ಎಂ.ಇ.ಎಸ್. (MES) ಮುಖಂಡ ಶುಭಂ ಶೇಳಕೆ ವಿರುದ್ಧ ದಾಖಲಾಯ್ತು ಪ್ರಕರಣ

ಬೆಳಗಾವಿಯಲ್ಲಿ ಕಂಡಕ್ಟರ್ ಹಲ್ಲೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಏಕೀಕರಣ ಯುವಾ ಸಮಿತಿಯ ಪ್ರಮುಖ ಶುಭಂ ಶೇಳಕೆ ವಿರುದ್ಧವೇ ಪ್ರಕರಣ ದಾಖಲಾಗಿದ್ದು, ಈ ಕೃತ್ಯಕ್ಕೆ ಬೆಂಬಲಿಸುವುದು ಸರಿಯೇ ಇದಕ್ಕೆ ಪೊಲೀಸ್ ಇಲಾಖೆಯೇ ಉತ್ತರ ನೀಡಬೇಕಿದೆ. ಬೇರೆ ಭಾಷಿಕರನ್ನು ಓಲೈಸಿ ಮರಾಠಿ ಭಾಷಿಕರ ವಿರುದ್ಧ ಕೇಸ್ ದಾಖಲಿಸುವ ಪೊಲೀಸ್ ಇಲಾಖೆ ಮೊದಲೂ ಅನ್ಯಾಯಕ್ಕೊಳಗಾದ ಯುವತಿಗೆ ನ್ಯಾಯ ದೊರಕಿಸಿ ಕೊಡಲಿ ಎಂದಿದ್ದಾರೆ.
ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ. ಇದಕ್ಕೆ ಭಾಷಾ ವಿವಾದದ ಸ್ವರೂಪ ನೀಡಿ ಕೆಲ ಸಂಘಟನೆಗಳು ಶಾಂತಿಭಂಗಕ್ಕೆ ಯತ್ನಿಸುತ್ತಿವೆ. ಬೆಂಗಳೂರಿನಿಂದ ಹೇಳಿಕೆ ನೀಡುತ್ತಿದ್ದಂತೆ ಬೆಳಗಾವಿಯಲ್ಲಿನ ಸಂಘಟನೆಗಳು ಪ್ರತಿಭಟನೆಗೆ ಇಳಿಯುತ್ತಿವೆ. ಸ್ಥಳೀಯವಾಗಿ ಇದನ್ನ ಖಂಡಿಸಿದ್ದಕ್ಕೆ ಮರಾಠಿ ಭಾಷಿಕ ಮೇಲೆ ಕೇಸ್ ದಾಖಲಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದರು.
ದುರ್ವತನೆ ತೋರಿದ ಕಂಡಕ್ಟರ್ ಮೇಲೆ ಕೇವಲ ಮರಾಠಿಗರು ಹಲ್ಲೆ ನಡೆಸಿಲ್ಲ. ಆತನ ಕೃತ್ಯ ಖಂಡಿಸಿ ಹಲ್ಲೆ ಮಾಡಿದವರಲ್ಲಿ ಕನ್ನಡ, ಉರ್ದು ಭಾಷಿಕರು ಕೂಡ ಇದ್ದರು. ಹಲ್ಲೆಗೆ ನಾವು ಎಂದಿಗೂ ಬೆಂಬಲ ವ್ಯಕ್ತಪಡಿಸುವುದಿಲ್ಲ. ಇದರ ವಿರುದ್ಧ ವ್ಯಕ್ತವಾದರೇ ಕೇಸ್ ದಾಖಲಿಸುತ್ತಿದ್ದಾರೆ. ಶಿವಜಯಂತಿಯ ವೇಳೆ ಶಿವಾಜೀ ಮಹಾರಾಜರು ಸಂಭಾಜೀ ಮಹಾರಾಜರ ವಿರುದ್ಧ ಅವಾಚ್ಯವಾಗಿ ಕೆಲ ಸಂಘಟನೆಗಳು ಪೋಸ್ಟ್ ಹಾಕಿದ್ದು, ಅದರ ವಿರುದ್ಧ ಪೊಲೀಸ್ ಇಲಾಖೆ ಮೌನ ವಹಿಸಿದ್ದೇಕೆ? ಪೊಲೀಸ್ ಇಲಾಖೆಯೂ ಅನ್ಯಾಯಕ್ಕೊಳಗಾದ ಯುವತಿಗೆ ನ್ಯಾಯ ಕೊಡಿಸಲು ಮುಂದಾಗಬೇಕು ಎಂದರು.


