Breaking News

3 ಶಾಲೆಗಳ 6 ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ

ಮಕ್ಕಳ ಶಿಕ್ಷಣಕ್ಕೆ ಯಾವುದೇ ಮೂಲಸೌಲಭ್ಯ ಕೊರತೆಯಾಗದಂತೆ ಕ್ರಮ : ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ
3 ಶಾಲೆಗಳ 6 ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದರು.
ಕ್ಷೇತ್ರದ ವಿವಿಧೆಡೆ ಸುಮಾರು 85 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಯಾವುದೇ ಗ್ರಾಮದಲ್ಲಿ ಶಿಕ್ಷಣಕ್ಕೆ ಮೂಲಭೂತ ಸೌಲಭ್ಯ ಕೊರತೆಯಾಬಾರದೆನ್ನುವುದು ಈ ಭಾಗದ ಶಾಸಕರೂ ಆಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಆಶಯ. ಅದಕ್ಕೆ ತಕ್ಕಂತೆ ಶಾಲೆಗಳ ಕಟ್ಟಡ ನಿರ್ಮಾಣ, ದುರಸ್ತಿ, ಆಟದ ಮೈದಾನ, ಕಂಪೌಂಡ್ ನಿರ್ಮಾಣ, ಕ್ರೀಡಾ ಸಾಮಗ್ರಿ ಪೂರೈಕೆ, ಕುಡಿಯುವ ನೀರು ವ್ಯವಸ್ಥೆ, ಶಿಕ್ಷಕರ ನೇಮಕ ಎಲ್ಲದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಸರಕಾರದ ಅನುದಾನದ ಜೊತೆಗೆ ಲಕ್ಷ್ಮೀ ತಾಯಿ ಫೌಂಡೇಶನ್ ನಿಂದ ಸಹ ಹಣ ಒದಗಿಸಲಾಗುತ್ತಿದೆ. ಹಾಗಾಗಿ ಇಂತಹ ಶಾಸಕರನ್ನು ಹೊಂದಿರುವುದು ಗ್ರಾಮೀಣ ಕ್ಷೇತ್ರದ ಜನರ ಸೌಭಾಗ್ಯ. ಜೊತೆಗೆ ನಿಮ್ಮಂತ ಹೃದಯವಂತ ಜನರನ್ನು ಹೊಂದಿರುವ ನಾವೂ ಸಹ ಅದೃಷ್ಟವಂತರು ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಚಂದನ ಹೊಸೂರು:
ಚಂದನಹೊಸೂರ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 2 ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು. ಸುಮಾರು 26.22 ಲಕ್ಷ ರೂ,ಗಳ ವೆಚ್ಚದಲ್ಲಿ ಕೊಠಡಿಗಳು ನಿರ್ಮಾಣಗೊಳ್ಳಲಿವೆ. ಗುಣಮಟ್ಟದ ವಸ್ತುಗಳನ್ನು ಉಪಯೋಗಿಸಿ, ಆದಷ್ಟು ಬೇಗ ಕೊಠಡಿಗಳನ್ನು ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಯಿತು.
ಈ ಸಮಯದಲ್ಲಿ ಸದೆಪ್ಪ ತಾನಸಿ, ನಾಗಲಿಂಗ ಬಡಿಗೇರ್, ರಾಯಪ್ಪ ತಳವಾರ, ಬಸವರಾಜ ಪಾರ್ವತಿ, ಬಸವರಾಜ ಕರಡಿಗುದ್ದಿ, ಶಿವನಗೌಡ ಪಾಟೀಲ, ವೀರಭದ್ರ ಕರಡಿಗುದ್ದಿ, ಮಹೇಶ ಹಿರೇಮಠ, ಕಲ್ಮೇಶ್ ಪಾರ್ವತಿ, ಎಸ್.ಡಿ.ಎಂ.ಸಿ ಸದಸ್ಯರು, ಶಾಲಾ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾರಿಹಾಳ:
ತಾರಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು. ಸುಮಾರು 28.68 ಲಕ್ಷ ರೂ,ಗಳ ವೆಚ್ಚದಲ್ಲಿ ಕೊಠಡಿಗಳು ನಿರ್ಮಾಣಗೊಳ್ಳಲಿವೆ.
ಈ ಸಮಯದಲ್ಲಿ ನಾಮದೇವ್ ಜೋಗನ್ನವರ್, ಲಕ್ಷ್ಮಣ ಮುಚ್ಚಂಡಿ, ಪ್ರಮೋದ್ ಪೂಜಾರ, ಬಸವರಾಜ ವಾಣಿ, ಬಸವರಾಜ ತಳವಾರ, ಪಾಂಡು ಕನ್ನೋಳಕರ್, ರಮೇಶ ಖನಗಾಂವ್ಕರ್, ಸ್ವಪ್ನಿಲ್ ಜಾಧವ್, ಕಿರಣ ರಾಜು ಪಾಟೀಲ ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
ಬಸರಿಕಟ್ಟಿ :
ಬಸರೀಕಟ್ಟಿ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ 2 ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು. ಸುಮಾರು 26.95 ಲಕ್ಷ ರೂ,ಗಳ ವೆಚ್ಚದಲ್ಲಿ ಕೊಠಡಿಗಳು ನಿರ್ಮಾಣಗೊಳ್ಳಲಿವೆ.
ಈ ಸಮಯದಲ್ಲಿ ಸಿದ್ದರಾಯಿ ನಾಗರೋಳಿ, ಬಸವರಾಜ ಕೊಂಡಸಕೊಪ್ಪ, ದಿಲೀಪ್ ಕೊಂಡಸಕೊಪ್ಪ, ಹೊಳೆಪ್ಪ ಪೂಜೇರಿ, ರಾಜು ಹಿರೋಜಿ, ಎಸ್.ಡಿ.ಎಂ.ಸಿ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರು ಉಪಸ್ಥಿತರಿದ್ದರು.
Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button