CrimeState

3 ತಿಂಗಳಲ್ಲಿ 17.78 ಲಕ್ಷ ಕೆಜಿ ಪಡಿತರ ವಶಕ್ಕೆ – ಕಳ್ಳ ಸಾಗಣೆ ಮಾಡುತ್ತಿದ್ದ 215 ಜನ ಅರೆಸ್ಟ್

ಬೆಂಗಳೂರು: ಪಡಿತರ ಕಳ್ಳ ಸಾಗಣೆ ವಿರುದ್ಧ ಆಹಾರ, ಸಾರ್ವಜನಿಕ ವಿತರಣೆ ಹಾಗೂ ಗ್ರಾಹಕ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದ್ದು, ಮೂರು ತಿಂಗಳಲ್ಲಿ 17.78 ಲಕ್ಷ ಕೆಜಿ ಪಡಿತರ ಅಕ್ಕಿ, ಕಾಳು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 215 ಜನರನ್ನು ಅರೆಸ್ಟ್ ಮಾಡಿದ್ದಾರೆ.

ಸಚಿವ ರಿಜ್ವಾನ್ ಅರ್ಷದ್  ಅವರ ನಿರ್ದೇಶನದ ಮೇರೆಗೆ, ಕಳೆದ ಆಗಸ್ಟ್ 1ರಿಂದ ಪಡಿತರ ಸಾಗಣೆ ವಾಹನಗಳ ನಿರಂತರ ತಪಾಸಣೆ ಹಾಗೂ ಖಾಸಗಿ ಗೋಡೌನ್‌ಗಳ ಪರಿಶೀಲನೆ ನಡೆಸಲಾಗಿದೆ. ಈ ವೇಳೆ 17.78 ಲಕ್ಷ ಕೆಜಿ ಪಡಿತರ ಅಕ್ಕಿ, ಕಾಳು ವಶಪಡಿಸಿಕೊಳ್ಳಲಾಗಿದೆ. ಪ್ರಮುಖವಾಗಿ ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 5 ಲಕ್ಷ ಕೆಜಿಗೂ ಹೆಚ್ಚು ಪಡಿತರ ವಶಕ್ಕೆ ಪಡೆಯಲಾಗಿದೆ.

ಇನ್ನೂ ಕೋಲಾರ ಜಿಲ್ಲೆಯಲ್ಲಿ 3.5 ಲಕ್ಷ ಕೆಜಿ ಅಕ್ಕಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಲಾ 1 ಲಕ್ಷಕ್ಕೂ ಹೆಚ್ಚು ಕೆಜಿ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 238 ಎಫ್‌ಐಆರ್‌ಗಳು ದಾಖಲಾಗಿದ್ದು, 215 ಜನರನ್ನು ಬಂಧಿಸಿದ್ದಾರೆ. ಇದೇ ವೇಳೆ ಪಡಿತರ ಕಳ್ಳ ಸಾಗಣೆಗೆ ಬಳಸಲಾಗುತ್ತಿದ್ದ 156 ವಾಹನಗಳ ಜಪ್ತಿ ಮಾಡಲಾಗಿದೆ.

ಅಡುಗೆ ಅನಿಲ (ಸಿಲಿಂಡರ್) ಹಾಗೂ ಪೆಟ್ರೋಲ್/ಡೀಸೆಲ್ ಅಕ್ರಮ ದಾಸ್ತಾನುಗಳ ಮೇಲೂ ದಾಳಿ ನಡೆಸಿ ಕಳೆದ ಮೂರು ತಿಂಗಳಿನಲ್ಲಿ 14,250 ಲೀಟರ್ ಪೆಟ್ರೋಲ್ ಹಾಗೂ 1,492 ಗ್ಯಾಸ್ ಸಿಲಿಂಡರ್‌ಗಳ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಪಡಿತರ ಧಾನ್ಯ, ಸಿಲಿಂಡರ್ ಹಾಗೂ ಪೆಟ್ರೋಲ್‌ಗಳ ಒಟ್ಟು ಬೆಲೆ ಸುಮಾರು 10 ಕೋಟಿ ರೂ.ಯಾಗಿದೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button