Education
ಆದರ್ಶ ವಿದ್ಯಾಲಯ ಯಡ್ರಾವಿಯಲ್ಲಿ ವೇಷಭೂಷಣ ಧರಿಸಿ, ಆಯಾ ಪಾತ್ರ ಮತ್ತು ಪಾಠಗಳ ಕುರಿತು ಉತ್ತಮ ರೀತಿಯಲ್ಲಿ ವಿವರಣೆ ನೀಡಿದರು

ಇಂದು ಆದರ್ಶ ವಿದ್ಯಾಲಯ ಯಡ್ರಾವಿಯಲ್ಲಿ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಮಹಾಂತೇಶ ಮುದ್ದನ್ನವರ ಅವರ ಮಾರ್ಗದರ್ಶನದಲ್ಲಿ 9ನೇ ಮತ್ತು 10ನೇ ತರಗತಿಗಳ ಕನ್ನಡ ಪಾಠಗಳ ಆಧಾರಿತವಾಗಿ ಬರುವ ಪಾತ್ರಗಳ ವೇಷಭೂಷಣಗಳನ್ನು ವಿದ್ಯಾರ್ಥಿಗಳು ಧರಿಸಿ, ಆಯಾ ಪಾತ್ರ ಮತ್ತು ಪಾಠಗಳ ಕುರಿತು ಉತ್ತಮ ರೀತಿಯಲ್ಲಿ ವಿವರಣೆ ನೀಡಿದರು. ಈ ‘ ವ್ಯಕ್ತಿತ್ವ ಪ್ರದರ್ಶನ ‘ ಪರಿಕಲ್ಪನೆ ಅಡಿಯಲ್ಲಿ ಎಲ್ಲಾ ಮಕ್ಕಳು ಉತ್ಸುಕತೆಯಿಂದ ಭಾಗವಹಿಸಿ ಆನಂದಿಸಿದರು.
ಈ ಅವಕಾಶವನ್ನು ಒದಗಿಸಿದ ಮುಖ್ಯ ಶಿಕ್ಷಕರಾದ ಶ್ರೀ ಆರ್ ಎಫ ಮಾಗಿ ಗುರುಗಳಿಗೆ ಧನ್ಯವಾದಗಳು. ಈ ಚಟುವಟಿಕೆಯಲ್ಲಿ ಭಾಗಿಯಾಗಿ ಜೊತೆಯಲ್ಲಿ ನಿಂತ ಶ್ರೀ ಐ ಜಿ ಉಳ್ಳಿಗೆರಿ ಸರ್, ಶ್ರೀ ಪ್ರವೀಣ ಬಣಕಾರ ಸರ್, ಶ್ರೀ ಹಲ್ಕರ್ನಿಮಠ ಸರ್, ಶ್ರೀ ಮಹಾಂತೇಶ ಮಾದರ ಸರ್, ಶ್ರೀಮತಿ ರೂಪಾ ಟೀಚರ, ಶ್ರೀಮತಿ ಹೊಸಮನಿ ಟೀಚರ್ ಇವರೆಲ್ಲರಿಗೂ ವಂದನೆಗಳು.
ಮಕ್ಕಳು ಉತ್ಸುಕತೆಯಿಂದ ಸೂಕ್ತವಾದ ವೇಷಭೂಷಣ ಧರಿಸಲು ಪ್ರೋತ್ಸಾಹಿಸಿದ ಎಲ್ಲ ಪಾಲಕರಿಗೂ ಹಾಗೂ ಆ ಮಕ್ಕಳಿಗೆ ಅಭಿನಂದನೆಗಳು.
ವರದಿ:ವಿಠ್ಠಲ ತೇನಗಿ



