Local NewsState
Trending

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ 9 ದಿನಗಳ ತಾತ್ಕಾಲಿಕ ಕಲಾಪ ವೇಳಾಪಟ್ಟಿ

ಬೆಳಗಾವಿ: ಉತ್ತರ ಕರ್ನಾಟಕದ ಪ್ರಮುಖ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಲಿರುವ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 2ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ಒಟ್ಟು 9 ದಿನಗಳ ಕಾಲ ಕಲಾಪ ನಡೆಯಲಿದೆ.

ಈ ಕುರಿತು ಕರ್ನಾಟಕ ಸರ್ಕಾರದ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ನವೆಂಬರ್ 6ರಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಭಾರತ ಸಂವಿಧಾನದ ಅನುಚ್ಛೇದ 174(1)ರ ಅಡಿಯಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ತಮ್ಮ ಅಧಿಕಾರ ಚಲಾಯಿಸಿ ಅಧಿವೇಶನ ಕರೆಯುವ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 2ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನಸಭೆಯ ಕಲಾಪ ಆರಂಭವಾಗಲಿದೆ. ಸರ್ಕಾರದ ಕಾರ್ಯದರ್ಶಿ ಜಿ. ಶ್ರೀಧರ್ ಅವರು ಆದೇಶಕ್ಕೆ ಸಹಿ ಹಾಕಿದ್ದಾರೆ.

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್.!

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್.!

9 ದಿನಗಳ ತಾತ್ಕಾಲಿಕ ಕಲಾಪ ವೇಳಾಪಟ್ಟಿ
ಅಧಿವೇಶನದ ತಾತ್ಕಾಲಿಕ ಕಾರ್ಯಕಲಾಪಗಳ ವೇಳಾಪಟ್ಟಿಯೂ ಪ್ರಕಟಗೊಂಡಿದೆ.

ಡಿ. 2, ಬುಧವಾರ: ಸರ್ಕಾರಿ ಕಾರ್ಯಕಲಾಪಗಳು
ಡಿ. 3, ಗುರುವಾರ: ಖಾಸಗಿ ಹಾಗೂ ಸರ್ಕಾರಿ ಕಾರ್ಯಕಲಾಪಗಳು
ಡಿ. 4, ಶುಕ್ರವಾರ: ಸರ್ಕಾರಿ ಕಾರ್ಯಕಲಾಪಗಳು
ಡಿ. 5, ಶನಿವಾರ: ಸರ್ಕಾರಿ ಕಾರ್ಯಕಲಾಪಗಳು
ಡಿ. 6, ಭಾನುವಾರ: ಸಾರ್ವತ್ರಿಕ ರಜೆ
ಡಿ. 7, ಸೋಮವಾರ: ಸರ್ಕಾರಿ ಕಾರ್ಯಕಲಾಪಗಳು
ಡಿ. 8, ಮಂಗಳವಾರ: ಸರ್ಕಾರಿ ಕಾರ್ಯಕಲಾಪಗಳು
ಡಿ. 9, ಬುಧವಾರ: ಸರ್ಕಾರಿ ಕಾರ್ಯಕಲಾಪಗಳು
ಡಿ. 10, ಗುರುವಾರ: ಖಾಸಗಿ ಹಾಗೂ ಸರ್ಕಾರಿ ಕಾರ್ಯಕಲಾಪಗಳು
ಡಿ. 11, ಶುಕ್ರವಾರ: ಸರ್ಕಾರಿ ಕಾರ್ಯಕಲಾಪಗಳೊಂದಿಗೆ ಅಧಿವೇಶನ ಮುಕ್ತಾಯ.
ರಾಜ್ಯಪಾಲರ ಅಧಿಕೃತ ಆದೇಶ ಹೊರಬಿದ್ದ ಬೆನ್ನಲ್ಲೇ ಬೆಳಗಾವಿ ಜಿಲ್ಲಾಡಳಿತ ಅಧಿವೇಶನದ ಸಿದ್ಧತೆಗಳನ್ನು ಚುರುಕುಗೊಳಿಸುವ ನಿರೀಕ್ಷೆಯಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದ ಸುತ್ತಮುತ್ತ ಮೂಲಸೌಕರ್ಯ, ಭದ್ರತೆ, ವಸತಿ ಹಾಗೂ ಇತರ ವ್ಯವಸ್ಥೆಗಳ ಸಿದ್ಧತೆಗಳು ಮಹತ್ವ ಪಡೆದುಕೊಂಡಿವೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button