State

Muharram Holidays: ಶಾಲಾ-ಕಾಲೇಜುಗಳಿಗೆ ಮೊಹರಂ ಹಬ್ಬಕ್ಕೆ ರಜೆ ಇದೆಯೋ ಇಲ್ವೋ? ಎಂಬುವುದನ್ನು ತಿಳಿದುಕೊಳ್ಳಲು ಮುಂದೆ ಓದಿ…

ಮುಸ್ಲಿಂ ಸಮುದಾಯದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮೊಹರಂ ಹಬ್ಬ ಕೂಡ ಒಂದಾಗಿದೆ. ಈ ವರ್ಷ ಭಾರತದಲ್ಲಿ ಜುಲೈ 6 ಅಥವಾ 7, 2025 ರಂದು ಬಂದಿದೆ. ಆದರೆ ಮೊಹರಂ ಹಬ್ಬ ಶುರವಾಗಬೇಕಾದ್ದರೆ ಅರ್ಧ ಚಂದ್ರ ದರ್ಶನವಾದ್ದರೆ ಮಾತ್ರ ಇವರು ಮೊಹರಂ ಹಬ್ಬವನ್ನು ಆಚರಣೆ ಮಾಡುತ್ತಾರೆ.

ಇಲ್ಲವಾದ್ದರೆ ಮುಂದಿನ ದಿನ ಜುಲೈ 7 ಕ್ಕೆ ಮುಂದೂಡಿಕೆಯನ್ನು ಮಾಡಲಾಗುತ್ತದೆ. ಹಾಗಿದ್ದರೆ ಮೊಹರಂ ಹಬ್ಬಕ್ಕೆ ದೇಶಾದ್ಯಂತ ಶಾಲೆಗಳು ರಜೆ ಇರುತ್ತದೆಯೇ ಎಂಬ ಪ್ರಶ್ನೆ ಶಾಲಾ-ಕಾಲೇಗು ಮಕ್ಕಳಿಗೆ ಹಾಗೂ ಪೋಷಕರಲ್ಲಿ ಇದೆ. ರಜೆ ಇರುತ್ತೋ ಇಲ್ಲವೂ ಎಂಬುವುದನ್ನು ತಿಳಿದುಕೊಳ್ಳಲು ಮುಂದೆ ಓದಿ…

ಮೊಹರಂ ಹಬ್ಬದ ರಜೆ ಚಂದ್ರನ ದರ್ಶನದ ಮೇಲೆ ನಿರ್ಧಾರವಾಗುವುದರಿಂದ, ಪೋಷಕರು ಮತ್ತು ವಿದ್ಯಾರ್ಥಿಗಳು ರಾಜ್ಯ ಸರ್ಕಾರಗಳ ಅಧಿಕೃತ ಪ್ರಕಟಣೆಯತ್ತ ಎಲ್ಲಾ ಕಣ್ಣು ನೆಟ್ಟಿದ್ದು, ಇದುವರೆಗೂ ಯಾವುದೇ ಅಧೀಕೃತ ಪ್ರಕಟನೆಯನ್ನು ಸರ್ಕಾರ ಹೊರಡಿಸಿಲ್ಲ. ಸರ್ಕಾರಿ ಕ್ಯಾಲೆಂಡರ್ ಪ್ರಕಾರ ಜುಲೈ 6 ಭಾನುವಾರವನ್ನು ಮೊಹರಂ ಹಬ್ಬದ ದಿವನ್ನಾಗಿ ಗುರುತಿಸಲಾಗಿದೆ. ಆದರೆ, ಅಂತಿಮ ನಿರ್ಧಾರವು ಚಂದ್ರನ ದರ್ಶನದ ಮೇಲೆ ಅವಲಂಬಿತವಾಗಿರುತ್ತದೆ. ಚಂದ್ರನು ಒಂದು ದಿನ ತಡವಾಗಿ ಕಾಣಿಸಿಕೊಂಡರೆ, ಮೊಹರಂ ಆಚರಣೆಯು ಜುಲೈ 7ಕ್ಕೆ ಬದಲಾಗಬಹುದು. ಇದು ಅನೇಕ ರಾಜ್ಯಗಳಲ್ಲಿ ಶಾಲಾ ವೇಳಾಪಟ್ಟಿ ಮತ್ತು ಕಚೇರಿಗಳ ಮೇಲೆ ಪರಿಣಾಮ ಬೀರುತ್ತದೆ.

ಚಂದ್ರ ದರ್ಶನದ ಮೇಲೆ ರಜೆ ನಿರ್ಧಾರ

ಮೊಹರಂ ರಜಾದಿನ ಪ್ರತಿಬಾರಿಯೂ ಅರ್ಧ ಚಂದ್ರನ ದರ್ಶನದ ಮೇಲೆ ಅವಲಂಭಿಸಿರುತ್ತದೆ. ಚಂದ್ರನು ಕಾಣಿಸದಿದ್ದರೆ ರಜೆಯನ್ನು ಒಂದು ದಿನ ಮುಂದೂಡಿಕೆಯನ್ನು ಮಾಡಲಾಗುತ್ತದೆ. ಇದರಿಂದದಾಗಿ ಜುಲೈ 6ರಂದು ಮೊಹರಂ ಇರುವುದರಿಂದ, ಭಾರತದಲ್ಲಿ ಸಾರ್ವಜನಿಕ ರಜಾದಿನವನ್ನು ಚಂದ್ರ ದರ್ಶನದ ನಂತರವೇ ನಿರ್ಧಾರವನ್ನು ಮಾಡಲಾಗುತ್ತದೆ.

ಇಸ್ಲಾಮಿಕ್ ಹೊಸ ವರ್ಷದ ಆರಂಭವನ್ನು ಸೂಚಿಸುವ ಮೊಹರಂ ಅನ್ನು ಭಾರತದಲ್ಲಿ ಗೆಜೆಟೆಡ್ ರಜಾದಿನವಾಗಿ ಆಚರಣೆಯನ್ನು ಮಾಡಲಾಗುತ್ತದೆ ಆದರ ಈ ದಿನದಂದು ಶಾಲೆಗಳು, ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕುಗಳು ಸಾಮಾನ್ಯವಾಗಿ ರಜೆಯಂತೂ ಇದ್ದೇ ಇರುತ್ತದೆ.

ಶಾಲಾ ರಜೆ ದಿನಗಳನ್ನು ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಮುಂತಾದ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳು ಚಂದ್ರ ದರ್ಶನದ ನಂತರ ರಜೆ ಘೋಷಿಸುವ ಸಾಧ್ಯತೆ ಹೆಚ್ಚಾಗಿ ಇದೆ. ಆದ್ದರಿಂದ, ಶಾಲಾ ಮಕ್ಕಳು,ಜಿಲ್ಲಾಡಳಿತದ ವೆಬ್‌ಸೈಟ್ ಮತ್ತು ರಾಜ್ಯ ಶಿಕ್ಷಣ ಇಲಾಖೆಯ ಪ್ರಕಟಣೆಗಳನ್ನು ಗಮನಿಸಲು ಸೂಚನೆಯನ್ನು ನೀಡಲಾಗಿದೆ.

ಷೇರು ಮಾರುಕಟ್ಟೆಗೆ ಮೊಹರಂ ಹಬ್ಬದಂದು ರಜೆ

ಮೊಹರಂ ಹಬ್ಬಕ್ಕೆ ಷೇರು ಮಾರುಕಟ್ಟೆಗೆ ರಜೆ ಇರುತ್ತದೆ. ಈ ಮೊಹರಂ ದಿನದಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರ (ಬಿಎಸ್‌ಇ) ಗಳಿಗೆ ರಜೆ ಇರುತ್ತದೆ. ಇದು ಯಾವುದೇ ವಾಹಿವಾಟು ಪ್ರಕ್ರಿಯೆಗಳು ನಡೆಯುವುದಿಲ್ಲ. ಇದರಲ್ಲಿ ಈಕ್ವಿಟಿ, ಈಕ್ವಿಟಿ ಉತ್ಪನ್ನಗಳು, ಎಸ್‌ಎಲ್‌ಬಿ (ಸೆಕ್ಯುರಿಟೀಸ್ ಲೆಂಡಿಂಗ್ ಮತ್ತು ಎರವಲು), ಕರೆನ್ಸಿ ಉತ್ಪನ್ನಗಳು ಮತ್ತು ಬಡ್ಡಿದರ ಉತ್ಪನ್ನಗಳ ವ್ಯಾಪಾರವು ಸಹ ಮುಚ್ಚಿರುತ್ತದೆ.

ಮುಹರಂ ಹಬ್ಬಕ್ಕೆ ಎಲ್ಲಾ ಶಾಲೆಗಳು, ಬ್ಯಾಂಕ್‌ಗಳು, ಅಂಚೆ ಕಚೇರಿಗಳು, ಸರ್ಕಾರಿ ಕಚೇರಿಗಳು ಮತ್ತು ಕೆಲವು ಖಾಸಗಿ ಕಚೇರಿಗಳಿಗೆ ಸಾಮಾನ್ಯವಾಗಿ ರಜೆ ಇರುತ್ತದೆ.

ಮೊಹರಂ/ಅಶೂರ/ಯು ತಿರೋತ್ ಸಿಂಗ್ ದಿನದ ರಜಾದಿನಗಳು ಆರ್‌ಬಿಐನ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿಯಲ್ಲಿ ರಜಾದಿನಗಳ ವರ್ಗಕ್ಕೆ ಸೇರಿವೆ. ಆದ್ದರಿಂದ, ಭಾರತದ ಎಲ್ಲಾ ನಗರಗಳು ಬ್ಯಾಂಕ್ ರಜಾದಿನಗಳನ್ನು ಹೋಂದಿರುವುದಿಲ್ಲ.

ಮೊಹರಂ ಹಬ್ಬದ ಆಚರಣೆ

ಮೊಹರಂನ ಮಹತ್ವ ಮೊಹರಂ ಹೊಸ ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುತ್ತದೆ ಇದನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಪವಿತ್ರ ತಿಂಗಳುಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.10ನೇ ದಿನದಂದು ಬರುವ ಅಶುರಾ ದಿನವು ಮೊಹರಂನ ವಿಶೇಷ ಮಹತ್ವವನ್ನು ಹೊಂದಿದೆ. ಅನೇಕ ಮುಸ್ಲಿಮರಿಗೆ, ವಿಶೇಷವಾಗಿ ಶಿಯಾ ಪಂಥದವರಿಗೆ, ಅಶುರಾ ಶೋಕದ ದಿನವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ 2025ರ ಮೊಹರಂ ರಜೆಯ ಬಗ್ಗೆ ಅಂತಿಮ ನಿರ್ಧಾರವು ಚಂದ್ರನ ದರ್ಶನದ ನಂತರ ಹೊರಬೀಳಲಿದೆ. ಅಲ್ಲಿಯವರೆಗೆ, ಪೋಷಕರು ಮತ್ತು ವಿದ್ಯಾರ್ಥಿಗಳು ಅಧಿಕೃತ ಪ್ರಕಟಣೆಗಳಿಗಾಗಿ ಕಾಯುವುದು ಲೇಸು.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button