ಬೆಳಗಾವಿ ನಗರ ಪೊಲೀಸರಿಗೆ ನೂತನ ಬೈಕ್’ಗಳನ್ನು ನೀಡಬೇಕೆಂಬ ಬಹು ದಿನಗಳ ಬೇಡಿಕೆ 13 ಹೊಸ ಬೈಕ್ ವಿತರಿಸಿದ ಶಾಸಕ ಆಸೀಫ್ ಸೇಠ್

ಬೆಳಗಾವಿ: ಬೆಳಗಾವಿ ನಗರ ಪೊಲೀಸರಿಗೆ ನೂತನ ಬೈಕ್’ಗಳನ್ನು ನೀಡಬೇಕೆಂಬ ಬಹು ದಿನಗಳ ಬೇಡಿಕೆ ಇಂದು ನೆರವೇರಿಸಲಾಗಿದೆ ಎಂದು ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಹೇಳಿದರು.
ಇಂದು ಬೆಳಗಾವಿ ಕಮೀಷನರ್ ಕಚೇರಿಯ ಆವರಣದಲ್ಲಿ 13 ಬೈಕ್’ಗಳನ್ನು ನಗರ ಪೊಲೀಸರಿಗೆ ಹಸ್ತಾಂತರಿಸಿ ಅವರು ಮಾತನಾಡಿ,ಇಂದು ಪೊಲೀಸರ ಮೇಲೆ ಒತ್ತಡ ಹೇರುವ ಕೆಲಸವಾಗುತ್ತಿದೆ. ಆದ್ದರಿಂದ ನಾವು ಕೂಡಾ ನಮ್ಮ ಪೊಲೀಸರಿಗೆ ಸಾಧ್ಯವಾದಷ್ಟು ಸಹಾಯ ಮಾಡುವ ಕೆಲಸ ಮಾಡಬೇಕಿದೆ. ಸದ್ಯ ನಾವು ಪೊಲೀಸರ ಸಮಸ್ಯೆಗಳೇನು ನೋಡಬೇಕು ಹೊರತು ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಮುಂದಿನ ದಿನಮಾನಗಳಲ್ಲಿ ಇಲಾಖೆಗೆ ಮತ್ತೆ ಎನಾದರು ಬೇಕಾದರೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡುವುದಾಗಿ ಭರವಸೆ ನೀಡಿದರು.
ಬೆಳಗಾವಿ ಪೊಲೀಸ್ ಕಮಿಷನರ್ ಆಗಿ ಭೂಷಣ ಗುಲಾಬರಾವ್ ಬೊರಸೆ ಮಾತನಾಡಿ, ಪೊಲೀಸ ಇಲಾಖೆಯೊಂದಿಗೆ ಉತ್ತರ ಮತಕ್ಷೇತ್ರದ ಶಾಸಕರು ಬೆಂಬಲ ಬಹಳಷ್ಟುವಿದೆ. ಬೆಳಗಾವಿಯಲ್ಲಿ ಚಿಕ್ಕ ಚಿಕ್ಕ ಬೀದಿಗಳಿವೆ ದೊಡ್ಡ ವಾಹನಗಳಲ್ಲಿ ಪೆಟ್ರೋಲಿಂಗ್ ಮಾಡುವುದು ಕಷ್ಟ. ಬೈಕ್ ಗಳಿದರೆ ಚಿಕ್ಕ ಚಿಕ್ಕ ಬೀದಿಗಳಲ್ಲಿ ಪೊಲೀಸರು ಪೆಟ್ರೋಲಿಂಗ್ ಮಾಡಿ ಭೇಟಿ ನೀಡಲು ಸಾಧ್ಯ ಎಂದ ಅವರು, ಉತ್ತಮ, ಸುರಕ್ಷಿತ ಬೆಳಗಾವಿ ನಗರ ನಿರ್ಮಾಣಕ್ಕೆ ಬೆಳಗಾವಿ ಪೊಲೀಸರು ಪಣ ತೊಟ್ಟಿದ್ದು ಇದ್ದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಇದೇ ವೇಳೆ ಹೊಸ 13 ಬುಲೆಟ್ ಬೈಕಗಳನ್ನು ಪೊಲೀಸರಿಗೆ ಶಾಸಕ ಆಸೀಫ್ ಸೇಠ್ ಹಸ್ತಾಂತರಿಸಿದರು. ಈ ವೇಳೆ ಡಿಸಿಪಿ ನಾರಾಯಣ ಭರಮನಿ, ಎಸಿಪಿ ಸದಾಶಿವ ಕಟ್ಟಿಮನಿ, ಸಿಪಿಐಗಳಾದ ಜೆ.ಎಂ.ಕಾಲಿಮಿರ್ಚಿ, ಗಡ್ಡೇಕರ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.