
ಕಾರವಾರ: ಇಲ್ಲಿನ ಸದಾಶಿವಗಡದಲ್ಲಿರುವ ಶಾಸಕ ಸತೀಶ ಸೈಲ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ತಂಡ ಬುಧವಾರ ನಸುಕಿನ ಜಾವ ದಾಳಿ ನಡೆಸಿದೆ.
ಆರು ಜನ ಅಧಿಕಾರಿಗಳನ್ನು ಒಳಗೊಂಡ ತಂಡವು ನಾಲ್ಕು ವಾಹನಗಳಲ್ಲಿ ನಸುಕಿನ ಜಾವ ಆಗಮಿಸಿದ್ದು, ಮನೆಯೊಳಗೆ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ.
ಮನೆಯ ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಸಿಐಎಸ್‌ಎಫ್ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.
ಶಾಸಕ ಸತೀಶ ಸೈಲ್ ಮನೆಯಲ್ಲಿ ಇಲ್ಲ. ಅವರ ಕುಟುಂಬ ಸದಸ್ಯರಿಂದ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.