ಬೆಳಗಾವಿಯಲ್ಲಿ ಭಾರೀ ಮಳೆ ಅಬ್ಬರಕ್ಕೆ ಹೈರಾಣಾದ ಜನ

ಬೆಳಗಾವಿ: ಜಿಲ್ಲೆಯಾದ್ಯಂತ ರಾತ್ರಿ ಇಡೀ ಬಿಟ್ಟು ಬಿಟ್ಟು ಸುರದ ಧಾರಾಕಾರ ಮಳೆ ಮಂಗಳವಾರವೂ ಮುಂದುವರಿದಿದೆ. ಮುಂಗಾರಿನ ಮೊದಲ ಮಳೆಯ ಅಬ್ಬರಕ್ಕೆ ಬೆಳಗಾವಿ ಜಿಲ್ಲೆ ಅಕ್ಷರಶಃ ನಲುಗಿದೆ.
ಕಳೆದ ರಾತ್ರಿಯಿಂದಲೇ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಶಾಲಾ ಮಕ್ಕಳು ಶಾಲೆಗೆ ತೆರಳಲು ತೀವ್ರ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಗರದಲ್ಲಿ ಅನೇಕ ಕಡೆ ತಗ್ಗು ಪ್ರದೇಶ ಮನೆಗಳ ಒಳಗೆ ನೀರು ನುಗ್ಗಿದೆ. ತಗ್ಗು ಪ್ರದೇಶದ ಮುಖ್ಯರಸ್ತೆಗಳಲ್ಲೇ ನೀರು ಹರಿದಿದ್ದು, ಅವು ಹಳ್ಳಗಳಂತೆ ಕಂಡುಬಂದವು. ಬೆಳಗಾವಿ ನಗರದ ಬೆಂಡಿ ಬಜಾರ್, ಗಣಪತಿ ಗಲ್ಲಿ, ಖಡೇಬಜಾರ್, ಶಹಾಪುರ, ಗಾಂಧಿ ನಗರ, ಸಮರ್ಥ ನಗರ, ಹಳೇ ಪಿಬಿ ರಸ್ತೆ ಹಾಗೂ ವಿವಿಧ ತಗ್ಗು ಪ್ರದೇಶದಲ್ಲಿರುವ ಅನೇಕ ಮನೆಗಳು, ವ್ಯಾಪಾರ ಮಳಿಗೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ವಿಪರೀತ ಮಳೆ ಗಾಳಿಯಿಂದ ಅಲ್ಲಲ್ಲಿ ದೊಡ್ಡ ದೊಡ್ಡ ಮರಗಳು ನಲೆಕ್ಕುರುಳಿವೆ. ಅಲ್ಲದೇ ಭಾರಿ ಮಳೆಯಿಂದಾಗಿ ತಗ್ಗು ನಗರದ ತಗ್ಗು ಪ್ರದೇಶಗಳಲ್ಲಿ ಮನೆಗಳ ಒಳಗೆ ನೀರುನುಗ್ಗಿದ್ದರಿಂದ ನಿವಾಸಿಗಳು ಸಮಸ್ಯೆ ಎದುರಿಸಿದರು. ಜಿಲ್ಲೆಯ ಅನೇಕ ನದಿಗಳು ತುಂಬಿ ಹರಿಯುತ್ತಿದ್ದು, ಅಧಿಕಾರಿಗಳು ನಿರಂತರ ನಿಗಾವಹಿಸಿದ್ದಾರೆ.



