Local News

ಸಂಗೊಳ್ಳಿ ರಾಯಣ್ಣ ಮತ್ತು ಬಸವೇಶ್ವರ್ ಸೌಹಾರ್ದ ಸೊಸೈಟಿ ಠೇವಣಿ ಮರಳಿಸಲು ಆಗ್ರಹ

ಸಂಗೊಳ್ಳಿ ರಾಯಣ್ಣ ಮತ್ತು ಬಸವೇಶ್ವರ್ ಸೌಹಾರ್ದ ಸೊಸೈಟಿ ಠೇವಣಿ ಮರಳಿಸಲು ಆಗ್ರಹ

ವಾರದೊಳಗಾಗಿ ಸಮಸ್ಯೆ ಬಗೆಹರಿಸದಿದ್ದರೆ ಮಾರ್ಚ್ 3 ರಿಂದ ಹೋರಾಟ – ನ್ಯಾಯವಾದಿ ಎನ್.ಆರ್. ಲಾತೂರ್

ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೌಹಾರ್ದ ಸಹಕಾರಿ ಸೊಸೈಟಿ ಮತ್ತು ಬಸವೇಶ್ವರ ಸೌಹಾರ್ದ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಗ್ರಾಹಕರ ನ್ಯಾಯಾಲಯದ ಆದೇಶದಂತೆ ಮರಳಿಸಬೇಕೆಂದು ಗ್ರಾಹಕರು ನ್ಯಾಯವಾದಿಗಳ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು

ಬೆಳಗಾವಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಇಂದು ಜಮಾಯಿಸಿದ್ದ ಗ್ರಾಹಕರು ಸೊಸೈಟಿಗಳ ಹಾಗೂ ಸಕ್ಷಮ ಪ್ರಾಧಿಕಾರದ ಅಧಿಕಾರಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ನ್ಯಾಯವಾದಿ ಎನ್ ಆರ್ ಲಾತೂರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೌಹಾರ್ದ ಸೊಸೈಟಿ ಹಾಗೂ ಬಸವೇಶ್ವರ ಸೊಸೈಟಿಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಗ್ರಾಹಕರು ಠೇವಣಿ ಇಟ್ಟಿದ್ದರು

ಠೇವಣಿ ಅವಧಿ ಮುಗಿದ ನಂತರ ಮರಳಿಸಲು ಕೇಳಿದಾಗ ವಿಳಂಬವಾಗಿತ್ತು ತದನಂತರ ಕಾನೂನು ಕ್ರಮದಿಂದಾಗಿ ಸೊಸೈಟಿ ಮುಚ್ಚಿಹೋಯಿತು ನಂತರ ಠೇವಣಿದಾರು ಗ್ರಾಹಕರ ನ್ಯಾಯಾಲಯಕ್ಕೆ ಹೋದಾಗ ಠೇವಣಿ ಮರಳಿಸಬೇಕು ಎಂಬ ಆದೇಶ ನೀಡಿದ್ದರು. ಆದರೆ 2017ರಲ್ಲಿ ಸೊಸೈಟಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅಧಿಕಾರಿಯನ್ನು ನೇಮಿಸಿ. ಠೇವಣಿ ಇಟ್ಟಿರುವ ಗ್ರಾಹಕರ ದಾಖಲಾತಿ ಅರ್ಜಿಗಳನ್ನು ಪಡೆಯಲಾಯಿತು .ಈಗ ಅದರಲ್ಲಿ 6000 ಗ್ರಾಹಕರ ದಾಖಲಾತಿಗಳು ಸರಿ ಇಲ್ಲವೆಂದು ತಿರಸ್ಕರಿಸಲಾಗಿದೆ ಎಂದರು

ಇದರಿಂದ ಈಗಾಗಲೇ ಸಾಕಷ್ಟು ನೊಂದಿರುವ ಠೇವಣಿದಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಇದು ಖಂಡನೀಯ. ತಕ್ಷಣವೇ ಸಕ್ಷಮ ಪ್ರಾಧಿಕಾರದ ಅಧಿಕಾರಿಯನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಒಳಪಡಿಸಬೇಕು ಹಾಗೂ ಗ್ರಾಹಕರಿಗೆ ತೊಂದರೆಯಾಗುವುದರಿಂದ ಬೆಂಗಳೂರಿನಲ್ಲಿರುವ ಸಾಲ ವಸೂಲಾತಿ ನ್ಯಾಯಮಂಡಳಿಯನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕು

ಒಂದು ವಾರದ ಒಳಗಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಹಕರ ನ್ಯಾಯಾಲಯದ ಆದೇಶದಂತೆ ಒಂದು ವಾರದೊಳಗಾಗಿ ಠೇವಣಿ ಮರಳಿಸಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮಾರ್ಚ್ ಮೂರರಿಂದ ಜಿಲ್ಲಾಧಿಕಾರಿಗಳ ಕಚೇರಿದರು ಉಗ್ರ ಹೋರಾಟ ಮಾಡಲಾಗುವುದೆಂದು ನ್ಯಾಯವಾದಿ ಲಾತೂರ್ ಎಚ್ಚರಿಕೆ ನೀಡಿದರು.

ನಂತರ ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು ಠೇವಣಿದಾರರನ್ನು ಬೆಂಬಲಿಸಿ, ಅನೇಕ ನ್ಯಾಯವಾದಿಗಳು ಸಾರ್ವಜನಿಕರು ಹಾಗೂ ಠೇವಣಿದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

ಗ್ರಾಹಕರು ಆಗ್ರಹಿಸಿದ್ದು ಈ ಕುರಿತು ಠೇವಣಿದಾರರ ಅರ್ಜಿಯನ್ನು ತಿರಸ್ಕರಿಸಿರುವ ಠೇವಣಿದಾರರ

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button