ಭಯಂಕರ ಗಾಳಿ ಮಳೆಗೆ ಖಾನಾಪೂರ ತಾಲೂಕಿನ ಕೆಲವೆಡೆ ಮನೆ ಚಾವಣಿಗಳು ಹಾರಿ ಅಪಾರ್ ಪ್ರಮಾಣದ ಹಾನಿ
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಪ್ರತಿದಿನ ಸಂಜೆ ಹೊತ್ತು ವಿಪರಿತ ಗಾಳಿ ಮಳೆ ಸುರಿಯುತ್ತಿದೆ ಇದರಿಂದ ಕೆಲವೆಡೆ ಮನೆ ಚಾವಣಿಗಳು ಹಾರಿ ಅನಾಹುತಗಳು ಸಂಭವಿಸುತ್ತಿವೆ

ಅದರಂತೆ ನಿನ್ನೆ ಸೋಮವಾರ ಬಿಸಿದ ಭಯಂಕರ ಗಾಳಿಯಿಂದ ಭೂರಣಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾಸ್ಕೆನಟ್ಟಿ ಗ್ರಾಮದಲ್ಲಿ ಪರಶುರಾಮ ಮಿಟಗಾರ ಮತ್ತು ಧೂಳಪ್ಪ ದೆವಗೇಕರ ಎನ್ನುವವರಿಗೆ ಸೇರಿದ ಎರಡು ಮನೆಗಳ ಮೆಲಚಾವಣಿ ಸಂಪೂರ್ಣ ಹಾರಿ ಹೋಗಿದೆ ಅದೃಷವಶಾತ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲಾ ಇನ್ನು ಕೆಲವರ ಮನೆಗಳಿಗೂ ಹಾನಿಯಾಗಿದೆ ಹೀಗಾಗಿ ಸಂಭಂದ ಪಟ್ಟ ಅದಿಕಾರಿಗಳು ಸ್ಥಳಕ್ಕೆ ಬೆಟ್ಟಿಕೋಟ್ಟು ಪರಿಹಾರ ವಿತರಿಸಬೇಕೆಂದು ಅದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಮಾಜ ಸೇವಕ ಜ್ಯೋತಿಬಾ ಬೆಂಡಿಗೇರಿ ಅವರು ಆಗ್ರಹಿಸಿದ್ದಾರೆ



