ಮಂಗಳವಾರ ಬೆಳಗಾವಿಯಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರಿಂದ ಪ್ರತಿಭಟನೆ

ಬೆಳಗಾವಿಯ ಮಾರಿಹಾಳದಲ್ಲಿ ಭಾಷಾ ವಿವಾದದಿಂದ ನಡೆದ ಕಂಡಕ್ಟರ್ ಮೇಲಿನ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಮಂಗಳವಾರ ಬೆಳಗಾವಿಗೆ ಆಗಮಿಸಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಕುರಿತು ವಿಡಿಯೋ ಹೇಳಿಕೆ ನೀಡಿರುವ ಕರವೇ ರಾಜ್ಯಾಧ್ಯಕ್ಷ ಟಿ ನಾರಾಯಣಗೌಡರು, ಬೆಳಗಾವಿ ವಿಷಯದಲ್ಲಿ ಕರವೇ ಸದಾ ಕಾಲ ಹೋರಾಟ ಮಾಡುತ್ತಲೇ ಎಂಇಎಸ್ ಪುಂಡರನ್ನು ಮಟ್ಟ ಹಾಕುತ್ತಲೇ ಬಂದಿದ್ದೇವೆ.
ಇದೀಗ ಅಮಾಯಕ ಕಂಡಕ್ಟರ್ ಮೇಲೆ ನಡೆದಿರುವ ಹಲ್ಲೆಯನ್ನು ನಾವು ಖಂಡಿಸುತ್ತೇವೆ. ಕಂಡಕ್ಟರ್ ಮೇಲೆ ಹಾಕಿರುವ ಪೋಕ್ಸೋ ಪ್ರಕರಣವನ್ನು ಹಿಂಪಡೆಯಬೇಕು ಪ್ರಕರಣ ದಾಖಲಿಸಿದ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂಬುದು ಸೇರಿದಂತೆ ಕನ್ನಡ ವಿರೋಧಿ ಚಟುವಟಿಕೆಯನ್ನು ಹತ್ತಿಕ್ಕಲು ಮಂಗಳವಾರ ಬೆಳಗಾವಿಯಲ್ಲಿ ಕರವೆಯಿಂದ ಪ್ರತಿಭಟನೆ ನಡೆಸಲಿದ್ದೇವೆ ಎಂದು ನಾರಾಯಣಗೌಡ ಹೇಳಿದರು.



