಲ್ಲಿ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನ
ಬೆಳಗಾವಿಗರಿಂದ ಉತ್ತಮ ಪ್ರತಿಕ್ರಿಯೆ
ರಾಜ ಮಹಾರಾಜರ ಕಾಲದ ನಾಣ್ಯಗಳು
ಚಿಕ್ಕಮಕ್ಕಳಿಂದ ಸಂತಸ ವ್ಯಕ್ತ

ರೋಟರಿ ಕ್ಲಬ್ ಆಫ್ ವೇಣುಗ್ರಾಮ, ರೋಟ್ರ್ಯಾಕ್ಟ್ ಕ್ಲಬ್ ಆಫ್ ವೇಣುಗ್ರಾಮ ಮತ್ತು ಬಿರ್ಲಾ ಇಂಟರನ್ಯಾಷನಲ್ ಸ್ಕೂಲನ ಸಂಯುಕ್ತಾಶ್ರಯದಲ್ಲಿ ರೋಟೆರಿಯನ್ ಅರುಣ ಕಾಮುಲೆ ಅವರು ಸಂಗ್ರಹಿಸಿದ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಬೆಳಗಾವಿಯ ಹಿಂದವಾಡಿಯಲ್ಲಿರುವ ಮಹಾವೀರ ಭವನದಲ್ಲಿ ರೋಟರಿ ಕ್ಲಬ್ ಆಫ್ ವೇಣುಗ್ರಾಮ, ರೋಟ್ರ್ಯಾಕ್ಟ್ ಕ್ಲಬ್ ಆಫ್ ವೇಣುಗ್ರಾಮ ಮತ್ತು ಬಿರ್ಲಾ ಇಂಟರನ್ಯಾಷನಲ್ ಸ್ಕೂಲನ ಸಂಯುಕ್ತಾಶ್ರಯದಲ್ಲಿ ರೋಟೆರಿಯನ್ ಅರುಣ ಕಾಮುಲೆ ಅವರು ಸಂಗ್ರಹಿಸಿದ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದಕ್ಕೆ ಬೆಳಗಾವಿಗರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಈ ಕುರಿತು ಇನ್ ನ್ಯೂಸಗೆ ಮಾಹಿತಿ ನೀಡಿದ ರೋಟೆರಿಯನ್ ಅರುಣ ಕಾಮುಲೆ ಅವರು ಕಳೆದ 65 ವರ್ಷಗಳಿಂದ ನಾಣ್ಯ ಮತ್ತು ಸ್ಟ್ಯಾಂಪಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದು, 600 ವರ್ಷದ ಹಿಂದಿನ ನಾಣ್ಯಗಳಿಂದ ಇಲ್ಲಿಯ ವರೆಗಿನ ಎಲ್ಲ ತರಹದ ನಾಣ್ಯಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಬೆಂಡಬಾರ್, ಮಶಕ್, ಪಂಚಮಾರ್, ಕುಶಾನ್, ಚಂದ್ರಗುಪ್ತ ಮೌರ್ಯ ಸೇರಿದಂತೆ ರಾಜರಕಾಲದ ನಾಣ್ಯಗಳು ಇಲ್ಲಿವೆ ಎಂದರು.

ಇನ್ನು ಬೆಳಗಾವಿಯ ಹೊರಗೆ ಈ ಹವ್ಯಾಸ ಹೆಚ್ಚಾಗಿದೆ. ಇಲ್ಲಿ ಛತ್ರಪತಿ ಶಿವಾಜೀ ಮಹಾರಾಜರ ಕಾಲದ ಮತ್ತು ಬ್ರಿಟಿಷರ ಕಾಲದ ನಾಣ್ಯಗಳು ಕಾಣಸಿಕ್ಕವು. ತಾವೂ ಕೂಡ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿರುವುದಾಗಿ ನೀರಜ್ ಕಾವಳೆ ತಿಳಿಸಿದರು. ಬೈಟ್
ಅರುಣ ಕಾಮುಲೆ ಅವರು ಅತ್ಯಂತ ಸುಂದರವಾದ ಪ್ರದರ್ಶನವನ್ನು ಆಯೋಜಿಸಿದ್ದು, ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಇದ್ದವರಿಗೆ ಇದು ಪ್ರೇರಣೆಯಾಗಿದೆ ಎಂದರು. ಬೈಟ್

ಇನ್ನು ಚಿಕ್ಕಂದಿನಿಂದಲೇ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾವನ್ನು ಹೊಂದಿದ ಯೂನೂಸ್ ಪಠಾಣ ಎಂಬ ಪುಟ್ಟ ಬಾಲಕ ವಿವಿಧ ದೇಶದ ನಾಣ್ಯಗಳನ್ನು ತಾನು ಕೂಡ ಸಂಗ್ರಹಿಸಿದ್ದು, ಇಂದು ಬೆಳಗಾವಿಯಲ್ಲಿ ಇಂತಹ ಪ್ರದರ್ಶನವನ್ನು ನೋಡಿ ಸಂತಸ ವ್ಯಕ್ತಪಡಿಸಿದನು.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button