ಬೆಳಗಾವಿಯಲ್ಲಿ ಬಿ-ಖಾತಾ ಖಾತಾ ಬೃಹತ್ ಆಂದೋಲನಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಚಾಲನೆಯನ್ನು ನೀಡಿದರು.

ಇಂದು ಬೆಳಗಾವಿಯಲ್ಲಿ ಬಿ-ಖಾತಾ ಖಾತಾ ಬೃಹತ್ ಆಂದೋಲನಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಚಾಲನೆಯನ್ನು ನೀಡಿದರು.
ಸೋಮವಾರದಂದು ಬೆಳಗಾವಿಯ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬಿ-ಖಾತಾ ಖಾತಾ ಬೃಹತ್ ಆಂದೋಲನದ ಉದ್ಘಾಟನಾ ಸಮಾರಂಭ ನಡೆಯಿತು. ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಮಹಾಪೌರರಾದ ಸವಿತಾ ಕಾಂಬಳೆ, ಶಾಸಕ ಆಸೀಫ್ ಸೇಠ್, ಉಪಮಹಾಪೌರ ಆನಂದ ಚವ್ಹಾಣ, ಮಹಾಪಾಲಿಕೆ ವಿರೋಧ ಪಕ್ಷದ ನಾಯಕ ಮುಜಮ್ಮಿಲ್ ಢೋಣಿ, ನಗರಸೇವಕರು, ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್, ಆಯುಕ್ತರಾದ ಶುಭಾ ಬಿ. ಉಪಾಯುಕ್ತರಾದ ರೇಷ್ಮಾ ತಾಳಿಕೋಟಿ, ಉಪಾಯುಕ್ತರಾದ ಉದಯಕುಮಾರ ತಳವಾರ ಸೇರಿದಂತೆ ಇನ್ನುಳಿದ ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು, ಕಟ್ಟಡ ಬೈಲಾಗಳು, ತೆರಿಗೆ ನಿಯಮಗಳು ಮತ್ತು ಸರ್ಕಾರಿ ನಿಯಮಗಳನ್ನು ಅನುಸರಿಸುವ ಎಲ್ಲ ಆಸ್ತಿಗಳ ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಸುಧಾರಿಸಲು ಮತ್ತು ಇನ್ನುಳಿದ ಅನಧಿಕೃತ ಆಸ್ತಿಗಳನ್ನು ಒಂದೇ ನ್ಯಾಯವ್ಯಾಪ್ತಿಯ ಪಟ್ಟಿಯಲ್ಲಿ ಸೇರಿಸಲು ಬಿ-ಖಾತಾದಲ್ಲಿ ಸೇರಿಸಲು ಸರ್ಕಾರ ಮುಂದಾಗಿದ್ದು, ಬಿ ಖಾತಾ ಆಂದೋಲನವನ್ನು ಆರಂಭಿಸಿದೆ. ಮೂರು ತಿಂಗಳು ಇದರ ಗಡುವಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ನಂತರ ಗಣ್ಯರಿಂದ ಸೇವಾ ಖಾಯಂಮಾತಿಗೊಂಡ ಪೌರ ಕಾರ್ಮಿಕರು ಮತ್ತು ನಿಯಮಿತವಾಗಿ ತೆರಿಗೆ ಪಾವತಿಸುವವರನ್ನು ಸನ್ಮಾನಿಸಲಾಯಿತು. ಈ ವೇಳೆ ವಿವಿಧ ಅಧಿಕಾರಿಗಳು ಮತ್ತು ಇನ್ನಿತರರು ಉಪಸ್ಥಿತರಿದ್ಧರು.


