Local News
Trending
ಮಾನವೀಯತೆ ಮರೆತು ಮೊಬೈಲ್ ಹಿಡಿದು ವಿಚಾರಣೆ ನಡೆಸಿದ ಅಧಿಕಾರಿಗಳು! ಮಾನವೀಯತೆ ಎಲ್ಲಿ ಹೋಯಿತು….. ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ಎರಡು ಕಾಲುಗಳು ಕಟ್!

ಮಾನವೀಯತೆ ಎಲ್ಲಿ ಹೋಯಿತು…..
*ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ಎರಡು ಕಾಲುಗಳು ಕಟ್!*
ಬೆಳಗಾವಿ ಜಿಲ್ಲೆಯ ಗೋಕಾಕ್ ರೋಡ್ ರೈಲ್ವೆ ನಿಲ್ದಾಣ ಬಳಿ ಘಟನೆ
ಹೊಳೆಪ್ಪ ಹುಲಕುಂದ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಗೋಕಾಕ್ ತಾಲೂಕಿನ ಶಿಂಧಿಕುರಬೇಟ್ ಗ್ರಾಮದ ಯುವಕನಿಗೆ ಎರಡು ಕಾಲುಗಳು ಕಟ್
ರೈಲ್ವೆ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ ಬಂದು ಆತ್ಮಹತ್ಯೆಗೆ ಯತ್ನ
ಅಧಿಕಾರಿಗಳ ವಿಚಾರಣೆ ವೇಳೆ ಹಳಿ ದಾಟುವ ವೇಳೆ ಘಟನೆಯಾಗಿದೆ ಎಂದು ಮಾಹಿತಿ
ತೀವ್ರವಾಗಿ ಗಾಯಗೊಂಡಿರೋ ಯುವಕನನ್ನು ಬೆಳಗಾವಿ ಬಿಮ್ಸ್ ದಾಖಲಿಸಿ ಚಿಕಿತ್ಸೆ
*ಮಾನವೀಯತೆ ಮರೆತು ಮೊಬೈಲ್ ಹಿಡಿದು ವಿಚಾರಣೆ ನಡೆಸಿದ ಅಧಿಕಾರಿಗಳು!*
ಕಾಲು ಕಟ್ ಆದ ಯುವಕನನ್ನು ಆಸ್ಪತ್ರೆಗೆ ಕಳಿಸೋದು ಬಿಟ್ಟು ವಿಚಾರಣೆ
*ರೈಲು ಅಪಘಾತದಲ್ಲಿ ಕಾಲು ಕಟ್ ಆದ ಯುವಕನ ಆಸ್ಪತ್ರೆಗೆ ಸಾಗಿಸದೇ ಎಲ್ಲಿಂದ ಬದೆ,ಯಾವಾಗ ಬಂದೆ ಎಂಬೆಲ್ಲ ಪ್ರಶ್ನೆ*
*ಮೊದಲು ಆಸ್ಪತ್ರೆಗೆ ಸಾಗಿಸುವುದನ್ನು ಬಿಟ್ಟು ಪ್ರಶ್ನೆ ಕೇಳುತ್ತಾ ಮೊಬೈಲ್‌ನಲ್ಲಿ ರೆಕಾರ್ಡ್*
*ಮಾನವೀಯತೆ ಮರೆತು ವಿಚಾರಣೆ ಮಾಡಿದ ಅಧಿಕಾರಿಗಳು ವಿರುದ್ಧ ಆಕ್ರೋಶ!*.
ಬೆಳಗಾವಿ: ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ಎರಡು ಕಾಲುಗಳು ಕಟ್ ಆದರೂ, ಆಸ್ಪತ್ರೆಗೆ ಸಾಗಿಸದೇ ಮಾನವಿಯತೆ ಮರೆತು ಮೊಬೈಲ್ ಹಿಡಿದು ವಿಚಾರಣೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ರೋಡ್ ರೈಲ್ವೆ ನಿಲ್ದಾಣ ಬಳಿ ನಡೆದಿದೆ.
ಗೋಕಾಕ್ ತಾಲೂಕಿನ ಶಿಂಧಿಕುರಬೇಟ್ ಗ್ರಾಮದ ಹೊಳೆಪ್ಪ ಹುಲಕುಂದ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ ರೈಲು ಬರುವ ವೇಳೆ ಏಕಾಏಕಿ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಯುವಕನ ಎರಡು ಕಾಲುಗಳು ಕಟ್ ಆಗಿವೆ. ಆದರೆ ಅದೃಷ್ಟವಶಾತ್ ಯುವಕ ಬದುಕುಳಿದಿದ್ದಾನೆ. ಇನ್ನು ಕಾಲು ಕಟ್ ಆದರೂ, ಯುವಕನನ್ನು ಮೊದಲು ಆಸ್ಪತ್ರೆಗೆ ಸೇರಿಸುವ ಬದಲೂ ಮೊಬೈಲ್ ಹಿಡಿದು ಆತನನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಘಟಪ್ರಭಾ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


