Operation Sindoor; “ಆಪರೇಷನ್ ಸಿಂಧೂರ್” ದಾಳಿಯ ನೇತೃತ್ವ ವಹಿಸಿದವರು ಇಬ್ಬರು ಮಹಿಳಾ ಅಧಿಕಾರಿಗಳು… ಪಾಕ್ ಗೆ ನುಗ್ಗಿ ಪಾಠ ಕಲಿಸಿದ ದಿಟ್ಟ Colonel ಸೋಫಿಯಾ & ವ್ಯೋಮಿಕಾ

ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ಭಯೋ*ತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದ ಮೇಲೆ ನಡೆಸಿದ “ಆಪರೇಷನ್ ಸಿಂಧೂರ್” ದಾಳಿಯ ನೇತೃತ್ವ ವಹಿಸಿದವರು ಇಬ್ಬರು ಮಹಿಳಾ ಅಧಿಕಾರಿಗಳು…ಹೌದು 26 ಪ್ರವಾಸಿಗರ ಹ*ತ್ಯೆಗೆ ಭಾರತೀಯ ಸೇನೆ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಮೂಲಕ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ಆಪರೇಷನ್ ಸಿಂಧೂರಕ್ಕೆ ಮಹಿಳಾ ಅಧಿಕಾರಿಗಳನ್ನೇ ಬಳಸಿಕೊಂಡಿರುವುದು ಶ್ಲಾಘನೆಗೆ ಕಾರಣವಾಗಿದೆ. ಅಲ್ಲದೇ ಇಬ್ಬರು ಮಹಿಳಾ ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆ ಬಗ್ಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ದಾಳಿ ನಡೆಸಿರುವ ಬಗ್ಗೆ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.
ಯಾರಿವರು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ & ಕರ್ನಲ್ ಸೋಫಿಯಾ ಖುರೇಷಿ?
ವ್ಯೋಮಿಕಾ ಸಿಂಗ್: ಶಾಲಾ ದಿನಗಳಲ್ಲೇ ಆಕಾಶದ ಬಗ್ಗೆ ಪ್ರಭಾವಿತಗೊಂಡಿದ್ದ ವ್ಯೋಮಿಕಾ ಎಂಜಿನಿಯರಿಂಗ್ ಪದವೀಧರೆಯಾಗಿದ್ದಾರೆ. ವ್ಯೋಮಿಕಾ ಐಎಎಫ್ ನಲ್ಲಿ 2019ರ ಡಿಸೆಂಬರ್ 18ರಂದು ಹೆಲಿಕಾಪ್ಟರ್ ಪೈಲಟ್ ಆಗಿ ಆಯ್ಕೆಯಾಗಿದ್ದರು. ವಿಂಗ್ ಕಮಾಂಡರ್ ಆಗಿ ಭಡ್ತಿ ಪಡೆದಿದ್ದ ವ್ಯೋಮಿಕಾ ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಚೇತಕ್ ಮತ್ತು ಚೀತಾ ಏರ್ ಕ್ರಾಫ್ಟ್ ನಲ್ಲಿ ಸುಮಾರು 2,500ಕ್ಕೂ ಅಧಿಕ ಗಂಟೆಗಳ ಹಾರಾಟ ನಡೆಸಿದ್ದರು.
ವ್ಯೋಮಿಕಾ ಹಲವಾರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 2020ರ ನವೆಂಬರ್ ನಲ್ಲಿನ ಅರುಣಾಚಲ ಪ್ರದೇಶದ ರಕ್ಷಣಾ ಕಾರ್ಯಾಚರಣೆ ಪ್ರಮುಖವಾಗಿದೆ.
ಸೋಫಿಯಾ ಖುರೇಷಿ:
ಸೋಫಿಯಾ ಖುರೇಷಿ ಮೂಲತಃ ಗುಜರಾತ್ ನವರು. 1981ರಲ್ಲಿ ಗುಜರಾತ್ ನ ವಡೋದರಾದಲ್ಲಿ ಖುರೇಷಿ ಜನಿಸಿದ್ದರು. ವಿಜ್ಞಾನ ಪದವೀಧರೆಯಾದ ಸೋಫಿಯಾ ಅವರ ಅಜ್ಜ ಕೂಡಾ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. 2000ನೇ ಇಸವಿಯಲ್ಲಿ ಸೋಫಿಯಾ ಭಾರತೀಯ ಸೇನೆಗೆ ಸೇರಿದ್ದರು. ಚೆನ್ನೈನಲ್ಲಿ ತರಬೇತಿ ಪಡೆದಿದ್ದ ಸೋಫಿಯಾ ನಂತರ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕಗೊಂಡಿದ್ದರು. 2016ರಲ್ಲಿ ಖುರೇಷಿ ಸೇನೆಯಲ್ಲಿ ಮೊದಲ ಮಹಿಳಾ ಅಧಿಕಾರಿಯಾಗುವ ಮೂಲಕ ಮೈಲಿಗಲ್ಲು ಸ್ಥಾಪಿಸಿದ್ದರು. 2006ರಲ್ಲಿ ಸೋಫಿಯಾ ಅವರು ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೇನಾ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದರು.