Local NewsPolitics
Trending

ಬೆಳಗಾವಿ: ಕಬ್ಬಿಗೆ ₹5,500 ದರಕ್ಕೆ ಪಟ್ಟು; ಸಚಿವ ಸತೀಶ್ ಜಾರಕಿಹೊಳಿ ಮನೆಗೆ ಮುತ್ತಿಗೆ ; ನಾಳೆ ಡಿಸಿ ನೇತೃತ್ವದಲ್ಲಿ ಮಹತ್ವದ ಸಭೆ

ಕಬ್ಬಿಗೆ ಪ್ರತಿ ಟನ್‌ಗೆ 5,500 ರೂಪಾಯಿ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ ರೈತರನ್ನು ಶಾಂತಗೊಳಿಸಿದ ಸಚಿವರು, ನಾಳೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಮಹತ್ವದ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ. ಸಚಿವರ ಭರವಸೆಯ ಬೆನ್ನಲ್ಲೇ ರೈತರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.

ಸವದತ್ತಿ ಗ್ರೀನ್‌ಕೋ ಯೋಜನೆ: ಅರಣ್ಯ ಒತ್ತುವರಿ, ಮರಗಳ ತೆರವು ಹಾಗೂ ಎನ್‌ಒಸಿ ದಾಖಲೆಗಳಿಗಾಗಿ ಅರಣ್ಯ ಇಲಾಖೆಗೆ ಆರ್‌ಟಿಐ ಅಸ್ತ್ರ— ತೌಸಿಫ್ ಎಂ. ಮುಲ್ಲಾ ನೇತೃತ್ವದಲ್ಲಿ ಮಾಹಿತಿ ಕೋರಿ ಪ್ರಥಮ ಮೇಲ್ಮನವಿ ಸಲ್ಲಿಕೆ!

ಜಿಲ್ಲೆಯಲ್ಲಿ ಕಬ್ಬಿಗೆ ಪ್ರತಿ ಟನ್‌ಗೆ ₹5,500 ನಗದು ಬಿಲ್ ಹಾಗೂ ಎಸ್‌ಐಪಿ ಮೂಲಕ ಹೆಚ್ಚುವರಿ ₹1,000 ನೀಡಬೇಕು ಎಂದು ಆಗ್ರಹಿಸಿ ಮುಂಜಾನೆಯಿಂದಲೇ ಸಕ್ಕರೆ ಸಂಸ್ಥೆ ಕಚೇರಿ ಬಂದ್ ಮಾಡಿ ರೈತರು ಆಂದೋಲನ ಆರಂಭಿಸಿದ್ದರು. ರಸ್ತಾ ರೋಕೋ, ಜೈಲ್ ಬರೋ ಮತ್ತು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರೂ ಸರ್ಕಾರ ಹಾಗೂ ಜಿಲ್ಲಾಡಳಿತ ಸ್ಪಂದಿಸದಿದ್ದಾಗ, ಆಕ್ರೋಶಗೊಂಡ ರೈತರು ಪಾದಯಾತ್ರೆ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಕಳೆದ ಎರಡು ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕಬ್ಬಿನ ಬಾಕಿ ಬಿಲ್ ಘೋಷಿಸಿಲ್ಲ ಎಂದು ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸವದತ್ತಿ ಗ್ರೀನ್‌ಕೋ Greenko (KA01 IREP Pvt. Ltd.) ಯೋಜನೆ : ಸಾಮಾಜಿಕ ಹಿತಾಸಕ್ತಿ ಮತ್ತು ರೈತರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಕಾರ್ಮಿಕ ಧ್ವನಿ ಮುಖ್ಯ ಸಂಪಾದಕರು ಹಾಗೂ ಸಾರ್ವಜನಿಕ ಹಕ್ಕುಗಳ ಸೆಲ್‌ನ ರಾಷ್ಟ್ರೀಯ ಅಧ್ಯಕ್ಷರಾದ ತೌಸಿಫ್ ಎಂ. ಮುಲ್ಲಾ, ದಿನಾಂಕವಾರು ಕಡತಗಳ ವಿವರ ಹಾಗೂ ಮಾಹಿತಿ ಆಯೋಗದ ಕಾನೂನು ಹೋರಾಟ

ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸ್ವಾಗತಿಸುವ ಜೊತೆಗೆ ರೈತರಿಗಾಗಿ “ಆರನೇ ಗ್ಯಾರಂಟಿ”ಯಾಗಿ ಕಬ್ಬಿನ ಸೂಕ್ತ ಬೆಲೆಯನ್ನು ಜಾರಿಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು. ಕಬ್ಬಿನ ದರದ ವಿಚಾರವಾಗಿ ವಿವಿಧ ರೈತ ಸಂಘಟನೆಗಳು ಬೇರೆ ಬೇರೆ ಬೇಡಿಕೆಗಳನ್ನು ಇಡುತ್ತಿರುವುದರಿಂದ ಗೊಂದಲ ಉಂಟಾಗಿದೆ. ಹೀಗಾಗಿ ಎಲ್ಲಾ ರೈತ ಸಂಘಟನೆಗಳು ಒಂದಾಗಬೇಕು. ನಾಳೆ ಜಿಲ್ಲಾಧಿಕಾರಿಗಳ (DC) ನೇತೃತ್ವದಲ್ಲಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರ ಜಂಟಿ ಸಭೆ ಕರೆಯಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ಸಚಿವರ ಮಧ್ಯಸ್ಥಿಕೆ ಹಾಗೂ ಭರವಸೆಯ ಹಿನ್ನೆಲೆಯಲ್ಲಿ ರೈತ ಮುಖಂಡ ಗಣೇಶ್ ಮತ್ತು ಇತರ ನಾಯಕರು ಧರಣಿಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ನಾಳೆ ನಡೆಯಲಿರುವ ಡಿಸಿ ನೇತೃತ್ವದ ಸಭೆಯಲ್ಲಿ ರೈತರ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಮಂತ್ರಿಗಳು ಹಾಗೂ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಿ ಮತ್ತಷ್ಟು ಉಗ್ರ ಹೋರಾಟ ರೂಪಿಸುವುದಾಗಿ ಸರ್ಕಾರ ಮತ್ತು ಸಚಿವರಿಗೆ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button