ಗುರಿ ತಲುಪಲು ತರಬೇತಿ ಅಗತ್ಯ: ಶ್ರೀ ದಿಲೀಪ್ ಕುರುಂದವಾಡೆ

*ಗುರಿ ತಲುಪಲು ತರಬೇತಿ ಅಗತ್ಯ: ಶ್ರೀ ದಿಲೀಪ್ ಕುರುಂದವಾಡೆ*
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪುರುಷ ಮತ್ತು ಮಹಿಳಾ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಉದ್ದಿಮೆದಾರರ ಹಾಗೂ ತರಬೇತಿದಾರರಿಗೆ ಪ್ರಧಾನ ಮಂತ್ರಿ ಇಂಟ್ರನ್ಶಿಪ್ ಹಾಗೂ ಶಿಶಿಕ್ಷು ತರಬೇತಿ ಅರಿವು ಕುರಿತು ದಿನಾಂಕ 15.2.2025 ರಂದು ಕಾರ್ಯಕ್ರಮ ಜರುಗಿತು.


ವಿಶೇಷ ಉಪನ್ಯಾಸಕರಾಗಿ ಶ್ರೀ ದಿಲೀಪ್ ಕುರುಂದವಾಡೆ ಅವರು ತರಬೇತಿದಾರರನ್ನು ಉದ್ದೇಶಿಸಿ ಮುಖ್ಯ ಉಪನ್ಯಾಸ ಕರಾಗಿ ಮಾತನಾಡುತ್ತಾ ಜೀವನದಲ್ಲಿ ಯಶಸ್ಸು ಕಾಣಲು ಗುರಿ ಮುಖ್ಯವಾದದ್ದು, ಗುರಿ ತಲುಪಲು ಇಂಟ್ರನ್ಶಿಪ್ ಹಾಗೂ ಶಿಶಿಕ್ಷು ತರಬೇತಿಗಳು ಸಾಧನಗಳಾಗಿವೆ ಎಂದು ಹೇಳಿದರು.
ಎಫ್ ಟಿ ಡಬ್ಲ್ಯೂ ಕಂಪನಿ ಮೆಲ್ಬೋರ್ನ್ ವಿಕ್ಟೋರಿಯಾ ಆಸ್ಟ್ರೇಲಿಯಾದ ವಿಜ್ಞಾನಿ ಶ್ರೀ ಬಸನಗೌಡ ಪಾಟೀಲ್ ರವರು ಎಲ್ಲ ಸಮಸ್ಯೆಗಳಿಗೆ ಕೌಶಲ್ಯವೇ ಪರಿಹಾರ ಕೌಶಲ್ಯ ಪಡೆಯಲು ತರಬೇತಿ ಅವಶ್ಯಕ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಆರ್ ಎಸ್ ಚಿಕ್ಕಮಠ ಪ್ರಾಚಾರ್ಯರು ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು, ಉದ್ದಿಮೆದಾರರಾದ ಶ್ರೀ ಸದಾನಂದ ಹುಂಬರವಾಡಿ ಅಶೋಕ ಐರನ್ ವರ್ಕ್ಸ್ ಕಾರ್ಯದರ್ಶಿಗಳು, ಪ್ಲಾನೆಟ್ ಹೈಡ್ರೋಲಿಕ್ಸ್ ನ ಎಂ. ಡಿ. ಶ್ರೀ ಆಂಟೋನಿ ಜಾನ್ ಡಿಸೋಜ ಮತ್ತು ತರಬೇತಿ ಅಧಿಕಾರಿಗಳಾದ ಶ್ರೀಶೈಲ ಕಾಳೆಶಿಂಗೆ , ಶ್ರೀ ರಿಯಾಜ್ ಅಹ್ಮದ್ ಬುಯಾರ್ ಮತ್ತು ಶ್ರೀ ಎಫ್ ಎಂ ಹವಾಲ್ದಾರ್ ಮುಂತಾದವರು ಭಾಗವಹಿಸಿದ್ದರು.
ಉದ್ಯಮ ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು ಶ್ರೀ ಚಿದಾನಂದ ಬಾಕೆ ಪ್ರಾಚಾರ್ಯರು ಅಧ್ಯಕ್ಷತೆಯನ್ನು ವಹಿಸಿದ್ದರು, ಶ್ರೀ ಬಿ ಹೆಚ್ ತಂಗಡಿ ಅವರು ಸ್ವಾಗತಿಸಿ ಪರಿಚಯಿಸಿದರು, ಪ್ರಾಸ್ತಾವಿಕವಾಗಿ ಶ್ರೀ ಕೆ.ಜಿ. ಜನವಾಡ ಮಾತನಾಡಿದರು ಮತ್ತು ಶ್ರೀ ಆನಂದ ಯಲ್ಲಟ್ಟಿಕರ್ ನಿರೂಪಿಸಿದರು ಶ್ರೀ ಅನಿಲ್ ಅತ್ತಿಮರದ ವಂದಿಸಿದರು.


