ಸೀನಿಮಿಯ ರೀತಿಯಲ್ಲಿ90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಕುಖ್ಯಾತ ಆರೋಪಿ ಅಂದರ್..!

ಬೆಳಗಾವಿ: ಸೀನಿಮಿಯ ರೀತಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕುಖ್ಯಾತ ಆರೋಪಿಯನ್ನು ಯಮಕನಮರಡಿ ಪೊಲೀಸ್ ರು ಬಂಧಿಸಿ ಆತನಿಂದ ಸತ್ಯ ಕಕ್ಕಿಸಿದ್ದಾರೆ.
ಬೆಳಗಾವಿ ಮಹಾತೇಂಶ ನಗರದ ಸುರೇಶ ಮಾರುತಿ ನಾಯಿಕ (ಸನದಿ ) (37) ಬಂಧಿತ ಆರೋಪಿ. ಯಮಕನಮರಡಿ ವ್ಯಾಪ್ತಿಯಲ್ಲಿರುವ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ ಪ್ರಕರಣ ದಾಖಲಾಗಿತ್ತು. ಕಳ್ಳತನ ಪ್ರಕರಣದ ಪತ್ತೆಗಾಗಿ ಜಾಡು ಜಾಲಾಡಿದ ಯಮಕನಮರ್ಡಿ ಪೊಲೀಸ್ ರು ಆರೋಪಿಯ ಬಂಧಿಸಿ, ಆತನಿಂದ 97 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಡಾ. ಭೀಮಾಶಂಕರ್ ಗುಳೇದ್ ಮಾತನಾಡಿ,ಅ.16 ರಂದು ಅ. 22 ರಂದು ಮುಂಜಾನೆ ಮನೆಯಲ್ಲಿ ಯಾರು ಇಲ್ಲದ ವೇಳೆ ತರ್ಕಬದ್ಧವಾಗಿ ಆರೋಪಿಯನ್ನು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ, ಆರೋಪಿಯನ್ನು ಬಂಧಿಸಿದಾಗ ತಪ್ಪೋಪಿಕೊಂಡಿದ್ದಾನೆ. 1280 ಗ್ರಾಂ. ಚಿನ್ನಾಭರಣ, 8 1/2 ಕೆ.ಜಿ. ಬೆಳ್ಳಿ , 1,25 ಲಕ್ಷ ರೂ. ನಗದು , 1 ಥಾರ್ ವಾ.ಹನ, 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಯಮಕನಮರಡಿಯಲ್ಲಿ ಅ.22ರಂದು ಕಳ್ಳತನವಾದ 70 ಗ್ರಾಂ. ಚಿನ್ನಾಬಂಗಾರ, 170 ಗ್ರಾಂ ಬೆಳ್ಳಿ ಮತ್ತು 22 ಸಾವಿರ ರೂ. ನಗದು , ಮನಗುತ್ತಿಯಲ್ಲಿ ಕಳ್ಳತನ ಮಾಡಿ ಚಿನ್ನಾಭರಣವನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿ, ಬಹುಮಾನವನ್ನು ಘೋಷಿಸಿದ್ದಾರೆ.


