ಸರಕಾರಿ ಶಾಲೆ ಉಳಿಸಲು ಜನರ ಸಂಕಲ್ಪ ದೇಣಿಗೆ ಎತ್ತಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಮುಂದಾದ ಗ್ರಾಮಸ್ಥರು

ಸರಕಾರಿ ಶಾಲೆ ಉಳಿಸಲು ಜನರ ಸಂಕಲ್ಪ
ದೇಣಿಗೆ ಎತ್ತಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಮುಂದಾದ ಗ್ರಾಮಸ್ಥರು
ಸರಕಾರಿ ಶಾಲೆ ಉಳಿವಿಗೆ ಪ್ರೇರಣಾ ಅಭಿಯಾನದ ಮೂಲಕ ಜಾಗ್ರತಿ
ಗ್ರಾಮದ ಜನರ ಕಾರ್ಯಕ್ಕೆ ಮೆಚ್ಚುಗೆ
ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೂದಿಗೊಪ್ಪ ಗ್ರಾಮದ ಸರಕಾರಿ ಹಿರಿಯ ಉನ್ನತೀಕರಿಸಿ ಪ್ರಾಥಮಿಕ ಶಾಲೆಯನ್ನು ಉಳಿಸಲು ಗ್ರಾಮದ ಜನರು ಪಣ ತೊಟ್ಟಿದ್ದಾರೆ,ಸರಕಾರವೇ ಎಲ್ಲಾ ಮಾಡಬೇಕೆಂದು ಕಾಯದೇ ಗ್ರಾಮದ ಜನರು ಶಾಲೆಯನ್ನು ಹೀಗೆ ಬಿಟ್ರೆ ಬಿದ್ದೇ ಹೋಗುತ್ತೆ ಎಂದು ಮನಗಂಡ ಜನರು ಶಾಲೆಗೆ ಹೊಸ ರೂಪ ಕೊಡಲು ಮುಂದಾಗಿರುವುದು ಹೆಮ್ಮೆಯ ವಿಷಯವಾಗಿದೆ.
ಶ್ರೀ.ಫಕ್ಕೀರಪ್ಪಾಅಣ್ಣ.ಯರಗಣವಿ ಇವರ ನೇತೃತ್ವದಲ್ಲಿ ನಾವೆಲ್ಲರೂ ಕಲಿತ ಶಾಲೆ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೂದಿಗೊಪ್ಪ
ನನ್ನ ಶಾಲೆ ನನ್ನ ಹೆಮ್ಮೆ
ನಮ್ಮ ಶಾಲೆಗೆ ಮೂಲಭೂತ ಸೌಲಭ್ಯಗಳ ನೀಡಲು ನಿರ್ಧರಿಸಲಾಗಿದೆ, ದಯವಿಟ್ಟು ಇಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಕೈಲಾದಷ್ಟು ಸಹಾಯ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ..
ಊರಿನ ದೇವಸ್ಥಾನ ಜೀರ್ಣೋದ್ಧಾರವಾದರೆ ಒಂದು ಊರು ಉದ್ಧಾರವಾದಂತೆ…. ಆದರೆ ಒಂದು ಶಾಲೆ ಜೀರ್ಣೋದ್ಧಾರವಾದರೆ ಅಲ್ಲಿ ಕಲಿತ ಮಕ್ಕಳುಭವ್ಯ ಭಾರತವನ್ನು ಬೆಳಗಬಹುದು… ಎಂಬ ದೂರದೃಷ್ಟಿಂದ ಶತಮನೋತ್ಸವ ಪೂರೈಸಿದ ಕಾಲ ಬಂದಿದೆ.


ನಮ್ಮ ಬೂದಿಗೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದೇವೆ. ಶಾಲೆಯ ಹಳೇ ಕಟ್ಟಡ ಶಿಥಿಲಗೊಂಡು ಧರಾಶಾಯಿಯಾಗುವ ಹಂತದಲ್ಲಿದ್ದು, ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದೇವೆ… *ಊರಿನ ದೇವಸ್ಥಾನ, ಮಂದಿರಗಳ ಉದ್ಧಾರ ಮಾಡುವಂತೆ ನಾವು ನಮ್ಮ ಅಕ್ಷರ ದೇಗುಲ ಜೀರ್ಣೋದ್ಧಾರದಲ್ಲಿ ನಾವೂ ಭಾಗಿಯಾಗೋಣ…
ನಮ್ಮ ಶಾಲೆ ನಮ್ಮ ಹೆಮ್ಮೆ..
ವಿಠ್ಠಲ ತೇನಗಿ
ಹಳೆಯ ವಿಧ್ಯಾರ್ಥಿ


