Education
ಬೆಳಗಾವಿ ಡಿಡಿಪಿಐ ಸೂಚನೆ ನೀಡಿದರೂ ಆದೇಶಕ್ಕಿಲ್ಲ ಕಿಮ್ಮತ್ತು: ಶಾಲೆಗೆ ಬೀಗ ಹಾಕಿದ ಶಿಕ್ಷಕರು ಶಾಲಾ ಮಕ್ಕಳ ಪೋಷಕರು ಆಕ್ರೋಶ

ಬೆಳಗಾವಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಲ್ಲಿನ ಶಹಾಪುರ ಕಚೇರಿಗಲ್ಲಿ ಶಿಕ್ಷಕರು ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ನಂ.8ಕ್ಕೆ ಬೀಗ ಹಾಕಿ ಮಕ್ಕಳಿಗೆ ಸ್ವಯಂ ಘೋಷಿತ ರಜೆ ಘೋಷಣೆ ಮಾಡಿದ ಘಟನೆ ಗುರುವಾರ ನಡೆದಿದೆ.
ಬೆಳಗಾವಿ ಡಿಡಿಪಿಐ ಲೀಲಾವತಿ ಹಿರೇಮಠ ಕಾರ್ಯಕ್ರಮಕ್ಕೆ ತೆರಳಳು ಇಬ್ಬರು ಶಿಕ್ಷಕರು ಮಾತ್ರ ಭಾಗಿವಹಿಸಬೇಕೆಂದು ಆದೇಶ ಹೊರಡಿಸಿದರೂ ಇಲ್ಲಿನ ಶಿಕ್ಷಕರು ಶಾಲೆಗೆ ಬೀಗ ಹಾಕಿ ಮಕ್ಕಳಿಗೆ ರಜೆ ಕೊಟ್ಟು ಕಾರ್ಯಕ್ರಮಕ್ಕೆ ತೆರಳಿದ್ದಾರೆ.

ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮ ಹೋಗುವ ಒಬ್ಬಿಬ್ಬರು ಶಿಕ್ಷಕರು ಇರಬೇಕು ಎಂದು ಓ.ಓ.ಡಿ ಹೊರಡಿಸಿ ಶಾಲೆಗೆ ತೊಂದರೆಯಾಗದಂತೆ ಭಾಗವಹಿಸಬೇಕೆಂದು ಸೂಚನೆ ನೀಡಿದರೂ ಡಿಡಿಪಿಐ ಆದೇಶ ಧಿಕ್ಕರಿಸಿ ಶಾಲೆಗೆ ಬೀಗ ಹಾಕಿರುವುದಕ್ಕೆ ಶಾಲಾ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



