Politics
ಮುಂಜುಳಾ ಬಂಧನದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಬೆಂಗಳೂರು: ಉದ್ಯಮಿಯನ್ನು ಅಪಹರಿಸಿ ಐದು ಕೋಟಿ ರೂ. ಗೆ ಬೇಡಿಕೆ ಇಟ್ಟಿಟ್ಟ ಆರೋಪದ ಮೇಲೆ ಮಂಜುಳಾ ರಾಮಗನಟ್ಟಿ ಎಂಬ ಮಹಿಳೆ ಅರೆಸ್ಟ್ ಆಗಿದ್ದು, ಇವರು. ನಮ್ಮ ಆಪ್ತರು ಇದ್ದರೆ ಇರಬಹುದು.
ಇಲ್ಲ ಎಂದು ಹೇಳಲಾಗಲ್ಲ. ನಾವೇನು ಕಿಡ್ನ್ಯಾಪ್ ಮಾಡಲು ಹೇಳಿರುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಅವರಿಗೆ ಕಿಡ್ನ್ಯಾಪ್ ಮಾಡಲು ಹೇಳಿದ್ವಾ..? ಅದು ಆವರ ವೈಯಕ್ತಿಕ ಸಮಸ್ಯೆ. ಈ ರೀತಿಯ ಸಮಸ್ಯೆ ಬಂದಾಗ ನಮ್ಮ ಪೋಟೋ ಹರಿದಾಡುತ್ತವೆ ಎಂದರು.
ಪ್ರತಿದಿನ ನೂರು ಜನ ಬಂದು ಪೋಟೋ ರಚಿಸುತ್ತಾರೆ. ಯಾರು ಎಂದು ನೋಡಲು ಆಗುವುದಿಲ್ಲ. ಈಗಾಗಲೇ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



