ರಾಜ್ಯ ರಾಜಕೀಯ, ಮಳೆ, ಬೆಳೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

ಕೋಡಿಮಠದ ಶ್ರೀಗಳು ರಾಜಕೀಯ, ಮಳೆ ಬಗ್ಗೆ ಆಗಾಗ ಸ್ಫೋಟಕ ಭವಿಷ್ಯಗಳನ್ನು ನುಡಿಯುತ್ತಲೇ ಇರುತ್ತಾರೆ. ಕೆಲವು ನಿಜವಾಗಿರುವ ಉದಾಹರಣೆಗಳಿವೆ ಎಂದು ಹಲವರು ಹೇಳುತ್ತಿದ್ದಾರೆ. ಈ ನಡುವೆಯೇ ಇದೀಗ ಇಂದು (ಮಾರ್ಚ್ 03) ಗದಗದಲ್ಲಿ ರಾಜ್ಯ ರಾಜಕೀಯ, ಮಳೆ, ಬೆಳೆ ಬಗ್ಗೆ ಭಯಾನಕ ಭವಿಷ್ಯವೊಂದನ್ನು ನುಡಿದಿದ್ದಾರೆ.
ಮಾಹಿತಿ ಇಲ್ಲಿದೆ ತಿಳಿಯಿರಿ.
ಈಗಾಗಲೇ ಹಲವು ಸ್ವಾಮಿಗಳು ಕರ್ನಾಟಕ ರಾಜ್ಯದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ ಎನ್ನುವ ಬಗ್ಗೆ ಭವಿಷ್ಯಗಳನ್ನು ನುಡಿದಿದ್ದಾರೆ. ಇವುಗಳಲ್ಲಿ ಹಲವು ನಿಜ ಕೂಡ ಆಗಿವೆ ಎಂದು ಹಲವರು ಹೇಳುತ್ತಿದ್ದಾರೆ. ಹಾಗೆಯೇ ಇದೀಗ ಹಾಸನ ಜಿಲ್ಲೆಯ ಅರಸಿಕೇರೆಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಗದಗದಲ್ಲಿಂದು ರಾಜ್ಯದ ಬಗ್ಗೆ ಸ್ಫೋಟಕ ಭವಿಷ್ಯವಾಣಿ ನುಡಿದಿದ್ದಾರೆ.
ಈ ಬಾರಿ ಅಂದರೆ 2025ರಲ್ಲಿ ರಾಜ್ಯಕ್ಕೆ ಮಳೆ ಬೆಳೆ ಕೊರತೆಯಿಲ್ಲ. ಆದರೆ ರಾಷ್ಟ್ರದಲ್ಲಿ ಪ್ರಾಕೃತಿಕ ದೋಷಗಳು, ಹಿಮಪಾತ, ಭೂಕಂಪ, ಸುನಾಮಿಗಳಂತಹ ಘಟನೆಗಳು ನಡೆಯುತ್ತವೆ ಎಂದು ಗದಗದಲ್ಲಿ ಇಂದು ಭವಿಷ್ಯ ನುಡಿದಿದ್ದಾರೆ. ಅದರಲ್ಲೂ ಸಿಎಂ ಬದಲಾವಣೆ ವಿಷಯವಾಗಿ ನಾನು ವ್ಯಕ್ತಿಯೋಚಕ ಭವಿಷ್ಯವನ್ನು ನುಡಿಯುವುದಿಲ್ಲ. ವಿಜಯನಗರ ಸಾಮ್ರಾಜ್ಯ ಕಟ್ಟಿದ ಹಕ್ಕ-ಬುಕ್ಕರು ಹಾಲು ಮತದ ಸಮಾಜಕ್ಕೆ ಸೇರಿದವರಾಗಿದ್ದಾರೆ. ಹಾಲುಮತದ ಅಧಿಕಾರದಿಂದ ಮರಳಿ ಅಧಿಕಾರ ಪಡೆಯುವುದು ಕಷ್ಟ ಎಂದು ಹೇಳಿದರು.
ಇದೀಗ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಈ ಬಗ್ಗೆ ಮಾತನಾಡಿದ ಶ್ರೀಗಳು ಇಂದಿನ ರಾಜಕೀಯ ಚಿಂತನೆ ಭದ್ರವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಂದ ಅಧಿಕಾರ ಕಿತ್ತುಕೊಳ್ಳುವುದು ಸುಲಭದ ಮಾತಲ್ಲ ಎಂದು ಹೇಳಿದರು. ಅಲ್ಲದೆ, ಡಿಸಿಎಂ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡಿ, ಒಕ್ಕಲಿಗರು ಅನ್ನ ಕೊಡುವವರು. ಇಲ್ಲಿ ಜಾತಿ ಲೇಪನ ಮಾಡುವುದು ಬೇಡ. ಎಲ್ಲದಕ್ಕೂ ಯುಗಾದಿ ನಂತರ ಉತ್ತರ ಸಿಗಲಿದೆ ಎಂದು ಹೇಳಿದರು.
ಇದೀಗ ರಾಜ್ಯದ ವಾತಾವರಣದಲ್ಲಿ ಭಾರೀ ಬದಲಾವಣೆ ಆಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಬೇಸಿಗೆ ಆಂಭಕ್ಕೂ ಮುನ್ನವೇ ರಣಬಿಸಿಲು ಮುಂದುವರೆದಿದೆ. ಇನ್ನೂ ಬೇಸಿಗೆ ಬಂದರೆ ಏನೆಲ್ಲಾ ಅನಾಹುತಗಳು ಸಂಭವಿಸಬಹುದು ಎನ್ನುವ ಆತಂಕದಲ್ಲಿ ಜನರಿದ್ದಾರೆ. ಮತ್ತೊಂದೆಡೆ ಸ್ವಾಮೀಜಿಗಳು ನುಡಿಯುತ್ತಿರುವ ಭವಿಷ್ಯಗಳು ಕೂಡ ನಿಜವಾಗುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ. ಇದರಿಂದಲೂ ಕೂಡ ಜನರು ಭಯಭೀರತಾಗಿದ್ದಾರೆ.
ಸ್ವಾಮೀಜಿಗಳು ನುಡಿದಿರುವ ಪ್ರಕಾರ, ಮುಂದಿನ ದಿನಗಳಲ್ಲಿ ಏನೆಲ್ಲಾ ಘಟನೆಗಳು ಸಂಭವಿಸುತ್ತವೆಯೋ ಎನ್ನುವ ಭಯದ ನೆರಳಿನಲ್ಲಿದ್ದಾರೆ. ಹಾಗೆಯೇ ಈ ಬಾರಿಯೂ ಸಹ ರಣಭೀಕರ ಮಳೆಯಾಗಲಿದ ಎನ್ನುವ ಮುನ್ಸೂಚನೆಯೂ ಇದ್ದು, ಈ ಎಚ್ಚರಿಕೆ ಸಂದೇಶಗಳು ನದಿ ತೀರದ ಜನರಿಗೆ ಈಗಲೇ ನಡುಕ ಹುಟ್ಟಿಸಿವೆ.
ಮತ್ತೊಂದೆಡೆ ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡ ಬಾಬಾ ವಂಗಾ ದಶಕಗಳ ಹಿಂದೆಯೇ ಅನೇಕ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಅವರು ನುಡಿದಿರುವ ಅನೇಕ ಭವಿಷ್ಯಗಳು ಇಲ್ಲಿಯವರೆಗೆ ನಿಜವಾಗಿವೆ ಎಂದು ತಿಳಿದುಬಂದಿದೆ. ಅವರು 2025ರ ವರ್ಷದಲ್ಲಿ ಕೆಲವು ಸ್ಫೋಟಕ ಭವಿಷ್ಯಗಳನ್ನು ನುಡಿದಿದ್ದರು.
2025ರಲ್ಲಿ ಪ್ರಪಂಚದ ವಿವಿಧ ಭಾಗಗಳಲ್ಲಿ ವಿನಾಶಕಾರಿ ಭೂಕಂಪಗಳು ಸಂಭವಿಸುತ್ತವೆ ಹಲವು ವರ್ಷಗಳ ಹಿಂದೆಯೇ ಹೇಳಿದ್ದರು. ಅಲ್ಲದೆ, ದೊಡ್ಡ ಪ್ರಮಾಣದಲ್ಲಿ ವಿನಾಶ ಸಂಭವಿಸುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಪ್ರಾಣ ಕಳೆದುಕೊಳ್ಳುತ್ತಾರೆ ಅಂತಲೂ ಹೇಳಿದ್ದರು. ಅ
ವರು ನುಡಿದ ಭವಿಷ್ಯದಂತೆ ಕಳೆದ ಕೆಲವು ದಿನಗಳಲ್ಲಿ ಅಮೆರಿಕದಿಂದ ಏಷ್ಯಾ ಖಂಡದವರೆಗೆ ಬಹಳಷ್ಟು ಭೂಕಂಪನದ ಅನುಭವ ಆಗಿರುವ ಬಗ್ಗೆ ವರದಿಯಾಗಿದೆ. ಇನ್ನು ಭಾರತದಲ್ಲಿಯೂ ದೆಹಲಿಯಿಂದ ಬಿಹಾರ ಮತ್ತು ಬಂಗಾಳದವರೆಗೆ ಭೂಮಿ ಕಂಪಿಸಿದೆ. ಇದೀಗ ಈ ಎಲ್ಲಾ ದುರಂತಗಳನ್ನು ಗಮನಿಸಿದಾಗ ಬಾಬಾ ವಂಗಾ ನುಡಿದ ಭವಿಷ್ಯಗಳು ನಿಜವಾಗಿದ್ದು, ಜನರಲ್ಲಿ ಆತಂಕ ಉಂಟಾಗಿದೆ.