ಏನಿದು ಪ್ರಕರಣ: ಸರ್ಕಾರಕ್ಕೇ ಮೋಸ: ತಹಶೀಲ್ದಾರ್ ಸೇರಿ 6 ಜನ ಅಧಿಕಾರಿಗಳು ಸಸ್ಪೆಂಡ್!

ಧಾರವಾಡದಲ್ಲಿ ಸರ್ಕಾರಕ್ಕೆ ಮೋಸ ಮಾಡಿದ ಆರೋಪದ ಮೇಲೆ ತಹಶೀಲ್ದಾರ್ ಸೇರಿ 6 ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಧಾರವಾಡದ ಕಲಘಟಗಿಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಕ್ಕೆ ವಂಚನೆ ಮಾಡಿದ ಅಥವಾ ಕರ್ತವ್ಯ ಲೋಪದ ಆರೋಪದ ಮೇಲೆ ಇಲ್ಲಿನ ತಹಶೀಲ್ದಾರ್ ಹಾಗೂ ಆರು ಜನ ಕೃಷಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಉದ್ದೇಶಪೂರ್ವಕವಾಗಿ ರೈತರ ಮಾಹಿತಿಯನ್ನು ತಪ್ಪಾಗಿ ನಮೂದಿಸಿದ ಆರೋಪ ಇವರ ಮೇಲಿದೆ. ರೈತರ ಯಾವ ಮಾಹಿತಿಯನ್ನು ತಿರುಚಲಾಗಿತ್ತು. ಏನಿದು ಘಟನೆ ಹಾಗೂ ಯಾವ ಕಾರಣಕ್ಕೆ ಸಸ್ಪೆಂಡ್ ಮಾಡಲಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕಲಘಟಗಿಯಲ್ಲಿ ಸರ್ಕಾರಿ ಅಧಿಕಾರಿಗಳು ಮಾಡಿರುವ ಕೆಲಸ ಭಾರೀ ಚರ್ಚೆ ಹಾಗೂ ಆಕ್ರೋಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ತಹಶೀಲ್ದಾರ್ ಸೇರಿ 6 ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ರೈತರ ಪ್ರಮುಖ ಮಾಹಿತಿಯನ್ನೇ ತಪ್ಪಾಗಿ ನಮೂದಿಸಿ ವಂಚನೆ ಮಾಡಿದ ಆರೋಪ ಇವರ ಮೇಲೆ ಕೇಳಿ ಬಂದಿದೆ ಎಂದು ಹೇಳಲಾಗಿದೆ. 2024-25ನೇ ಸಾಲಿನ ಬೆಳೆ ಹಾನಿ ವಿವರ ತಂತ್ರಾಂಶದಲ್ಲಿ ತಪ್ಪು ಮಾಹಿತಿ ದಾಖಲಿಸಲಾಗಿದೆ. ಇದರಲ್ಲಿ ಇಲ್ಲಿನ ತಹಶೀಲ್ದಾರ್ ಅವರು ಸಹ ಭಾಗಿಯಾಗಿದ್ದರು ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಪರಿಶೀಲನೆ ಮಾಡಿದ ನಂತರ ಇದೀಗ ಸಸ್ಪೆಂಡ್ ಆರ್ಡರ್ ಮಾಡಲಾಗಿದೆ.
ಏನಿದು ಪ್ರಕರಣ: ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನಲ್ಲಿ 2024-25ನೇ ಸಾಲಿನ ಬೆಳೆ ಹಾನಿ ವಿವರ ತಂತ್ರಾಂಶದಲ್ಲಿ ತಪ್ಪು ಮಾಹಿತಿ ದಾಖಲಿಸಲಾಗಿದೆ ಎನ್ನುವ ಆರೋಪ ಇದೆ. ಈ ರೀತಿ ತಂತ್ರಾಂಶದಲ್ಲಿ ವಿವರವನ್ನು ಸಲ್ಲಿಸುವಾಗ ಅನರ್ಹ ರೈತರ ವಿವರಗಳನ್ನೂ ಸಹ ದಾಖಲಿಸುವ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವನ್ನು ಉಂಟು ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಕ್ರಮ ತೆಗೆದುಕೊಂಡಿದೆ.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿ.ಎಸ್.ಮುಳುಗುಂದ ಮಠ, ಸಹಾಯಕ ಕೃಷಿ ನಿರ್ದೇಶಕ ಅಮರ ನಾಯ್ಕರ ಹಾಗೂ ಅಲ್ಲದೆ 6 ಜನ ಗ್ರಾಮ ಆಡಳಿತಾಧಿಕಾರಿಗಳನ್ನು ಸಹ ಇದೇ ಕಾರಣಕ್ಕೆ ಸಸ್ಪೆಂಡ್ ಮಾಡುವಂತೆ ಡಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಸೂಚನೆ ನೀಡಿದ್ದಾರೆ. ವಿ.ಎಸ್.ಮುಳುಗುಂದಮಠ, ಅಮರ ನಾಯ್ಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಶಿಸ್ತುಕ್ರಮ ಜರುಗಿಸಲು ತಾಕೀತು ಮಾಡಲಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆ ಸಕ್ಷಮ ಪ್ರಾಧಿಕಾರದವರಿಗೆ ಈ ಸಂಬಂಧ ಸೂಚನೆ ನೀಡಲಾಗಿದೆ.
ಶಿದ್ಧನಬಾವಿಯ ಗ್ರಾಮ ಆಡಳಿತಾ ಧಿಕಾರಿ ಶಹನಾಜ ಮಾರಡಗಿ, ಸೂಳಿಕಟ್ಟಿಯ ಮನೋಜ ಕೆರೂರ, ದ್ಯಾವನಕೊಂಡ, ಮಲಕನಕೊಪ್ಪದ ಮಹದೇವಪ್ಪ ಹುಲಮನಿ, ಹಾರೋಗೇರಿಯ ಈಶ್ವರ ಕಂಬಿ, ಜಿನ್ನೂರಿನ ಸಪ್ಪಾ ಪೂಜಾರಿ, ಸೋಲಾರಗೊಪ್ಪದ ಸಾಗರ ಬಂಗಾರಿ ಎನ್ನುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.


