State
ಹುಕ್ಕೇರಿ: ತಾಲೂಕಿನ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಡಾ. ರಾಜು ಮೇತ್ರಿ ಅಧಿಕಾರ ಸ್ವೀಕರಿಸಿದರು.
ಹುಕ್ಕೇರಿ ಪಶು ಇಲಾಖೆಗೆ ರಾಜು ಮೇತ್ರಿ ಅಧಿಕಾರಿ

ಹುಕ್ಕೇರಿ: ತಾಲೂಕಿನ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಡಾ. ರಾಜು ಮೇತ್ರಿ ಅಧಿಕಾರ ಸ್ವೀಕರಿಸಿದರು.
ಇಲ್ಲಿನ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧಿಕಾರಿ ಸ್ವೀಕರಿಸಿ ರಾಜು ಮೇತ್ರಿ ಮಾತನಾಡಿ, ತಾಲೂಕಿನಲ್ಲಿ ಇಲಾಖೆಯ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲಾಗುವುದು.
ಇದರೊಂದಿಗೆ ಜನಪ್ರತಿನಿಧಿಗಳು ಮತ್ತು ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಈ ಹಿಂದಿನ ಅಧಿಕಾರಿ ಡಾ. ರಮೇಶ ಕದಮ್ ಅವರು ಕಿತ್ತೂರಿಗೆ ವರ್ಗಾವಣೆಯಾದ ಪ್ರಯುಕ್ತ ತೆರವಾದ ಸ್ಥಾನಕ್ಕೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಮೇತ್ರಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮೇತ್ರಿ ಇಲ್ಲಿಗೆ ಬರುವ ಮೊದಲು ತಾಲೂಕಿನ ಕೇಸ್ತಿ- ಬೋರಗಲ್ ಪಶು ಆಸ್ಪತ್ರೆ ವೈದ್ಯಾಧಿಕಾರಿಯಾಗಿದ್ದರು. ಇದೀಗ ಮೇತ್ರಿ ಅವರು ಮುಂಬಡ್ತಿ ಪಡೆಯುವ ಮೂಲಕ ತಾಲೂಕಿನ ಪಶು ಇಲಾಖೆಯ ಆಡಳಿತ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ.



