Breaking NewsState
ಬೆಳಗಾವಿಯ ಮಾಳಮಾರುತಿ ಸಿಪಿಐ ಬಿ.ಆರ್. ಗಡ್ಡೇಕರ್ ಅವರಿಗೆ ಕೇಂದ್ರ ಗೃಹ ಸಚಿವರ ದಕ್ಷತಾ ಪದಕ’ದ ಗರಿ!

ಬೆಳಗಾವಿಯ ಮಾಳಮಾರುತಿ ಸಿಪಿಐ ಬಿ.ಆರ್. ಗಡ್ಡೇಕರ್ ಅವರಿಗೆ ಕೇಂದ್ರ ಗೃಹ ಸಚಿವರ ದಕ್ಷತಾ ಪದಕ’ದ ಗರಿ!
ಜನಸ್ನೇಹಿ ಆಡಳಿತ ಹಾಗೂ ಸಂಕೀರ್ಣ ಪ್ರಕರಣಗಳ ದಕ್ಷ ತನಿಖೆಯ ಮೂಲಕ ಪೊಲೀಸ್ ಇಲಾಖೆಗೆ ಕೀರ್ತಿ ತಂದಿರುವ ಬೆಳಗಾವಿಯ ಮಾಳಮಾರುತಿ ಠಾಣೆಯ ಸಿಪಿಐ ಬಿ.ಆರ್. ಗಡ್ಡೇಕರ್ ಪ್ರತಿಷ್ಠಿತ ಕೇಂದ್ರ ಗೃಹ ಸಚಿವರ ದಕ್ಷತಾ ಪದಕಕ್ಕೆ ಭಾಜನರಾಗಿದ್ದಾರೆ.
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಬಿ.ಆರ್. ಗಡ್ಡೇಕರ್ ಅವರು ತಮ್ಮ ದಕ್ಷ ಕಾರ್ಯವೈಖರಿ, ಕರ್ತವ್ಯನಿಷ್ಠೆ ಹಾಗೂ ಜನಸ್ನೇಹಿ ಆಡಳಿತದಿಂದ ಸಾರ್ವಜನಿಕರ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರರಾಗಿದ್ದು, ಇದೀಗ ಪ್ರತಿಷ್ಠಿತ ‘ಕೇಂದ್ರ ಗೃಹ ಸಚಿವರ ದಕ್ಷತಾ ಪದಕ’ಕ್ಕೆ ಭಾಜನರಾಗಿದ್ದಾರೆ.
ಕೋಟ್ಯಂತರ ರೂ. ವಂಚನೆ ಪ್ರಕರಣ ಹಾಗೂ ಕುಖ್ಯಾತ ಲಕ್ಷ್ಮಣ ದಡ್ಡಿ ಗ್ಯಾಂಗ್ನ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾಧಾರಿತ ಸಮರ್ಥ ತನಿಖೆ ನಡೆಸಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ದೊರಕಿಸಿಕೊಡುವಲ್ಲಿ ಇವರ ಪಾತ್ರ ಹಿರಿದಾಗಿದೆ. ಅಪರಾಧ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಇವರು ತೋರಿದ ವೃತ್ತಿಪರತೆ ಇಲಾಖೆಗೆ ಮತ್ತಷ್ಟು ಕೀರ್ತಿ ತಂದಿದ್ದು, ಇತ್ತೀಚೆಷ್ಟೇ ರಾಷ್ಟ್ರಪತಿ ಪದಕ ಪಡೆದಿದ್ದ ಇವರಿಗೆ ಈಗ ಸಂದಿರುವ ಈ ಮಹತ್ವದ ಗೌರವಕ್ಕೆ ಪೊಲೀಸ್ ವಲಯ ಹಾಗೂ ಸಾರ್ವಜನಿಕರಿಂದ ವ್ಯಾಪಕ ಅಭಿನಂದನೆಗಳು ವ್ಯಕ್ತವಾಗಿವೆ.


