CrimeLocal News
ಕಳ್ಳನನ್ನು ಬಂಧಿಸಿ 265000/-ರೂ ಕಿಮ್ಮತ್ತಿನ 09 ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಂಡ AMPC ಪೊಲೀಸ್ ಠಾಣೆಯ ಅಧಿಕಾರಿಗಳು

ಕಳ್ಳನನ್ನು ಬಂಧಿಸಿ 9 ಬೈಕುಗಳನ್ನು ವಶಪಡಿಸಿಕೊಂಡ ಎಪಿಎಂಸಿ ಪೊಲೀಸ್
ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯ ಹಿಂಬದಿಯ ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ವಿವಿಧೆಡೆ ನಿಲ್ಲಿಸಿದ್ದ ಬೈಕ್’ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿ ಒಟ್ಟು 9 ಬೈಕ್’ಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯ ಹಿಂಬದಿಯ ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ವಿವಿಧೆಡೆ ನಿಲ್ಲಿಸಿದ್ದ ಬೈಕ್’ಗಳನ್ನು ಕಳ್ಳತನ ಮಾಡುತ್ತಿದ್ದ ಗೋಕಾಕ್ ಮೂಲದ ಹಾಲಿ ಬೆಳಗಾವಿ ವೈಭವನಗರದ ನಿವಾಸಿ ಸಂತೋಷ ಅಂದಾನಿಯನ್ನು ಬಂಧಿಸುವಲ್ಲಿ ಬೆಳಗಾವಿ ಎಪಿಎಂಸಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರ ಪೊಲೀಸ್ ಆಯುಕ್ತರು, ಉಪಾಯುಕ್ತರು ಮತ್ತು ಸಹಾಯಕ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಪಿಎಂಸಿ ಪೊಲೀಸ್ ಇನ್ಸಪೇಕ್ಟರ್ ಯು.ಎಸ್. ಅವಟಿ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಸುಮಾರು 2,65,000/- ರೂ ಮೌಲ್ಯದ 02 ಹಿರೋ ಹೊಂಡಾ ಸ್ಟೆಂಡರ ಮೋಟರ ಸೈಕಲಗಳು, 03 ಹೊಂಡಾ ಆ್ಯಕ್ಟಿವಾ ಸ್ಕೂಟರಗಳು, 01 ಸಿಬಿಝಡ್ ಎಕ್ಸಟ್ರೀಮ್, 01 ಬಜಾಜ ಪಲ್ಸರ್, 01 ಹಿರೋ ಪ್ಯಾಶನ ಪ್ರೋ ಹಾಗೂ 01 ಬಜಾಜ ಸಿಟಿ-100 ಹೀಗೆ ಒಟ್ಟು 09 ಬೈಕ್’ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದಲ್ಲಿ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯ ಎಸ್.ಆರ್ ಮುತ್ತತ್ತಿ ಪಿಎಸ್‌ಐ, ಎಮ್. ಎ. ಪಾಟೀಲ, ಎ.ಎಸ್.ಐ, ದೀಪಕ ಸಾಗರ, ಬಸವರಾಜ ನರಗುಂದ, ಖಾದರಸಾಬ ಖಾನಮ್ಮನವರ, ಹಾಗೂ ಪೊಲೀಸ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ರಮೇಶ, ಅಕ್ಕಿ, ಮಹಾದೇವ ಖಶೀದ ಪ್ರಶಂಸನೀಯ ಕೆಲಸ ಮಾಡಿದ್ದು, ಪೊಲೀಸ್ ಆಯುಕ್ತರು ಹಾಗೂ ಉಪಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಬೆಳಗಾವಿ ನಗರ ರವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.


